|

ಮುಂಬಯಿ – ಇಸ್ಲಾಮಿಕ್ ಸ್ಟೇಟ್‌ನ ಹೆಚ್ಚುತ್ತಿರುವ ಆನ್‌ಲೈನ್ ಉಗ್ರಗಾಮಿ ಪ್ರಚಾರವನ್ನು ತಡೆಯಲು ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳ (ATS) ಕ್ರಮ ಕೈಗೊಂಡಿದೆ. ಮುಂಬಯಿನ ಕುರ್ಲಾ ಮತ್ತು ಗೋವಂಡಿ ಪ್ರದೇಶಗಳ ಒಟ್ಟು 3 ಸ್ಥಳಗಳಲ್ಲಿ ದಳವು ಏಕಕಾಲದಲ್ಲಿ ದಾಳಿ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿರುವ ಬಗ್ಗೆ ದಳವು ಅಧಿಕೃತವಾಗಿ ಘೋಷಿಸಿಲ್ಲ.
ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ದಳಕ್ಕೆ ಕೆಲವು ಮಾಹಿತಿ ಲಭ್ಯವಾಗಿತ್ತು. ಕೆಲವು ಯುವಕರು ‘ಡಿಜಿಟಲ್’ ಮಾಧ್ಯಮಗಳನ್ನು, ವಿಶೇಷವಾಗಿ ‘ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್‌ಗಳನ್ನು’ (ಗೌಪ್ಯವಾಗಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಆ್ಯಪ್‌ಗಳು) ಬಳಸಿಕೊಂಡು ‘ಇಸ್ಲಾಮಿಕ್ ಸ್ಟೇಟ್’ ಅಂದರೆ ‘ಐಸಿಸ್’ನ ಉಗ್ರಗಾಮಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸ್ಥೆಗಳು ಶಂಕಿಸಿದ್ದವು. ಅದನ್ನು ಖಚಿತಪಡಿಸಿಕೊಂಡ ದಳವು, ಸಂಶಯಾಸ್ಪದ ಸ್ಥಳಗಳನ್ನು ಸುತ್ತುವರಿದು ದಾಳಿ ನಡೆಸಿತು. ಈ ವೇಳೆ ಶಂಕಿತರಿಂದ ಮೇಲ್ಕಂಡ ತಾಂತ್ರಿಕ ಮತ್ತು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಂಕಿತ ವ್ಯಕ್ತಿಗಳು ಯಾವ ಮಾಧ್ಯಮದ ಮೂಲಕ ವಿದೇಶಿ ಏಜೆಂಟ್‌ಗಳ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಈಗ ‘ಫೋರೆನ್ಸಿಕ್’ ಪರೀಕ್ಷೆಯಿಂದ ಬಹಿರಂಗವಾಗಲಿದೆ. ವಶಪಡಿಸಿಕೊಂಡ ಎಲ್ಲಾ ಉಪಕರಣಗಳನ್ನು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವುಗಳಿಂದ ಡಿಲೀಟ್ ಮಾಡಲಾದ (ಅಳಿಸಿ ಹಾಕಲಾದ) ಮಾಹಿತಿಯನ್ನು ಮರುಪಡೆಯುವ ಕೆಲಸ ನಡೆಯುತ್ತಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!