
ಮಿಲವಾವುಕಿ (ಅಮೆರಿಕ): ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮತ್ತು ಪ್ರಖರ ಹಿಂದುತ್ವನಿಷ್ಠ ನಾಯಕಿ ಪೂರ್ಣಿಮಾ ನಾಥ್ ಅವರ ಸದಸ್ಯತ್ವವನ್ನು ಅವರ ಪಕ್ಷವು ರದ್ದುಗೊಳಿಸಿದೆ. ವಿಸ್ಕಾನ್ಸಿನ್ ರಾಜ್ಯದ ಮಿಲವಾವುಕಿ ನಗರದ ರಿಪಬ್ಲಿಕನ್ ಪಕ್ಷದ ಶಾಖೆಯು ಅವರನ್ನು ಉಚ್ಚಾಟಿಸಿದೆ. ಈ ಬಗ್ಗೆ ನಾಥ್ ಅವರು ‘ಸನಾತನ ಪ್ರಭಾತ’ಕ್ಕೆ ಪ್ರತಿಕ್ರಿಯಿಸಿ, ‘ನಾನು ನನ್ನ ತತ್ವಗಳಿಗೆ ಬದ್ಧಳಾಗಿ ಉಳಿದಿದ್ದರಿಂದ ನನ್ನನ್ನು ಪಕ್ಷದಿಂದ ಹೊರಹಾಕಲಾಗಿದೆ’ ಎಂದು ಹೇಳಿದ್ದಾರೆ. ಅವರು ಈ ಕ್ರಮದ ವಿರುದ್ಧ ರಾಜ್ಯಮಟ್ಟದ ಪಕ್ಷದ ಕಚೇರಿಯಲ್ಲಿ ದೂರು ನೀಡಲಿದ್ದಾರೆ. ಇನ್ನೊಂದೆಡೆ, ಶಾಖೆಯು ಈ ಕ್ರಮದ ಬಗ್ಗೆ ಸ್ಪಷ್ಟನೆ ನೀಡುತ್ತಾ, ನಾಥ್ ಅವರ ತತ್ವಗಳು ಪಕ್ಷದ ಸಿದ್ಧಾಂತಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಹೇಳಿದೆ.
🚨 Milwaukee: American Hindu leader @PurnimaNath expelled by the Republican Party
The incident again highlights a hard reality of U.S. politics. Whether it is the Republican Party or the Democratic Party, many leaders appear pro-Christian first and politicians later.
If that… pic.twitter.com/e8MCygvxLE
— Sanatan Prabhat (@SanatanPrabhat) March 5, 2026
ಪೂರ್ಣಿಮಾ ನಾಥ್ ಅವರಿಂದ ಮಹತ್ವದ ಪ್ರಶ್ನೆಗಳು!
ತಮ್ಮ ಉಚ್ಚಾಟನೆಯ ನಂತರ ನಾಥ್ ಅವರು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಹೀಗೆ ಹೇಳಿದ್ದಾರೆ:
1. ‘ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ವೈಚಾರಿಕ ಸ್ವಾತಂತ್ರ್ಯ, ವಿವೇಚನೆ, ಮಾನವ ಹಕ್ಕುಗಳು, ಮಾನವ ಘನತೆ, ಹೊಣೆಗಾರಿಕೆ, ಶಾಂತಿ ಮತ್ತು ಮುಕ್ತ ಚರ್ಚೆ ಇವು ನನ್ನ ಮೌಲ್ಯಗಳಾಗಿವೆ. ನಾನು ಈ ತತ್ವಗಳ ಆಧಾರದ ಮೇಲೆ ಕೆಲಸ ಮಾಡುತ್ತಿರುವುದರಿಂದ ನನ್ನನ್ನು ಪಕ್ಷದಿಂದ ಹೊರಹಾಕಲಾಗಿದೆ.
2. ನಾನು ‘ಸೆಂಟ್ರಿಸ್ಟ್ ಕನ್ಸರ್ವೇಟಿವ್’ (ಹಿಂದುತ್ವನಿಷ್ಠ) ಆಗಿದ್ದು, ಅಮೆರಿಕನ್ ಕಾಂಗ್ರೆಸ್‌ನ ವಿಸ್ಕಾನ್ಸಿನ್ ರಾಜ್ಯದ ಅಭ್ಯರ್ಥಿಯಾಗಿದ್ದೇನೆ. ನಮ್ಮ ಚುನಾಯಿತ ಅಧಿಕಾರಿಗಳಿಂದ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ನಾನು ಒತ್ತಾಯಿಸಿದ್ದೆ.
3. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿ ಹೇಳಿಕೊಳ್ಳುವ ನನ್ನ ರಿಪಬ್ಲಿಕನ್ ಪಕ್ಷವು ಆಂತರಿಕ ಪಾರದರ್ಶಕತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಪಕ್ಷದಲ್ಲಿ ಏನೋ ತಪ್ಪಿದೆ ಎಂದರ್ಥ.
4. ನೀವು ಬಿಳಿಯೇತರರು, ಕ್ರಿಶ್ಚಿಯನ್ ಅಲ್ಲದವರು, ಮಹಿಳೆಯರು, ವಲಸಿಗರು ಮತ್ತು ಅಲ್ಪಸಂಖ್ಯಾತರ ಧ್ವನಿಯನ್ನು ಮುಕ್ತವಾಗಿ ಆಲಿಸುತ್ತೀರಾ? ಈ ವಿಷಯದಲ್ಲಿ ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ. ನನ್ನನ್ನು ಹೆದರಿಸಲು ಅಥವಾ ಮೂಲೆಗುಂಪು ಮಾಡಲು ಸಾಧ್ಯವಿಲ್ಲ.’
ಸಂಪಾದಕೀಯ ನಿಲುವುಅಮೆರಿಕದ ರಿಪಬ್ಲಿಕನ್ ಪಕ್ಷವಾಗಲಿ ಅಥವಾ ಡೆಮಾಕ್ರಟಿಕ್ ಪಕ್ಷವಾಗಲಿ, ಅವು ಮೊದಲು ಅಪ್ಪಟ ಕ್ರೈಸ್ತ ನಿಷ್ಠವಾಗಿದ್ದು ನಂತರವಷ್ಟೇ ರಾಜಕೀಯ ಪಕ್ಷಗಳು! ಹಾಗಲ್ಲದಿದ್ದರೆ, ವಿವೇಕ ರಾಮಸ್ವಾಮಿ ಅವರು ಹಿಂದೂ ಎಂಬ ಕಾರಣಕ್ಕೆ ಅವರನ್ನು ಅವಹೇಳನ ಮಾಡಲಾಗುತ್ತಿರಲಿಲ್ಲ. ಹಾಗೆಯೇ ಮಾಜಿ ಗವರ್ನರ್‌ಗಳಾದ ಬಾಬಿ ಜಿಂದಾಲ್ ಮತ್ತು ನಿಕ್ಕಿ ಹ್ಯಾಲಿ ಅವರಂತಹ ನಾಯಕರಿಗೆ ತಮ್ಮ ಮೂಲ ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ಅಗತ್ಯವಿರುತ್ತಿರಲಿಲ್ಲ. ಅಮೆರಿಕದ ರಾಜಕೀಯದಲ್ಲಿರುವ ಈ ಕ್ರೈಸ್ತ ಮತಾಂಧತೆಯನ್ನು ಅರ್ಥಮಾಡಿಕೊಳ್ಳಿ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation