|

ದೆಹಲಿ – ಇಲ್ಲಿನ ಉತ್ತಮ ನಗರದಲ್ಲಿ ಬಣ್ಣದ ಬಲೂನ್ ಒಡೆದು ಮುಸ್ಲಿಂ ಮಹಿಳೆಯ ಮೈಮೇಲೆ ಬಣ್ಣ ಸಿಡಿದ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಮುಸಲ್ಮಾನರು ಹಿಂದೂ ಕುಟುಂಬವೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮುಸಲ್ಮಾನರು ನಡೆಸಿದ ಹಲ್ಲೆಯಲ್ಲಿ ಓರ್ವ ಹಿಂದೂ ಯುವಕ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಉತ್ತಮ ನಗರದ ಜೆ.ಜೆ. ಕಾಲೋನಿಯ ‘ಎ ಬ್ಲಾಕ್’ನಲ್ಲಿ ಈ ಘಟನೆ ಸಂಭವಿಸಿದೆ. ಈ ಕೃತ್ಯದ ವಿರುದ್ಧ ಹಿಂದೂಗಳು ಆಕ್ರೋಶಗೊಂಡಿದ್ದು, ಪ್ರತಿಭಟನೆ ನಡೆಸಿ ಆರೋಪಿಯ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
Hindu youth killed after attack by Muslims during Holi in Delhi’s Uttam Nagar.
The trigger? A minor incident where a water balloon accidentally splashed a Muslim woman.
Outraged locals later protested and vandalised the accused’s house.
Are Hindus no longer free to celebrate… pic.twitter.com/abuzOo9lB8
— Sanatan Prabhat (@SanatanPrabhat) March 7, 2026
೧. ಹೋಳಿ ಹಬ್ಬದ ದಿನ ಹಿಂದೂ ಕುಟುಂಬದ ೭ ವರ್ಷದ ಬಾಲಕಿಯ ಕೈಯಿಂದ ಬಣ್ಣ ತುಂಬಿದ್ದ ಬಲೂನ್ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದೆ. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಮುಸ್ಲಿಂ ಮಹಿಳೆಯ ಮೇಲೆ ಬಣ್ಣದ ತುಂತುರುಗಳು ಬಿದ್ದಿವೆ. ಈ ವಿಚಾರವಾಗಿ ಆ ಮಹಿಳೆ ಜಗಳವಾಡಿದ್ದಾಳೆ. ‘ಬಾಲಕಿ ಉದ್ದೇಶಪೂರ್ವಕವಾಗಿ ಬಲೂನ್ ಎಸೆದಿಲ್ಲ, ಅದು ಆಕಸ್ಮಿಕವಾಗಿ ಕೈಯಿಂದ ಬಿದ್ದಿದೆ’ ಎಂದು ತಿಳಿಸಿದ ಕುಟುಂಬಸ್ಥರು, ಆಕೆಯ ಬಳಿ ಕ್ಷಮೆಯನ್ನೂ ಕೇಳಿದ್ದರು.
೨. ಆ ಬಳಿಕ ರಾತ್ರಿ ೧೧ ಗಂಟೆ ಸುಮಾರಿಗೆ ೧೫ ರಿಂದ ೨೦ ಮುಸಲ್ಮಾನರು ಈ ಹಿಂದೂ ಕುಟುಂಬದ ಯುವಕನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಮುಸಲ್ಮಾನರು ಯುವಕನ ಎದೆಗೆ ಕಲ್ಲುಗಳಿಂದ ಹೊಡೆದಿದ್ದಲ್ಲದೆ, ಆತನ ಕುಟುಂಬದವರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ಆ ಮುಸ್ಲಿಂ ಮಹಿಳೆಯ ಕುಟುಂಬದವರೂ ಸೇರಿದ್ದರು. ಈ ಕಲ್ಲು ತೂರಾಟದಲ್ಲಿ ಅಕ್ಕಪಕ್ಕದ ಮನೆಗಳ ಕಿಟಕಿ ಗಾಜುಗಳೂ ಪುಡಿಯಾಗಿವೆ.
೩. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದಾಗ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಹಿಂದೂ ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಆಕ್ರೋಶಗೊಂಡ ಹಿಂದೂಗಳಿಂದ ಆರೋಪಿಗಳ ವಾಹನಗಳಿಗೆ ಬೆಂಕಿ
ಈ ಘಟನೆಯಿಂದ ಹಿಂದೂಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಘಟನೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾರ್ಚ್ ೬ ರಂದು ಆಕ್ರೋಶಗೊಂಡ ಹಿಂದೂಗಳು ಆರೋಪಿಯ ಮನೆಯ ಮುಂದೆ ಜಮಾಯಿಸಿ ಮನೆಯನ್ನು ಧ್ವಂಸಗೊಳಿಸಿದರು. ಮನೆಯ ಹೊರಗಿದ್ದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದು, ಆರೋಪಿ ಮುಸಲ್ಮಾನರ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.
ಹೆಚ್ಚುವರಿ ಅರೆಸೇನಾ ಪಡೆ ನಿಯೋಜನೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಉತ್ತಮ ನಗರ ಪ್ರದೇಶದಲ್ಲಿ ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಮತ್ತು ಅರೆಸೇನಾ ಪಡೆಯ ಯೋಧರನ್ನು ನಿಯೋಜಿಸಲಾಗಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!