ರೆಸ್ಟೋರೆಂಟ್‌ ಮತ್ತು ಅಂಗಡಿಗಳ ಮೇಲೂ ಆಗುತ್ತಿವೆ ದಾಳಿ !

ಲಂಡನ್‌ ನಲ್ಲಿ ಭಾರತೀಯರನ್ನು ಗುರಿ ಮಾಡುತ್ತಿರುವ ಮತಾಂಧ ಮುಸಲ್ಮಾನ ಯುವಕರು

ಲಂಡನ (ಬ್ರಿಟನ್) – ಲಂಡನ್ ನಗರದ ವೆಂಬ್ಲಿ ಪರಿಸರದಲ್ಲಿ ಭಾರತೀಯ ಮೂಲದ ಅಂಗಡಿಕಾರರು ಮತ್ತು ರೆಸ್ಟೋರೆಂಟ್ ಮಾಲೀಕರನ್ನು ಗುರಿ ಮಾಡಿ ಧ್ವಂಸ ಹಾಗೂ ಹಲ್ಲೆ ನಡೆಸಿದ ಘಟನೆಗಳು ಬೆಳಕಿಗೆ ಬಂದಿವೆ. ಈ ಕುರಿತು ಪ್ರಸಾರವಾದ ವಿಡಿಯೋದಲ್ಲಿ ಮುಖವಾಡ ಧರಿಸಿದ ಮತಾಂಧ ಮುಸಲ್ಮಾನ ಯುವಕರ ಗುಂಪೊಂದು ಅಂಗಡಿಗಳಿಗೆ ನುಗ್ಗಿ ಸಾಮಾನುಗಳನ್ನು ಎಸೆಯುತ್ತಿರುವುದು ಮತ್ತು ರೆಸ್ಟೋರೆಂಟ್‌ನಲ್ಲಿ ಧ್ವಂಸ ಮಾಡುತ್ತಿರುವುದು ಕಂಡುಬಂದಿದೆ. ಸ್ಥಳೀಯರ ಪ್ರಕಾರ, ದಾಳಿಕೋರರು ಹಠಾತ್ತನೆ ಬರುತ್ತಾರೆ, ಕೆಲವೇ ನಿಮಿಷಗಳಲ್ಲಿ ಹಾನಿ ಮಾಡುತ್ತಾರೆ ಮತ್ತು ನಂತರ ಅಲ್ಲಿಂದ ಓಡಿಹೋಗುತ್ತಾರೆ. ಈ ಘಟನೆಗಳ ನಂತರ ಪರಿಸರದಲ್ಲಿ ಭೀತಿಯ ವಾತಾವರಣ ಉಂಟಾಗಿದೆ.

ವಾರದಲ್ಲಿ ೨ ಬಾರಿ ರೆಸ್ಟೋರೆಂಟ್ ಮೇಲೆ ದಾಳಿ

ವೆಂಬ್ಲಿಯ ಈಲಿಂಗ್ ರೋಡ್ ಪರಿಸರದ ಜನಪ್ರಿಯ ಭಾರತೀಯ ರೆಸ್ಟೋರೆಂಟ್ ‘ಮಾಣಿಕ್ ಚೌಕ್’ ಮೇಲೆ ಕಳೆದ ವಾರದಲ್ಲಿ ೨ ಬಾರಿ ದಾಳಿ ನಡೆದಿದೆ. ಮಾರ್ಚ್ ೫ ಮತ್ತು ಮಾರ್ಚ್ ೭ ರಂದು ಮುಖವಾಡ ಧರಿಸಿದ ಯುವಕರ ಗುಂಪೊಂದು ರೆಸ್ಟೋರೆಂಟ್‌ ಗೆ ನುಗ್ಗಿ ಅಲ್ಲಿ ಭಾರಿ ಪ್ರಮಾಣದಲ್ಲಿ ಧ್ವಂಸ ಮಾಡಿತು. ಈ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಅನೇಕ ಯುವಕರು ಮುಖ ಮುಚ್ಚಿಕೊಂಡು ರೆಸ್ಟೋರೆಂಟ್ ಪ್ರವೇಶಿಸುವುದು ಮತ್ತು ಮೇಜು-ಕುರ್ಚಿಗಳನ್ನು ಉರುಳಿಸುವುದು ಕಂಡುಬರುತ್ತದೆ. ನೆಲದ ಮೇಲೆ ಆಹಾರ ಮತ್ತು ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ದಾಳಿ ಮಾಡಿದ ಗುಂಪು ಮಸೀದಿಯ ಬಳಿಯಿಂದ ಬಂದಿತ್ತು ! – ಅಂಗಡಿಕಾರರ ಹೇಳಿಕೆ

ಸ್ಥಳೀಯ ಅಂಗಡಿಕಾರರ ಪ್ರಕಾರ ಸುಮಾರು ೧೫ ರಿಂದ ೨೦ ಯುವಕರ ಗುಂಪೊಂದು ಮಸೀದಿಯ ಬಳಿಯಿಂದ ಬಂದಿತ್ತು. ಬಂದ ಕೂಡಲೇ ಅವರು ರೆಸ್ಟೋರೆಂಟ್ ಮೇಲೆ ಆಕ್ರಮಣ ಆರಂಭಿಸಿದರು. ಅವರು ಯಾರೊಂದಿಗೂ ಮಾತನಾಡದೆ ನೇರವಾಗಿ ಸಾಮಾನುಗಳನ್ನು ಒಡೆಯಲು ಶುರು ಮಾಡಿದರು. ಈ ಸಮಯದಲ್ಲಿ ಒಬ್ಬ ಭಾರತೀಯ ವ್ಯಕ್ತಿಯು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದಾಗ ಅವರ ಮೇಲೆ ಬಾಟಲಿಯಿಂದ ದಾಳಿ ಮಾಡಿದರು. ಈ ಘಟನೆಯಲ್ಲಿ ಅನೇಕರು ಗಾಯಗೊಂಡರು.

