ಟ್ರಂಪ್ ಮತ್ತು ವಿದೇಶಾಂಗ ಸಚಿವ ರೂಬಿಯೋ ಅವರಿಂದ ಪರಸ್ಪರ ವಿರೋಧಿ ಮಾಹಿತಿ: ವಿರೋಧ ಪಕ್ಷಗಳ ಟೀಕೆ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾ ಇರಾನ್ ಮೇಲೆ ನಡೆಸಿದ ಭೀಕರ ಆಕ್ರಮಣದ ನಂತರ ಸರಕಾರದ ಒಳಗಿನ ಗೊಂದಲಗಳು ಮುನ್ನೆಲೆಗೆ ಬಂದಿವೆ. ಈ ಯುದ್ಧದ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ಅವರು ಪರಸ್ಪರ ವಿರುದ್ಧವಾದ ಮಾಹಿತಿಗಳನ್ನು ನೀಡಿರುವುದರಿಂದ ಅಮೇರಿಕನ್ ಮಾಧ್ಯಮಗಳು ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.
ಇರಾನ್ ಅಮೇರಿಕದ ಮೇಲೆ ಆಕ್ರಮಣ ಮಾಡಲು ಸಂಚು ರೂಪಿಸಿತ್ತು!
ಓವಲ್ ಕಚೇರಿಯಲ್ಲಿ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮರ್ಜ್ ಅವರೊಂದಿಗೆ ಚರ್ಚಿಸುವಾಗ ಡೊನಾಲ್ಡ್ ಟ್ರಂಪ್ ಈ ಆಕ್ರಮಣವನ್ನು ಸಮರ್ಥಿಸಿಕೊಂಡರು. ಟ್ರಂಪ್ ಮಾತನಾಡಿ, ಇರಾನ್ ಅಮೇರಿಕದ ಮೇಲೆ ದೊಡ್ಡ ಆಕ್ರಮಣ ಮಾಡಲು ಸಿದ್ಧತೆ ನಡೆಸುತ್ತಿತ್ತು. ಇದರ ಸುಳಿವು ಸಿಗುತ್ತಿದ್ದಂತೆಯೇ ನಾನು ಸೈನ್ಯಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ (ಪ್ರಿವೆಂಟಿವ್ ಸ್ಟ್ರೈಕ್) ದಾಳಿ ನಡೆಸಲು ಆದೇಶಿಸಿದೆ. ಒಂದು ವೇಳೆ ನಾವು ಮೊದಲು ಆಕ್ರಮಣ ಮಾಡದಿದ್ದರೆ, ಇರಾನ್ ನಮ್ಮ ಮೇಲೆ ಭೀಕರವಾಗಿ ದಾಳಿ ಮಾಡುತ್ತಿತ್ತು, ಎಂದು ಹೇಳಿದರು.
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಪರಿಣಾಮಗಳು ಅಮೇರಿಕದ ಮೇಲಾಗಬಾರದೆಂದು ಮುಂಜಾಗೃತಾ ಕ್ರಮವಾಗಿ ಅಮೇರಿಕಾದಿಂದ ಇರಾನ್ ಮೇಲೆ ದಾಳಿ! – ರೂಬಿಯೋ
ಮತ್ತೊಂದೆಡೆ ಅಮೇರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ಮಾತನಾಡಿ, “ಇಸ್ರೇಲ್ ಇರಾನ್ ಮೇಲೆ ಆಕ್ರಮಣ ಮಾಡಲು ಸಿದ್ಧವಾಗಿತ್ತು. ಆ ಕ್ರಮದ ನಂತರ ಇರಾನ್ ಅಮೇರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಬಹುದು ಎಂಬ ಭೀತಿ ಇತ್ತು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಅಮೇರಿಕ ಮೊದಲೇ ಇರಾನ್ ಮೇಲೆ ದಾಳಿ ಮಾಡಿತು,” ಎಂದಿದ್ದಾರೆ.
ಅಮೇರಿಕಾ ಇಸ್ರೇಲ್ ನ ಒತ್ತಡದಲ್ಲಿ ಕೆಲಸ ಮಾಡುತ್ತಿದೆ! – ವಿರೋಧ ಪಕ್ಷಗಳ ಟೀಕೆ
ರೂಬಿಯೋ ಅವರ ಈ ಹೇಳಿಕೆಯಿಂದ ‘ಅಮೇರಿಕವು ಇಸ್ರೇಲ್ ನ ಒತ್ತಡದಲ್ಲಿ ಕೆಲಸ ಮಾಡುತ್ತಿದೆಯೇ?’ ಎಂಬ ಪ್ರಶ್ನೆ ಎದ್ದಿದ್ದು, ವಿರೋಧ ಪಕ್ಷಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಟ್ರಂಪ್ ಅವರ ಈ ನಿರ್ಧಾರದಿಂದ ಕೇವಲ ವಿರೋಧ ಪಕ್ಷಗಳು ಮಾತ್ರವಲ್ಲದೆ, ಅವರ ಕಟ್ಟಾ ಬೆಂಬಲಿಗರೂ ಅಸಮಾಧಾನಗೊಂಡಿದ್ದಾರೆ. ಪ್ರಸಿದ್ಧ ಸಂದರ್ಶಕ ಮ್ಯಾಟ್ ವಾಲ್ಶ್ ಅವರು, ಮಾರ್ಕೊ ರೂಬಿಯೋ ಅವರ ಹೇಳಿಕೆಯನ್ನು ಗಮನಿಸಿದರೆ ಅಮೇರಿಕವು ಇಸ್ರೇಲ್ ನ ಮಾತು ಕೇಳಿ ಯುದ್ಧಕ್ಕೆ ಇಳಿದಂತಿದೆ, ಎಂದು ಟೀಕಿಸಿದ್ದಾರೆ. ಇದರೊಂದಿಗೆ ಖ್ಯಾತ ಸುದ್ದಿ ನಿರೂಪಕಿ ಮೇಗಿನ್ ಕೆಲ್ಲಿ ಅವರು, ಸರಕಾರದ ಮೊದಲ ಕರ್ತವ್ಯ ತನ್ನ ನಾಗರಿಕರನ್ನು ರಕ್ಷಿಸುವುದೇ ಹೊರತು, ಬೇರೆ ದೇಶದ ಯುದ್ಧವನ್ನು ಮಾಡುವುದಲ್ಲ, ಎಂದು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation