|

ಜಮ್ಮು (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಮಾರ್ಚ್ 11ರ ರಾತ್ರಿ ವಿವಾಹ ಸಮಾರಂಭವೊಂದರಲ್ಲಿ ಕಮಲ್ ಸಿಂಗ್ ಎಂಬ 63 ವರ್ಷದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ಗುಂಡು ಅವರಿಗೆ ತಗುಲಿಲ್ಲ. ಇದೇ ಸಮಯದಲ್ಲಿ ಡಾ. ಅಬ್ದುಲ್ಲಾ ಅವರ ಅಂಗರಕ್ಷಕರು ತಕ್ಷಣ ಕಾರ್ಯಪ್ರವೃತ್ತರಾಗಿ ದಾಳಿಕೋರನನ್ನು ಹಿಡಿದಿದ್ದಾರೆ. ಘಟನೆಯ ಸಮಯದಲ್ಲಿ ಡಾ. ಅಬ್ದುಲ್ಲಾ ಅವರೊಂದಿಗೆ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಕೂಡ ಇದ್ದರು. ಪೊಲೀಸ್ ಈ ದಾಳಿಯ ಹಿಂದಿನ ಕಾರಣವನ್ನು ಹುಡುಕುತ್ತಿದ್ದಾರೆ.
1. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ಇದರಲ್ಲಿ ದಾಳಿಕೋರ ಕಮಲ್ ಸಿಂಗ್ ಜಾಮ್ವಾಲ್ ಹಿಂದಿನಿಂದ ಬಂದು ಫಾರೂಕ್ ಅವರ ತಲೆಗೆ ಪಿಸ್ತೂಲು ಹಿಡಿದಿರುವುದು ಕಂಡುಬಂದಿದೆ. ಅಂಗರಕ್ಷಕರು ಸಿಂಗ್ ಅವರ ಕೈಯನ್ನು ಪಕ್ಕಕ್ಕೆ ತಳ್ಳಿದ ಕಾರಣ ಗುಂಡು ಗಾಳಿಯಲ್ಲಿ ಹಾರಿದೆ.
2. ಫಾರೂಕ್ ಅಬ್ದುಲ್ಲಾ, ಸುರಿಂದರ್ ಚೌಧರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಇತರ ಹಿರಿಯ ನಾಯಕರು ಕಾರ್ಯಕರ್ತ ಸುರ್ಜಿತ್ ಸಿಂಗ್ ಅವರ ಮಗನ ಮದುವೆಯಲ್ಲಿ ಪಾಲ್ಗೊಂಡಿದ್ದರು. ಗುಂಡು ಹಾರಿಸಿದ ಕಮಲ್ ಸಿಂಗ್, ಸುರ್ಜಿತ್ ಸಿಂಗ್ ಅವರ ಸೋದರ ಸಂಬಂಧಿಯಾಗಿದ್ದಾನೆ. ಈತ ಉದ್ಯಮಿಯಾಗಿದ್ದು, ಹಳೆ ನಗರದಲ್ಲಿ ಕೆಲವು ಮಳಿಗೆಗಳನ್ನು ಹೊಂದಿದ್ದಾನೆ.
3. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಕಮಲ್ ಸಿಂಗ್ ಕಳೆದ ಹಲವು ವರ್ಷಗಳಿಂದ ಪರವಾನಗಿ ಹೊಂದಿದ ಆಯುಧವನ್ನು ಇಟ್ಟುಕೊಂಡಿದ್ದಾನೆ.
“20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನಿಸುತ್ತಿದ್ದೆ!” – ಆರೋಪಿ ಒಪ್ಪಿಗೆ
ಆರೋಪಿ ಕಮಲ್ ಸಿಂಗ್ ಜಮ್ಮುವಿನ ನಿವಾಸಿಯಾಗಿದ್ದಾನೆ. “ನಾನು ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೆ” ಎಂದು ಆತ ಒಪ್ಪಿಕೊಂಡಿದ್ದಾನೆ.
“‘ಝಡ್ ಪ್ಲಸ್’ ಭದ್ರತೆ ಇರುವಾಗ ಪಿಸ್ತೂಲು ಹಿಡಿದು ಹತ್ತಿರ ಬರಲು ಹೇಗೆ ಸಾಧ್ಯ?” – ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರಶ್ನೆ
ಡಾ. ಫಾರೂಕ್ ಅಬ್ದುಲ್ಲಾ ಅವರ ಪುತ್ರ ಮತ್ತು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ‘ಎಕ್ಸ್’ನಲ್ಲಿ (ಟ್ವಿಟರ್), “ಒಬ್ಬ ವ್ಯಕ್ತಿ ಪಿಸ್ತೂಲು ಹಿಡಿದು ತೀರಾ ಹತ್ತಿರ ಬಂದು ಗುಂಡು ಹಾರಿಸಿದ್ದಾನೆ. ದೇವರಿಗೆ ಧನ್ಯವಾದಗಳು, ನನ್ನ ತಂದೆ ಕೂದಲೆಳೆ ಅಂತರದಲ್ಲಿ ಪಾರುಗಿದ್ದಾರೆ. ಆದರೆ ಪ್ರಶ್ನೆಯೇನೆಂದರೆ, ಝಡ್ ಪ್ಲಸ್ ಮತ್ತು ಎನ್‌ಎಸ್‌ಜಿ ಭದ್ರತೆ ಇರುವ ಮಾಜಿ ಮುಖ್ಯಮಂತ್ರಿಯ ಇಷ್ಟು ಹತ್ತಿರ ಒಬ್ಬ ವ್ಯಕ್ತಿ ಹೇಗೆ ತಲುಪಿದ? ಈ ವ್ಯಕ್ತಿ ನನಗೆ ಪರಿಚಯವೂ ಇಲ್ಲ.” ಎಂದು ಬರೆದಿದ್ದಾರೆ.
“ಇದು ಭದ್ರತೆಯ ದೊಡ್ಡ ಲೋಪ!” – ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ
ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಮಾತನಾಡಿ, “ಇಷ್ಟು ದೊಡ್ಡ ತಪ್ಪು ಹೇಗೆ ಸಂಭವಿಸಿತು? ಎಂಬುದನ್ನು ಪೊಲೀಸರನ್ನು ಕೇಳಬೇಕು. ಅಲ್ಲಿ ಸ್ಥಳೀಯ ಪೊಲೀಸರು ಯಾರೂ ಇರಲಿಲ್ಲ. ಭದ್ರತಾ ವ್ಯವಸ್ಥೆಯಲ್ಲಿ ಇದು ಅತ್ಯಂತ ದೊಡ್ಡ ಲೋಪವಾಗಿದೆ,” ಎಂದಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