ಹಣ್ಣು ಮತ್ತು ತರಕಾರಿ ಅಂಗಡಿಗಳಲ್ಲೂ ಗದ್ದಲ

ಮಾರ್ಚ್ ೬ ರಂದು ಮತ್ತೊಂದು ವಿಡಿಯೋ ಪ್ರಸಾರವಾಯಿತು, ಅದರಲ್ಲಿ ಮುಖವಾಡ ಧರಿಸಿದ ಯುವಕರು ‘ಪನೇಸರ್ ಫುಡ್ ಆಂಡ್ ವೈನ್’ ಹೆಸರಿನ ಅಂಗಡಿಯ ಹೊರಗೆ ಇಟ್ಟಿದ್ದ ಹಣ್ಣು ಮತ್ತು ತರಕಾರಿಗಳ ಪೆಟ್ಟಿಗೆಗಳನ್ನು ಎಸೆಯುತ್ತಿರುವುದು ಕಂಡುಬರುತ್ತದೆ. ಅವರು ಸಾಮಗ್ರಿಗಳನ್ನು ನೆಲಕ್ಕೆ ಹಾಕಿ ಕಾಲಿನಿಂದ ತುಳಿದರು. ಸ್ಥಳೀಯರ ಪ್ರಕಾರ ದಾಳಿಕೋರರು ಮೊದಲು ಅಂಗಡಿಗಳಿಗೆ ಹಾನಿ ಮಾಡುತ್ತಾರೆ ಮತ್ತು ನಂತರ ಅದರ ವಿಡಿಯೋ ಮಾಡಿ ಅಲ್ಲಿಂದ ಹೊರಟು ಹೋಗುತ್ತಾರೆ.

ಗುಜರಾತಿ ಮೂಲದ ವ್ಯಕ್ತಿಯ ಮೇಲೆ ಚಾಕುವಿನಿಂದ ದಾಳಿ

ಮಾರ್ಚ್ ೯ ರ ರಾತ್ರಿ ಈಲಿಂಗ್ ರೋಡ್‌ ನಲ್ಲಿ ಗುಜರಾತಿ ಮೂಲದ ಒಬ್ಬ ವ್ಯಕ್ತಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದರು. ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರ ಪ್ರಕಾರ, ಇದು ಅದೇ ಗುಂಪಾಗಿರಬಹುದು, ಅದು ಕಳೆದ ವಾರ ಹ್ಯಾರೋದಲ್ಲಿ ಹೋಳಿ ಆಚರಿಸುತ್ತಿದ್ದ ಭಕ್ತರ ಮೇಲೆ ದಾಳಿ ನಡೆಸಿತ್ತು.

ಪೊಲೀಸರಿಂದ ತನಿಖೆ ಪ್ರಗತಿಯಲ್ಲಿ

ಪೊಲೀಸ್ ವಕ್ತಾರರು ಮಾತನಾಡಿ, ಯಾವುದೇ ವ್ಯಾಪಾರಿ ಅಥವಾ ಸಮುದಾಯವನ್ನು ಹೆದರಿಸುವ ಪ್ರಯತ್ನವನ್ನು ಖಂಡಿತವಾಗಿಯೂ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾರಲ್ಲಾದರೂ ವಿಡಿಯೋ ಅಥವಾ ಮಾಹಿತಿ ಇದ್ದರೆ ತಕ್ಷಣವೇ ಅಧಿಕಾರಿಗಳಿಗೆ ನೀಡಬೇಕು, ಇದರಿಂದ ಆರೋಪಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪೊಲೀಸರು ಜನರಿಗೆ ಕರೆ ನೀಡಿದ್ದಾರೆ.

ಇದಕ್ಕೂ ಮೊದಲು ಹೋಳಿ ಉತ್ಸವದಲ್ಲಿ ದಾಳಿ ಮಾಡಲಾಗಿತ್ತು ! : ಸಂಸತ್ತಿನಲ್ಲಿ ಪ್ರಶ್ನೆ ಎತ್ತಲಾಗಿದೆ

ಈ ಹಿಂದೆ ಲಂಡನ್ ಸಮೀಪದ ಹ್ಯಾರೋ ಪರಿಸರದಲ್ಲಿ ಹೋಳಿ ಉತ್ಸವದ ಸಂದರ್ಭದಲ್ಲೂ ಕೆಲವು ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದರು. ಈ ವಿಷಯವನ್ನು ಸ್ಥಳೀಯ ಸಂಸದರು ಬ್ರಿಟನ್ ಸಂಸತ್ತಿನಲ್ಲಿಯೂ ಪ್ರಸ್ತಾಪಿಸಿದ್ದರು. ಸಂಸದ ಬಾಬ್ ಬ್ಲ್ಯಾಕ್‌ಮನ್ ಅವರು ಮಾತನಾಡಿ, ಹೋಳಿ ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಹಿಂದೂಗಳ ಸುರಕ್ಷತೆಗೆ ಅಪಾಯ ಉಂಟಾಗಿತ್ತು ಎಂದು ತಿಳಿಸಿದ್ದರು. ೨೦ ದಾಳಿಕೋರರಲ್ಲಿ ಇದುವರೆಗೆ ಕೇವಲ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ.