
ಇಂದಾಪುರ (ಜಿಲ್ಲೆ ಪುಣೆ) – ಉಜನಿ ಅಣೆಕಟ್ಟು ಜಲಾನಯನ ಪ್ರದೇಶದ ಮಾಳವಾಡಿ ಕ್ರಮಾಂಕ ೨ ರಲ್ಲಿನ ಶಿಂಗಾಡೆವಸ್ತಿ ಪರಿಸರದ ಶ್ರೀನಾಥ ಮ್ಹಸ್ಕೋಬಾ ದೇವಸ್ಥಾನದಲ್ಲಿನ ಬೆಳ್ಳಿಯ ಸ್ವಯಂಭೂ ಮೂರ್ತಿ, ಬೆಳ್ಳಿಯ ಕುದುರೆ, ಜೋಗೇಶ್ವರೀದೇವಿಯ ಕೊರಳಿನ ಚಿನ್ನದ ಮಂಗಳಸೂತ್ರ, ನಗದು ಹಣ ಮತ್ತು ಬಾಳುಮಾಮಾ ದೇವಸ್ಥಾನದ ಒಂದೂವರೆ ಕಿಲೋ ತೂಕದ ಬೆಳ್ಳಿಯ ಪಾದುಕೆಗಳು, ಹೀಗೆ ಎಲ್ಲವೂ ಕಳ್ಳತನವಾಗಿದೆ. ಅರ್ಚಕ ಅಣ್ಣಾ ಶಿಂಗಾಡೆ ಇವರು ಅಜ್ಞಾತ ಕಳ್ಳರ ವಿರುದ್ಧ ಇಂದಾಪುರ ಪೊಲೀಸು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
೧. ಅರ್ಚಕ ಅಣ್ಣಾ ಶಿಂಗಾಡೆ ಶ್ರೀನಾಥ ಮ್ಹಸ್ಕೋಬಾ ದೇವಸ್ಥಾನದ ಪಕ್ಕದಲ್ಲಿಯೇ ವಾಸಿಸುತ್ತಾರೆ. ಅವರು ಎಂದಿನಂತೆ ೧೪ ಮಾರ್ಚ್ ರಂದು ಮುಂಜಾನೆ ದೇವಸ್ಥಾನದ ಹತ್ತಿರ ಬಂದಾಗ ಅವರಿಗೆ ಬಾಗಿಲಿನ ಕೊಂಡಿ ಮತ್ತು ಬೀಗ ಒಡೆದ ಸ್ಥಿತಿಯಲ್ಲಿ ಕಂಡುಬಂದಿತು.
೨. ದೇವಸ್ಥಾನದಲ್ಲಿನ ಅನೇಕ ವಸ್ತುಗಳು ಕಳ್ಳತನವಾಗಿರುವುದು ಅವರ ಗಮನಕ್ಕೆ ಬಂದಿತು. ಅವರು ಕೇರಿಯ ಜನರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು, ಹಾಗೆಯೇ ದೇವಸ್ಥಾನದ ಸುತ್ತಮುತ್ತ ಈ ವಸ್ತುಗಳನ್ನು ಹುಡುಕುವ ಪ್ರಯತ್ನ ಮಾಡಿದರು.
೩. ದೇವಸ್ಥಾನದಲ್ಲಿನ ಬೆಳ್ಳಿಯ ಸಾಮಗ್ರಿಗಳು ಕಳ್ಳತನವಾಗಿರುವುದು ಖಚಿತವಾದ ನಂತರ ಅವರು ಇಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಸಂಪಾದಕೀಯ ನಿಲುವುಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂ ದೇವಸ್ಥಾನಗಳಲ್ಲಿ ಕಳ್ಳತನವಾಗುವುದು, ಸಮಾಜಘಾತಕರಿಗೆ ಪೊಲೀಸರ ಭಯ ಇಲ್ಲದಿರುವುದರ ದ್ಯೋತಕವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!