​ಜಲಾಲ್‌ಪುರ (ಉತ್ತರ ಪ್ರದೇಶ) : ಹಿಂದೂ ಯುವತಿಗೆ ೧೨ ವರ್ಷಗಳಿಂದ ಕಿರುಕುಳ; ಮತಾಂತರಕ್ಕೆ ಯತ್ನ !

ಹತ್ತು ವರ್ಷದ ವಯಸ್ಸಿನಿಂದಲೇ ನಡೆಯುತ್ತಿತ್ತು ಕಿರುಕುಳ

ಜಲಾಲ್‌ಪುರ (ಉತ್ತರ ಪ್ರದೇಶ) – ಇಲ್ಲಿನ ೨೨ ವರ್ಷದ ಹಿಂದೂ ಯುವತಿಗೆ ಹತ್ತು ವರ್ಷದ ವಯಸ್ಸಿನಿಂದ ಅಶ್ಫಾಕ್ ಹೆಸರಿನ ಯುವಕ ಕಿರುಕುಳ ನೀಡುತ್ತಿದ್ದನು. ಅಪಹರಣ, ಅತ್ಯಾಚಾರ ಮತ್ತು ಬಲವಂತದ ಮತಾಂತರಕ್ಕೆ ಯತ್ನಿಸಿದ ಅಶ್ಫಾಕ್‌ನನ್ನು ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಅಶ್ಫಾಕ್ ಕಳೆದ ೧೨ ವರ್ಷಗಳಿಂದ ಹಿಂದೂ ಯುವತಿಯನ್ನು ತನ್ನ ಬಲೆಯಲ್ಲಿ ಸಿಲುಕಿಸಿ ಪೀಡಿಸುತ್ತಿದ್ದನು. ಆಗ ಆ ಯುವತಿಗೆ ಕೇವಲ ೧೦ ವರ್ಷ ವಯಸ್ಸಾಗಿತ್ತು. ಅಂದಿನಿಂದಲೂ ಈತ ಆಕೆಗೆ ಬೆದರಿಕೆ ಹಾಕುತ್ತಿದ್ದನು. ಪೊಲೀಸ್ ಇನ್ಸ್‌ಪೆಕ್ಟರ್ ಗಜಾನಂದ ಚೌಬೆ ನೀಡಿದ ಮಾಹಿತಿಯ ಪ್ರಕಾರ, ಅಶ್ಫಾಕ್ ನ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಮತಾಂತರ ವಿರೋಧಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಹುಡುಗಿಯರ ಅಜ್ಞಾನ ಮತ್ತು ಎಳೆಯ ವಯಸ್ಸಿನ ದುರುಪಯೋಗಪಡಿಸಿಕೊಳ್ಳುವ ಅಶ್ಫಾಕ್‌ನಂತಹ ಲವ್ ಜಿಹಾದಿಗಳನ್ನು ಈಗ ಗಲ್ಲಿಗೇರಿಸಲು ಯೋಗಿ ಆದಿತ್ಯನಾಥ್ ಸರಕಾರದ ಪೊಲೀಸರು ಸನ್ನದ್ಧರಾಗಬೇಕು. ಹಾಗೆಯೇ ಲವ್ ಜಿಹಾದ್ ವಿರೋಧಿ ಕಾನೂನನ್ನು ಅತ್ಯಂತ ಕಠಿಣಗೊಳಿಸಬೇಕು !