|

ಚಂಡೀಗಢ – ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಮೂಲಕ ಆಕ್ರಮಣ ನಡೆಯುವ ಸಾಧ್ಯತೆಯಿರುವುದರಿಂದ, ಅಲ್ಲಿನ ದೇಶಗಳು ಈ ದಾಳಿಯಿಂದ ರಕ್ಷಿಸಿಕೊಳ್ಳಲು ಸಿದ್ಧತೆಗಳನ್ನು ಆರಂಭಿಸಿವೆ. ಬಹರೇನ್ ದೇಶದ ಔಷಧ ತಯಾರಿಕಾ ಕ್ಷೇತ್ರದ ಏಜೆಂಟ್ ಒಬ್ಬರು ಚಂಡೀಗಢದ ಔಷಧ ಸಂಸ್ಥೆಯೊಂದನ್ನು ಸಂಪರ್ಕಿಸಿದ್ದಾರೆ. ಅವರು ಪರಮಾಣು ಶಸ್ತ್ರಾಸ್ತ್ರ ತುರ್ತು ಪರಿಸ್ಥಿತಿಯಲ್ಲಿ ಉಪಯುಕ್ತವಾಗುವ ‘ಪ್ರುಶಿಯನ್ ಬ್ಲೂ’ ಕ್ಯಾಪ್ಸೂಲ್‌ಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ. ‘ನೀವು ೧ ಕೋಟಿ ಕ್ಯಾಪ್ಸೂಲ್‌ಗಳನ್ನು ತಯಾರಿಸಲು ಶಕ್ತರಿದ್ದೀರಾ? ವಿವಿಧ ವಯೋಮಾನದ ಜನಸಂಖ್ಯೆಗೆ ಎಷ್ಟು ಡೋಸ್ ನೀಡಬೇಕಾಗುತ್ತದೆ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಔಷಧವು ಶರೀರದಲ್ಲಿನ ವಿಕಿರಣಶೀಲ ಅಂಶಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ.
ಸಂಸ್ಥೆಯ ನಿರ್ದೇಶಕಿ ಡಾ. ವೈಶಾಲಿ ಅಗರ್ವಾಲ್ ಅವರು ಮಾತನಾಡಿ, ಸದ್ಯ ಮಾತುಕತೆ ನಡೆಯುತ್ತಿದೆ. ಈ ವ್ಯವಹಾರವು ನಿಶ್ಚಯವಾದರೆ, ಔಷಧಗಳನ್ನು ಬಹರೇನ್, ಕುವೈತ್, ಕತಾರ್ ಮತ್ತು ಜೋರ್ಡಾನ್ ದೇಶಗಳಿಗೆ ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರುಶಿಯನ್ ಬ್ಲೂ ಎಂದರೇನು ?
‘ಪ್ರುಶಿಯನ್ ಬ್ಲೂ’ ಶರೀರವನ್ನು ಪ್ರವೇಶಿಸಿದ ವಿಕಿರಣಶೀಲ ‘ಸೀಸಿಯಂ-೧೩೭’ ಮತ್ತು ‘ಥಾಲಿಯಂ’ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಈ ಕ್ಯಾಪ್ಸೂಲ್ ಕರುಳಿನಲ್ಲಿ ಈ ಅಂಶಗಳೊಂದಿಗೆ ಬೆರೆತು ಅವುಗಳನ್ನು ಮಲದ ಮೂಲಕ ಶರೀರದಿಂದ ಹೊರಹಾಕುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ವಿಕಿರಣಶೀಲ ಮತ್ತು ಪರಮಾಣು ಶಸ್ತ್ರಾಸ್ತ್ರ ತುರ್ತು ಪರಿಸ್ಥಿತಿಯ ಕಾಲದ ಪ್ರಮುಖ ಔಷಧಗಳಲ್ಲಿ ಇದನ್ನು ಸೇರಿಸಿದೆ.
ಪೊಟ್ಯಾಸಿಯಮ್ ಅಯೋಡೈಡ್ ಕ್ಯಾಪ್ಸೂಲ್ ಗಳಿಗೂ ಬೇಡಿಕೆ
ಬಹರೇನ್ ಏಜೆಂಟ್ ಪೊಟ್ಯಾಸಿಯಮ್ ಅಯೋಡೈಡ್ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಕೋಟ್ಯಂತರ ಕ್ಯಾಪ್ಸೂಲ್‌ಗಳ ಬೇಡಿಕೆಯಿದೆ. ಪೊಟ್ಯಾಸಿಯಮ್ ಅಯೋಡೈಡ್ ಅನ್ನು ಪರಮಾಣು ಶಸ್ತ್ರಾಸ್ತ್ರ ತುರ್ತು ಪರಿಸ್ಥಿತಿಯಲ್ಲಿ ಥೈರಾಯ್ಡ್ ಗ್ರಂಥಿಯ ಸುರಕ್ಷತೆಗಾಗಿ ಹಾಗೂ ಹೈಪರ್ ಥೈರಾಯ್ಡಿಸಮ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’