|

ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಲೋನಿ ಪರಿಸರದಲ್ಲಿ ಪ್ರಸಿದ್ಧ ‘ಎಕ್ಸ್-ಮುಸ್ಲಿಂ’ (ಇಸ್ಲಾಂ ತ್ಯಜಿಸಿದವರು) ಸಲೀಂ ವಾಸ್ತಿಕ್ ಅವರ ಮೇಲೆ ಫೆಬ್ರವರಿ 27 ರಂದು ಮಾರಣಾಂತಿಕ ದಾಳಿ ನಡೆದಿತ್ತು. ಸಲೀಂ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ ಜೀಶನ್ (23 ವರ್ಷ) ಮತ್ತು ಗುಲ್ಫಾಮ್ (42 ವರ್ಷ) ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ. ಇವರಿಬ್ಬರೂ ಮೂಲತಃ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸೈದನಗಲಿ ಗ್ರಾಮದ ನಿವಾಸಿಗಳಾಗಿದ್ದು, ಕಳೆದ ಕೆಲವು ವರ್ಷಗಳಿಂದ ದೆಹಲಿಯಲ್ಲಿ ವಾಸವಿದ್ದರು. ಈ ದಾಳಿಯ ಮುಖ್ಯ ಸಂಚು ಮಾಡಿದ ದೆಹಲಿಯ ಮೌಲ್ವಿ ಹಾಗೂ ಪಾಕಿಸ್ತಾನದ ವ್ಯಕ್ತಿಯೂ ಆಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
೧. ವಾಸ್ತಿಕ್ ಅವರ ಮೇಲಿನ ದಾಳಿಗೆ ಸ್ವಲ್ಪ ಸಮಯದ ಮೊದಲು, ಪಾಕಿಸ್ತಾನದ ‘ಯೂಟ್ಯೂಬರ್’ ಒಬ್ಬ ತನ್ನ ಚಾನೆಲ್‌ನಲ್ಲಿ ವಾಸ್ತಿಕ್ ಅವರ ಕಚೇರಿಯ ವಿಳಾಸವನ್ನು ಬಹಿರಂಗಪಡಿಸಿ ಬೆದರಿಕೆ ಹಾಕಿದ್ದನು. ದಾಳಿಯ ನಂತರ ಆತನೇ ಇದರ ಜವಾಬ್ದಾರಿ ಹೊತ್ತುಕೊಂಡಿದ್ದನು. ಆದರೆ ಆ ಯೂಟ್ಯೂಬರ್ ಜೊತೆ ಜೀಶನ್ ಮತ್ತು ಗುಲ್ಫಾಮ್ ಹೇಗೆ ಸಂಪರ್ಕಕ್ಕೆ ಬಂದರು ಎಂಬುದು ಪ್ರಶ್ನೆಯಾಗಿದೆ.
೨. ಜೀಶನ್‌ನ ಮೊಬೈಲ್ ಫೋನ್‌ನಿಂದ ‘ಮುಸ್ಲಿಂ ಆರ್ಮಿ ಮೆಹದಿ ಮಾಡರೇಟರ್’ ಹೆಸರಿನ ಟೆಲಿಗ್ರಾಮ್ ಗುಂಪಿನ ಮಾಹಿತಿ ಲಭ್ಯವಾಗಿದೆ. ಈ ಗುಂಪಿನಲ್ಲಿ 18,೦೦೦ಕ್ಕೂ ಹೆಚ್ಚು ಜನರು ಸದಸ್ಯರಾಗಿದ್ದಾರೆ. ವಾಸ್ತಿಕ್ ಅವರ ಮೇಲಿನ ದಾಳಿಯ ನಂತರ, ಅವರ ರಕ್ತಸಿಕ್ತ ಫೋಟೋಗಳನ್ನು ಈ ಗುಂಪಿನಲ್ಲಿ ಹಂಚಿಕೊಳ್ಳಲಾಗಿತ್ತು. ಇದು ವೈಯಕ್ತಿಕ ದ್ವೇಷವಲ್ಲದೆ, ಸೈದ್ಧಾಂತಿಕ ಭಯೋತ್ಪಾದನೆಯ ಭಾಗವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
