|

ಗೈರ್ಸೇನ್ (ಉತ್ತರಾಖಂಡ್) – ಹಿಂದೂಗಳಿಗೆ ಅತ್ಯಂತ ಪೂಜನೀಯವಾಗಿರುವ ಗಂಗಾನದಿಯ ಶುದ್ಧೀಕರಣಕ್ಕಾಗಿ ‘ನಮಾಮಿ ಗಂಗೆ’ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದರೂ, ಈ ನದಿಯು ಭಾರೀ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವುದು ಕಂಡುಬಂದಿದೆ. ದೇವಪ್ರಯಾಗದಿಂದ ಹರಿದ್ವಾರದವರೆಗಿನ ಗಂಗಾ ನದಿಯ ನೀರಿನ ಸ್ಥಿತಿಗತಿಯ ಕುರಿತಾದ ಭಾರತೀಯ ನಿಯಂತ್ರಕರು ಮತ್ತು ಮಹಾಲೇಖಪಾಲಕರ (ಸಿಎಜಿ – ‘ಕ್ಯಾಗ್’) ವರದಿಯು ಈಗ ಹೊರಬಂದಿದೆ. ಈ ವರದಿಯ ಪ್ರಕಾರ, ಗಂಗಾ ನದಿಯಲ್ಲಿ ರೋಗ ಹರಡಲು ಕಾರಣವಾಗುವ ‘ಕೋಲಿಫಾರ್ಮ್’ ಬ್ಯಾಕ್ಟೀರಿಯಾಗಳ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ 32 ಪಟ್ಟು ಹೆಚ್ಚಿರುವುದು ಪತ್ತೆಯಾಗಿದೆ. ಇದಲ್ಲದೆ, ಅನೇಕ ಕೊಳಚೆ ನೀರು ಸಂಸ್ಕರಣಾ ಘಟಕಗಳು (STP) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂಬುದು ತಿಳಿದುಬಂದಿದೆ. 2018 ರಿಂದ 2023 ರ ಅವಧಿಯಲ್ಲಿ ಉತ್ತರಾಖಂಡದಲ್ಲಿ ‘ನಮಾಮಿ ಗಂಗೆ’ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸುವಾಗ ಈ ಲೆಕ್ಕಪರಿಶೋಧನೆ ನಡೆಸಲಾಗಿದೆ.
🚨 CAG Report Exposes Alarming Pollution in Maa Ganga 🌊
📊 ‘Coliform’ bacteria levels in the Ganga are 32 times higher than the permissible limit.
⚠️ Key Findings:
▪️ Administrative negligence highlighted in the report
▪️ Only 16% of funds under the Namami Gange initiative… pic.twitter.com/GrpVr8yWKw— Sanatan Prabhat (@SanatanPrabhat) March 12, 2026
ವರದಿಯ ಪ್ರಮುಖ ಅಂಶಗಳು !
ಅಂದಾಜು ಶೇ. 32% ರಷ್ಟು ಕೊಳಚೆ ನೀರನ್ನು ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸದೆಯೇ ನೇರವಾಗಿ ಗಂಗೆಗೆ ಬಿಡಲಾಗುತ್ತಿದೆ.
ಗಂಗಾ ನದಿಯ ದಡದಲ್ಲಿರುವ ನಗರಗಳಲ್ಲಿ ಈ ಯೋಜನೆಯ ಅನೇಕ ಅಂಶಗಳನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲ.
ಯೋಜನೆಯಡಿ ಕೈಗೊಳ್ಳಲಾದ ವೃಕ್ಷಾರೋಪಣ (ಸಸಿ ನೆಡುವ) ಕಾರ್ಯಗಳಲ್ಲೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಯೋಜನೆಗೆ ನಿಗದಿಪಡಿಸಿದ ಒಟ್ಟು ವೆಚ್ಚದಲ್ಲಿ ಕೇವಲ ಶೇ. 16% ರಷ್ಟು ಹಣವನ್ನು ಮಾತ್ರ ಪರಿಣಾಮಕಾರಿಯಾಗಿ ಬಳಸಲಾಗಿದೆ.
ಕಲುಷಿತ ನೀರು ಮತ್ತು ಕಳಪೆ ನೈರ್ಮಲ್ಯದಿಂದಾಗಿ ಅತಿಸಾರ, ಭೇದಿ, ‘ಹೆಪಟೈಟಿಸ್ ಎ’, ಟೈಫಾಯಿಡ್ ಮತ್ತು ಪೋಲಿಯೊದಂತಹ ಅನೇಕ ಗಂಭೀರ ಕಾಯಿಲೆಗಳು ಹರಡುವ ಸಾಧ್ಯತೆಯಿದೆ.
ಸಂಪಾದಕೀಯ ನಿಲುವು
|
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