ನ್ಯೂಯಾರ್ಕ್ ನ ಮೇಯರ್ ಮಮದಾನಿ ಅವರ ನಿವಾಸದ ಹೊರಗೆ ಬಾಂಬ್ ದಾಳಿಗೆ ಯತ್ನ

೬ ಜನರು ವಶಕ್ಕೆ

ನಗರದ ಮೇಯರ್ ಝೋಹ್ರಾನ್ ಮಮದಾನಿ

ನ್ಯೂಯಾರ್ಕ್ (ಅಮೆರಿಕಾ) – ನಗರದ ಮೇಯರ್ ಝೋಹ್ರಾನ್ ಮಮದಾನಿ ಅವರ ಇಲ್ಲಿನ ‘ಗ್ರೇಸಿ ಮೆನ್ಷನ್’ ನಿವಾಸದ ಹೊರಗೆ ಬಾಂಬ್ ಮೂಲಕ ದಾಳಿ ನಡೆಸಲು ಪ್ರಯತ್ನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಪೊಲೀಸ್ ಇಲಾಖೆಯು ೨ ಶಂಕಿತರನ್ನು ಗುರುತಿಸಿದ್ದು, ಅವರನ್ನು ವಶಕ್ಕೆ ಪಡೆದಿದೆ.

ಮೇಯರ್ ಮಮದಾನಿ ಅವರ ನಿವಾಸದ ಹೊರಗೆ ಜೇಕ್ ಲ್ಯಾಂಗ್ ಅವರು ಇಸ್ಲಾಂ ವಿರೋಧಿ ಪ್ರತಿಭಟನೆಯನ್ನು ಆಯೋಜಿಸಿದ್ದರು. ಅದಕ್ಕೆ ಪ್ರತ್ಯುತ್ತರವೆಂದು ಮತ್ತೊಂದು ಗುಂಪು ಪ್ರತಿಭಟನೆ ನಡೆಸಿತು. ಈ ವೇಳೆ ಎರಡೂ ಗುಂಪುಗಳ ನಡುವೆ ಸಂಘರ್ಷ ಉಂಟಾಯಿತು. ಈ ಹಿಂಸಾತ್ಮಕ ಸಂಘರ್ಷದಲ್ಲಿ ಕೆಲವು ಪ್ರತಿಭಟನಾಕಾರರು ಮೆಣಸಿನ ಪುಡಿ ಮತ್ತು ಕೈಬಾಂಬ್‌ಗಳನ್ನು ಬಳಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೬ ಜನರನ್ನು ವಶಕ್ಕೆ ಪಡೆದಿದ್ದಾರೆ.