|

ಮುಂಬಯಿ, ಮಾರ್ಚ್ ೧೨ (ವಾರ್ತೆ) – ಮಹಾರಾಷ್ಟ್ರದ ಗೃಹ ಇಲಾಖೆಗೆ ಸಂಬಂಧಿಸಿದಂತೆ ‘ಸಮರ್ಥನ’ ಸಂಸ್ಥೆಯ ‘ಆಯವ್ಯಯ ಅಧ್ಯಯನ ಕೇಂದ್ರ’ವು ಸಲ್ಲಿಸಿರುವ ಟಿಪ್ಪಣಿಯೊಂದರಿಂದ ರಾಜ್ಯದಲ್ಲಿನ ಅಪರಾಧಗಳ ಭಯಾನಕ ಸ್ಥಿತಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಘಟನೆಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ (ದೋಷ ಸಾಬೀತಾಗುವ ದರ) ಆತಂಕಕಾರಿಯಾದ ರೀತಿಯಲ್ಲಿ ಅಲ್ಪವಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
ವರದಿಯಲ್ಲಿನ ಭೀಕರ ವಾಸ್ತವ
೧. ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಒಟ್ಟು ೪೭ ಸಾವಿರದ ೯೦೧ ಅಪರಾಧಗಳು ದಾಖಲಾಗಿವೆ. ಆಘಾತಕಾರಿ ವಿಷಯವೆಂದರೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ ದೋಷ ಸಾಬೀತಾಗುವ ದರ ಕೇವಲ ಶೇ. ೯.೬ ರಷ್ಟು ಮಾತ್ರ ಇದೆ. ಶೇ. ೯೫.೧ ರಷ್ಟು ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇವೆ.
೨. ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಮಹಾರಾಷ್ಟ್ರವು ದೇಶಮಟ್ಟದಲ್ಲಿ ಮಧ್ಯಪ್ರದೇಶದ ಜೊತೆಗೆ (೨೨ ಸಾವಿರದ ೩೯೦ ಅಪರಾಧಗಳು) ಮೊದಲ ಎರಡು ರಾಜ್ಯಗಳ ಪಟ್ಟಿಯಲ್ಲಿದೆ. ಇದರಲ್ಲಿ ಪ್ರಮುಖವಾಗಿ ಅಪಹರಣದ ಘಟನೆಗಳ ಪ್ರಮಾಣ ದೊಡ್ಡದಿದೆ.
೩. ರಾಜ್ಯದಲ್ಲಿ ೨೦೨೩ ರಲ್ಲಿ ೨ ಸಾವಿರದ ೨೦೮ ಕೊಲೆ ಘಟನೆಗಳು ನಡೆದಿದ್ದರೆ, ೩ ಸಾವಿರದ ೬೧೮ ಕೊಲೆ ಪ್ರಯತ್ನದ ಪ್ರಕರಣಗಳು ದಾಖಲಾಗಿವೆ. ಹಾಗೆಯೇ ೧೩ ಸಾವಿರದ ೯೦೬ ಅಪಹರಣ ಪ್ರಕರಣಗಳು ಬೆಳಕಿಗೆ ಬಂದಿವೆ.
೪. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ೯೬೦ ಅಪರಾಧಗಳು ದಾಖಲಾಗಿದ್ದು ಮುಂಬಯಿ, ಪುಣೆ ಮತ್ತು ನಾಗಪುರದಂತಹ ಮಹಾನಗರಗಳಲ್ಲಿ ಸೈಬರ್ ಅಪರಾಧಗಳಲ್ಲಿ ಶೇ. ೩೯ ರಷ್ಟು ಹೆಚ್ಚಳವಾಗಿದೆ. ‘ಡಿಜಿಟಲ್ ಅರೆಸ್ಟ್’ ಮೂಲಕ ೧೦ ತಿಂಗಳಲ್ಲಿ ೫೮ ಕೋಟಿ ರೂಪಾಯಿಗಳಿಗೂ ಅಧಿಕ ಆರ್ಥಿಕ ವಂಚನೆಯಾಗಿದೆ.
೫. ಭ್ರಷ್ಟಾಚಾರ ತಡೆ ಕಾಯ್ದೆಯಡಿ ೭೬೩ ಅಪರಾಧಗಳು ದಾಖಲಾಗಿದ್ದು, ಇದರಲ್ಲಿ ಬಲೆ ಬೀಸಿ ನಡೆಸಿದ ಕಾರ್ಯಾಚರಣೆಗಳು ಪರಿಣಾಮಕಾರಿಯಾಗಿವೆ. ಇದರಲ್ಲಿ ದೋಷಿಗಳೆಂದು ಕಂಡುಬಂದ ೬೩೮ ಸರಕಾರಿ ನೌಕರರ ಮೇಲೆ ಇಲಾಖಾ ಮಟ್ಟದಲ್ಲಿ ಶಿಸ್ತು ಕ್ರಮ ಜರುಗಿಸಲಾಗಿದೆ. ಇನ್ನೊಂದೆಡೆ, ಪೊಲೀಸರ ವಿರುದ್ಧ ೫ ಸಾವಿರದ ೩೪೨ ದೂರುಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ ಕೇವಲ ೧ ಸಾವಿರದ ೩೪ ಪ್ರಕರಣಗಳಲ್ಲಿ ಮಾತ್ರ ಎಫ್.ಐ.ಆರ್ ದಾಖಲಾಗಿವೆ.
ನ್ಯಾಯಾಂಗ ವಿಳಂಬದ ಅಡ್ಡಿ!
ಪೊಲೀಸರ ತನಿಖೆ ಮತ್ತು ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವ ವೇಗ (ಶೇ. ೯೦ ಕ್ಕಿಂತ ಹೆಚ್ಚು) ಉತ್ತಮವಾಗಿದ್ದರೂ, ನ್ಯಾಯಾಂಗ ಪ್ರಕ್ರಿಯೆಯಲ್ಲಿನ ‘ಬಾಟಲ್‌ನೆಕ್’ (ಅಡ್ಡಿ) ಕಾರಣದಿಂದ ಸಂತ್ರಸ್ತರಿಗೆ ಸಕಾಲದಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ನ್ಯಾಯಾಧೀಶರ ಕೊರತೆ ಮತ್ತು ಪದೇ ಪದೇ ಮುಂದೂಡಲ್ಪಡುವ ವಿಚಾರಣೆಯ ದಿನಾಂಕಗಳಿಂದ ‘ನ್ಯಾಯ ಸಿಗುವಲ್ಲಿನ ವಿಳಂಬವು ನ್ಯಾಯವನ್ನು ನಿರಾಕರಿಸಿದಂತೆ’ ಎಂಬ ತೀರ್ಮಾನಕ್ಕೆ ವರದಿಯು ಬಂದಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!