ಕೇಂದ್ರ ಸರಕಾರದಿಂದ ಸುದ್ಧಿ ವಾಹಿನಿಗಳ ‘ಟಿ.ಆರ್.ಪಿ.’ಗೆ ೪ ವಾರಗಳ ತಡೆ

ಇಸ್ರೇಲ್-ಇರಾನ್ ಯುದ್ಧದ ವರದಿ ಮಾಡುವಾಗ ಸೌಂಡ್ ಅಂಡ್ ಫ್ಯೂರಿ ಸೃಷ್ಟಿಸಿ ನಾಗರಿಕರಲ್ಲಿ ಭೀತಿ ಹುಟ್ಟಿಸುತ್ತಿರುವ ಆರೋಪ

(ಟಿ.ಆರ್.ಪಿ. ಎಂದರೆ ‘ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್’ – ದೂರದರ್ಶನ ವಾಹಿನಿಗಳಲ್ಲಿನ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಅಳೆಯುವ ಮಾನದಂಡ)

ನವದೆಹಲಿ – ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ‘ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್’ (ಬಾರ್ಕ್) ಗೆ ನಿರ್ದೇಶನ ನೀಡಿದ್ದು, ‘ಸುದ್ಧಿ ವಾಹಿನಿಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿ.ಆರ್.ಪಿ.) ವರದಿಯನ್ನು ಪ್ರಕಟಿಸುವುದರ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ೪ ವಾರಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ತಡೆ ಹೇರಬೇಕು’ ಎಂದು ತಿಳಿಸಿದೆ. ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಕೆಲವು ಸುದ್ಧಿ ವಾಹಿನಿಗಳು ಅನಗತ್ಯ ರೋಚಕತೆ ಮತ್ತು ಕೇವಲ ಊಹಾಪೋಹದ ವಿಷಯಗಳನ್ನು ಪ್ರಸಾರ ಮಾಡುತ್ತಿವೆ. ಇದರಿಂದ ಸಾಮಾನ್ಯ ನಾಗರಿಕರಲ್ಲಿ ಭೀತಿ ಉಂಟಾಗುವ ಸಾಧ್ಯತೆಯಿದೆ. ವಿಶೇಷವಾಗಿ ಆ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಸ್ನೇಹಿತರು ಅಥವಾ ಕುಟುಂಬ ಸದಸ್ಯರನ್ನು ಹೊಂದಿರುವ ಜನರಲ್ಲಿ ಆತಂಕ ಹೆಚ್ಚಾಗಬಹುದು ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ.

ಸಂಪಾದಕೀಯ ನಿಲುವು

  • ಯುದ್ಧದ ಸುದ್ದಿಗಳಿರಲಿ ಅಥವಾ ಇತರ ಘಟನೆಗಳ ವರದಿಗಳಿರಲಿ, ಸುದ್ಧಿ ವಾಹಿನಿಗಳು ಅವುಗಳಿಗೆ ಅತಿಯಾದ ರೋಚಕತೆ ನೀಡಿ ಜನರಲ್ಲಿ ಭಯ ಹುಟ್ಟಿಸುತ್ತಿವೆ. ಇಂತಹ ವಾಹಿನಿಗಳಿಗೆ ಕೋಟಿಗಟ್ಟಲೆ ರೂಪಾಯಿ ದಂಡ ವಿಧಿಸುವುದರ ಜೊತೆಗೆ ಅವುಗಳ ಪರವಾನಗಿಯನ್ನೇ ರದ್ದುಗೊಳಿಸುವುದು ಅತ್ಯಗತ್ಯವಾಗಿದೆ!
  • ಮುಂಬಯಿನಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ನಿಲ್ಲುವ ಘಟನೆಗಳು ನಡೆಯುತ್ತವೆ; ಆದರೆ ಈ ವಾಹಿನಿಗಳು ಬೆಳಿಗ್ಗೆ ನಿಂತಿದ್ದ ನೀರು ಸರಾಗವಾಗಿ ಹರಿದು ಹೋದರೂ, ದಿನವಿಡೀ ಅದೇ ದೃಶ್ಯಗಳನ್ನು ತೋರಿಸುತ್ತಾ ಜನರಲ್ಲಿ ಅನಗತ್ಯ ಭೀತಿ ನಿರ್ಮಿಸುತ್ತಿರುವುದು ಕಂಡುಬರುತ್ತಿದೆ!