೩. ದಾಳಿ ನಡೆಸಲು ಜೀಶನ್ ಮತ್ತು ಗುಲ್ಫಾಮ್‌ಗೆ ದೊಡ್ಡ ಮೊತ್ತದ ಹಣ ನೀಡಿರಬಹುದು ಎಂಬ ಶಂಕೆ ಇದೆ. ಹಣವನ್ನು ಯಾರು ನೀಡಿದರು? ಅದು ನಗದು ರೂಪದಲ್ಲಿತ್ತೇ ಅಥವಾ ಆನ್‌ಲೈನ್ ಮೂಲಕವೇ? ಎಂಬುದರ ತನಿಖೆ ನಡೆಯುತ್ತಿದೆ. ಇಬ್ಬರ ಬಳಿ ‘ಪ್ಯಾನ್ ಕಾರ್ಡ್’ ಲಭ್ಯವಿಲ್ಲದ ಕಾರಣ, ಅವರ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚುವುದು ಸವಾಲಾಗಿದೆ. ಅಲ್ಲದೆ ಇಬ್ಬರೂ ಸಾವನ್ನಪ್ಪಿರುವುದರಿಂದ ಪ್ರಮುಖ ಸಂಚು ಮಾಡಿದವರನ್ನು ತಲುಪುವುದು ಪೊಲೀಸರಿಗೆ ಕಷ್ಟವಾಗಿದೆ.
೪. ಜೀಶನ್ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯನಾಗಿದ್ದನು. ಆತ ಸಲೀಂ ವಾಸ್ತಿಕ್ ಅವರ ವಿಡಿಯೋಗಳನ್ನು ನೋಡುತ್ತಿದ್ದನು. ವಾಸ್ತಿಕ್ ಅವರು ಇಸ್ಲಾಂನಲ್ಲಿರುವ ಕೆಡುಕುಗಳ ಬಗ್ಗೆ ಮಾತನಾಡುತ್ತಿದ್ದರು. ಇದನ್ನು ಸಹಿಸಲಾರದ ಜೀಶನ್, 15 ದಿನಗಳ ಹಿಂದೆಯೇ ದಾಳಿಯ ಸಂಪೂರ್ಣ ಸಂಚು ರೂಪಿಸಿದ್ದನು.
೫. ದೆಹಲಿಯ ಒಬ್ಬ ಮೌಲ್ವಿಯ ಕಡೆಗೆ ತನಿಖೆಯ ದಿಕ್ಕು ತಿರುಗಿದೆ ಎಂದು ಮೂಲಗಳು ತಿಳಿಸಿವೆ. ಈ ಮೌಲ್ವಿ ಇಂಟರ್ನೆಟ್ ಮಾಧ್ಯಮದ ಮೂಲಕ ಯುವಕರ ದಾರಿ ತಪ್ಪಿಸುತ್ತಿದ್ದನು ಎನ್ನಲಾಗಿದೆ.
ಸಂಪಾದಕೀಯ ನಿಲುವುಹಿಂದೂಗಳಿಗೆ ಸಹಿಷ್ಣುತೆಯ ಪಾಠ ಮಾಡುವ ಈ ನಾಮಧಾರಿ ಪ್ರಗತಿಪರರು, ಧಾರ್ಮಿಕ ಮತಾಂಧತೆಯಿಂದ ಸಲೀಂ ವಾಸ್ತಿಕ್ ಅವರ ಮೇಲೆ ನಡೆದ ದಾಳಿಯ ವಿರುದ್ಧ ತುಟಿ ಬಿಚ್ಚುವ ಧೈರ್ಯ ಮಾಡುವುದಿಲ್ಲ. ಒಂದು ವೇಳೆ ಧ್ವನಿ ಎತ್ತಿದರೆ ತಮಗೂ ವಾಸ್ತಿಕ್ ಅವರಿಗಾದ ಗತಿಯೇ ಆಗಬಹುದೆಂಬ ಭಯ ಅವರಿಗಿದೆ. ಪ್ರಗತಿಪರರ ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಒಂದು ನಾಟಕವಾಗಿದ್ದು, ಅವರ ಮೂಲ ಉದ್ದೇಶ ಹಿಂದೂ ದ್ವೇಷವೇ ಆಗಿದೆ ಎಂಬುದನ್ನು ಅರಿಯಿರಿ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!