ಮುಂಬಯಿನಲ್ಲಿ ಮೂವರು ಅಪ್ರಾಪ್ತ ಬಾಲಕರಿಂದ ಸಹಪಾಠಿಯ ಹತ್ಯೆ!

ಮುಂಬಯಿ – ಇಲ್ಲಿ ಮೂವರು ಅಪ್ರಾಪ್ತ ಬಾಲಕರು ತಮ್ಮ ೧೪ ವರ್ಷದ ಸಹಪಾಠಿಯನ್ನು ಹತ್ಯೆ ಮಾಡಿದರು. ಹತ್ಯೆಯ ವಿಷಯ ಯಾರಿಗೂ ತಿಳಿಯಬಾರದೆಂದು ಈ ಬಾಲಕರು ಅತ್ಯಂತ ನಿರ್ದಯವಾಗಿ ತಮ್ಮದೇ ಸ್ನೇಹಿತನ ಮೃತದೇಹವನ್ನು ಕೆರೆಯಲ್ಲಿ ಎಸೆದಿದ್ದಾರೆ ಮತ್ತು ಪುರಾವೆಗಳನ್ನು ನಾಶಮಾಡಲು ಯತ್ನಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ಸ್ನೇಹಿತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಹೇಳಿದರು. ಆದರೆ ಕೊನೆಗೆ ಇಬ್ಬರೂ ಬಾಲಕರು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡರು. ಈ ಘಟನೆಯು ಭಾಂಡುಪ ಪ್ರದೇಶದಲ್ಲಿ ನಡೆದಿದ್ದು, ಮೃತ ವಿದ್ಯಾರ್ಥಿಯ ಹೆಸರು ಸಿದ್ಧಾರ್ಥ ಎಂದಾಗಿದೆ.

ಸಿದ್ಧಾರ್ಥನ ಶವಪರೀಕ್ಷೆಯ ವರದಿಯಲ್ಲಿ ಸಿದ್ಧಾರ್ಥನ ಶ್ವಾಸಕೋಶ ಮತ್ತು ಹೊಟ್ಟೆಯಲ್ಲಿ ನೀರು ಇಲ್ಲದಿರುವುದು ಗಮನಕ್ಕೆ ಬಂದಿತು. ಅವನ ತಲೆಯ ಹಿಂಭಾಗದಲ್ಲಿ ತೀವ್ರವಾದ ಗಾಯ ಮತ್ತು ಆಂತರಿಕ ರಕ್ತಸ್ರಾವವಾಗಿರುವುದು ವರದಿಯಲ್ಲಿ ನಮೂದಿಸಲಾಗಿತ್ತು. ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ಮೇಲಿನ ಪ್ರಕರಣ ಗಮನಕ್ಕೆ ಬಂದಿತು. ಸಿದ್ಧಾರ್ಥ ಯಾವಾಗಲೂ ತಮ್ಮ ಮೇಲೆ ದಬಾಯಿಸುತ್ತಿದ್ದನು ಎಂದು ಅವನಿಗೆ ‘ಬುದ್ಧಿ ಕಲಿಸಲು’ ಹೀಗೆ ಮಾಡಿರುವುದಾಗಿ ಸ್ನೇಹಿತರು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಅಪ್ರಾಪ್ತ ಬಾಲಕರಲ್ಲಿ ಹೆಚ್ಚುತ್ತಿರುವ ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಪ್ರವೃತ್ತಿಯು ಸಮಾಜಕ್ಕೆ ದೊಡ್ಡ ದುರಂತವೇ ಸರಿ!
  • ಚಿಕ್ಕ ವಯಸ್ಸಿನಲ್ಲಿನ ಅಪರಾಧಗಳನ್ನು ತಡೆಗಟ್ಟಲು ಪಾಲಕರು, ಶಿಕ್ಷಕರು ಮತ್ತು ಸರಕಾರ ಹೀಗೆ ಎಲ್ಲಾ ಹಂತಗಳಲ್ಲಿಯೂ ಪ್ರಯತ್ನ ನಡೆಯುವುದು ಅತ್ಯಗತ್ಯ!