LPG Black Marketing : ಹಾಪುಡ್ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಅಬ್ದುಲ್ ರೆಹಾನ್ ಅವರ ಮನೆಯಿಂದ ೫೫ ಸಿಲಿಂಡರ್‌ ವಶ

​ಗ್ಯಾಸ್ ಸಿಲಿಂಡರ್ ನ ಆಕ್ರಮ ಮಾರುಕಟ್ಟೆ

ಹಾಪುಡ್ (ಉತ್ತರ ಪ್ರದೇಶ) – ದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಅಭಾವವಿರುವಾಗ, ಕಪ್ಪು ದಂಧೆ ಮಾಡುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಹಾಪುಡ್‌ನಲ್ಲಿ ಪೊಲೀಸರು ಸಮಾಜವಾದಿ ಪಕ್ಷದ ನಾಯಕ ಅಬ್ದುಲ್ ರೆಹಾನ್ ಅವರ ಮನೆಯಿಂದ ೫೫ ಭರ್ತಿ ಇರುವ ಮತ್ತು ಹಲವಾರು ಖಾಲಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರ ಹೇಳಿಕೆಯ ಪ್ರಕಾರ, ರೆಹಾನ್ ಅವರು ಪ್ರತಿಯೊಂದು ಸಿಲಿಂಡರ್ ಅನ್ನು ೨,೦೦೦ ರೂಪಾಯಿಗಳವರೆಗೆ ಮಾರಾಟ ಮಾಡುತ್ತಿದ್ದರು. ಪೊಲೀಸರು ಸದ್ಯ ರೆಹಾನ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಆಪತ್ಕಾಲದಲ್ಲಿ ಜನರನ್ನು ಲೂಟಿ ಮಾಡುವ ಇಂತಹವರನ್ನು ಯುದ್ಧಪೀಡಿತ ದೇಶವಾದ ಇರಾನ್‌ಗೇ ಕಳುಹಿಸಬೇಕೆಂದು ಜನರಿಗೆ ಅನ್ನಿಸುತ್ತದೆ !