|

ಆಮಸ್ಟರಡ್ಯಾಮ್ (ನೆದರ್ಲೆಂಡ್ಸ್) – ದೇಶದ ಆಮಸ್ಟರಡ್ಯಾಮ್ ನ ಯಹೂದಿ ಸಮುದಾಯಕ್ಕೆ ಸೇರಿದ ಶಾಲೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಇದರಿಂದ ಶಾಲೆಯ ಕಟ್ಟಡಕ್ಕೆ ಅಪಾರ ಹಾನಿಯಾಗಿದೆ. ‘ಸ್ಕೈ ನ್ಯೂಸ್’ ವರದಿಯ ಪ್ರಕಾರ, ಆಮಸ್ಟರಡ್ಯಾಮ್ ನ ಮೇಯರ ಫೆಮ್ಕೆ ಹಾಲ್ಸೆಮಾ ಅವರು, ‘ಯಹೂದಿ ಸಮುದಾಯವನ್ನು ಗುರಿಯಾಗಿಸಿಕೊಂಡೇ ಈ ದಾಳಿ ಮಾಡಲಾಗಿದೆ’ ಎಂದು ಹೇಳಿದ್ದಾರೆ. ಆಮಸ್ಟರಡ್ಯಾಮ್ ನಲ್ಲಿನ ಯಹೂದಿಗಳು ತಮ್ಮ ಮೇಲೆ ಸತತವಾಗಿ ನಡೆಯುತ್ತಿರುವ ದಾಳಿಗಳನ್ನು ಎದುರಿಸಬೇಕಾಗುತ್ತಿರುವುದು ಒಪ್ಪುವಂತಹದ್ದಲ್ಲ ಎಂದು ಅವರು ಹೇಳಿದರು
೧. ಶಾಲೆಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು; ಆದರೆ ಈ ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
೨. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಯಹೂದಿ ಸಮುದಾಯದ ಶಾಲೆಯ ಮೇಲೆ ನಡೆದ ಈ ದಾಳಿಯು ತೀವ್ರ ಆತಂಕಕ್ಕೆ ಕಾರಣವಾಗಿದೆ.
೩. ಈ ಶಾಲೆಯಲ್ಲಿ ಸ್ಫೋಟ ಸಂಭವಿಸುವ ಒಂದು ದಿನದ ಮೊದಲು ರೊಟರಡ್ಯಾಮ್ ನಲ್ಲಿಯೂ ಯಹೂದಿ ಪ್ರಾರ್ಥನಾ ಮಂದಿರದಲ್ಲಿ ಸ್ಫೋಟ ನಡೆದಿತ್ತು. ಅಧಿಕಾರಿಗಳ ಪ್ರಕಾರ, ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಬೆಂಕಿಯನ್ನು ತಕ್ಷಣವೇ ನಂದಿಸಲಾಗಿದೆ.
೪. ನೆದರಲೆಂಡ್ಸ್ ನ ಯಹೂದಿ ಸಂಘಟನೆಯೊಂದು ‘ಎಕ್ಸ್’ನಲ್ಲಿ ಮಾಹಿತಿ ನೀಡಿ, ಇಸ್ಲಾಮಿಸ್ಟ್ ಗುಂಪೊಂದು ರೊಟರಡ್ಯಾಮ್ ನ ಪ್ರಾರ್ಥನಾ ಮಂದಿರದ ಸ್ಫೋಟದ ವಿಡಿಯೋವನ್ನು ಆನ್ ಲೈನ್ ನಲ್ಲಿ ಹಂಚಿಕೊಂಡು ಆಕ್ರಮಣದ ಹೊಣೆ ಹೊತ್ತುಕೊಂಡಿದೆ ಎಂದು ಹೇಳಿದೆ. ಸಂಘಟನೆಯ ಪ್ರಕಾರ, ಇದೇ ಗುಂಪು ಬೆಲ್ಜಿಯಂ ದೇಶದ ಲೀಜ್ ನಗರದಲ್ಲಿ ಯಹೂದಿ ಪ್ರಾರ್ಥನಾ ಮಂದಿರದ ಮೇಲೆ ನಡೆದ ಆಕ್ರಮಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿತ್ತು.
ಸಂಪಾದಕೀಯ ನಿಲುವುದಾಳಿಕೋರರು ಯಾರು? ಎಂಬುದು ನೆದರಲೆಂಡ್ಸ್ ಸರಕಾರವು ಕಂಡುಹಿಡಿಯದಿದ್ದರೂ ಇಸ್ರೇಲ್ ಅವರನ್ನು ಹುಡುಕಿ ಯಮಪುರಿಗೆ ಅಟ್ಟುವುದಂತೂ ನಿಶ್ಚಿತ. |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation