|

ಪುಣೆ, ೩ ಮಾರ್ಚ್ (ಸುದ್ದಿ) – ಹಿಂದೂ ಜನಜಾಗೃತಿ ಸಮಿತಿಯು ಕಳೆದ ೨೩ ವರ್ಷಗಳಿಂದ ಖಡಕವಾಸಲಾ ಜಲಾಶಯ ರಕ್ಷಣೆ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ಅಣೆಕಟ್ಟು ಪರಿಸರದಲ್ಲಿ ಜಲಾಶಯ ರಕ್ಷಣೆಯ ಅಖಂಡ, ಅವಿರತ ಮತ್ತು ಪ್ರೇರಣಾದಾಯಿ ಅಭಿಯಾನವು ಖಡಕವಾಸಲಾ ಗ್ರಾಮಸ್ಥರು ಹಾಗೂ ಸಾಮಾಜಿಕ ಜವಾಬ್ದಾರಿಯುಳ್ಳ ಪುಣೆಯ ನಾಗರಿಕರ ಸಹಭಾಗಿತ್ವದಲ್ಲಿ ಪ್ರತಿವರ್ಷ ನಡೆಯುತ್ತಿದೆ. ಇದು ಈ ಅಭಿಯಾನದ ೨೪ನೇ ವರ್ಷವಾಗಿದೆ. ಭಾಜಪ ಹಾಲಿ ಶಾಸಕ ಭೀಮರಾವ (ಅಣ್ಣಾ) ತಾಪಕೀರ ಅವರು ತೆಂಗಿನಕಾಯಿ ಒಡೆಯುವ ಮೂಲಕ ಅಭಿಯಾನವನ್ನು ಉದ್ಘಾಟಿಸಿದರು.


ಧೂಳಿವಂದನ ಮತ್ತು ರಂಗಪಂಚಮಿ ಈ ಎರಡೂ ದಿನಗಳಲ್ಲಿ ಜಲಾಶಯದ ಪಾವಿತ್ರ್ಯವು ಅಬಾಧಿತವಾಗಿ ಉಳಿಯಬೇಕು ಎಂಬ ಸಂಕಲ್ಪದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ಸಾಧಕರು, ಖಡಕವಾಸಲಾ ಗ್ರಾಮಸ್ಥರು ಮತ್ತು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಜಲಾಶಯದ ಸುತ್ತಲೂ ಮಾನವ ಸರಪಳಿ ನಿರ್ಮಿಸಿ ಜಲಾಶಯದ ರಕ್ಷಣೆ ಮಾಡುತ್ತಾರೆ.
🌊🚩 24 Years of Resolute Environmental Protection!
For 23 continuous years, @HinduJagrutiOrg has led the Khadakwasla Reservoir Protection Campaign with unwavering dedication. Now in its 24th year, this people-powered movement continues to inspire
Inaugurated this year by BJP… pic.twitter.com/8pm2DmloN0
— Sanatan Prabhat (@SanatanPrabhat) March 3, 2026
ಸಮಿತಿಯ ಈ ಅಭಿಯಾನ ಪ್ರತಿವರ್ಷವೂ ಶೇ. ೧೦೦ ರಷ್ಟು ಯಶಸ್ವಿಯಾಗಿದೆ. ಅಭಿಯಾನ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಬ್ಬರೂ ಜಲಾಶಯಕ್ಕೆ ಇಳಿದಿಲ್ಲ. ನಿಸರ್ಗ ರಕ್ಷಣೆಯ ಹಂಬಲ, ಸಮಾಜ ಪ್ರಬೋಧನೆಯ ತಳಮಳ ಹಾಗೂ ಕಾರ್ಯಕರ್ತರ ಉತ್ಸಾಹಭರಿತ ಸಹಭಾಗಿತ್ವದಿಂದ ಈ ಅಭಿಯಾನವು ಪರ್ಯಾವರಣ ಸಂವರ್ಧನೆಯ ದೀಪಸ್ತಂಭವಾಗಿ ಮಾರ್ಪಟ್ಟಿದೆ.

ಪುಣೆ ನಗರ ಮತ್ತು ಆಸುಪಾಸಿನ ಪ್ರದೇಶಗಳಿಂದ ಬಂದಿದ್ದ ೨೦೦ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಪ್ರಬೋಧನಾತ್ಮಕ ಫಲಕಗಳನ್ನು ಕೈಯಲ್ಲಿ ಹಿಡಿದು ಖಡಕವಾಸಲಾ ಜಲಾಶಯದ ಸುತ್ತಲೂ ಮಾನವ ಸರಪಳಿ ನಿರ್ಮಿಸಿ ನಿಂತಿದ್ದರು. ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೭ ಗಂಟೆಯವರೆಗೆ ಈ ಅಭಿಯಾನ ನಡೆಯಿತು. ಜಿಲ್ಲೆಯ ಪಾರಗಾಂವ, ದೌಂಡ, ಸಾಸವಡ, ತಳೇಗಾಂವ, ಭೋರ, ಮಾಂಜರಿ ಹಾಗೂ ಪುಣೆ ನಗರದಿಂದ ಧರ್ಮಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಿದ್ದರು.


ಉಪಸ್ಥಿತ ಗಣ್ಯರು
ಭಾಜಪ ಖಡಕವಾಸಲಾ ವಿಧಾನಸಭಾ ಕ್ಷೇತ್ರದ ಶಾಸಕ ಭೀಮರಾವ (ಅಣ್ಣಾ) ತಾಪಕೀರ, ಪುಣೆ ಮಹಾನಗರ ಪಾಲಿಕೆಯ ಭಾಜಪ ನಗರಸಭಾ ಸದಸ್ಯೆ ಸೌ. ಧನಶ್ರೀ ದತ್ತಾತ್ರೇಯ ಕೊಲ್ಹೆ, ಭಾಜಪ ಒಬಿಸಿ ಮೋರ್ಚಾದ ಮಹಾರಾಷ್ಟ್ರ ಪ್ರದೇಶ ಕಾರ್ಯದರ್ಶಿ ಶ್ರೀ ದತ್ತಾತ್ರೇಯ ಕೊಲ್ಹೆ, ಭಾರತೀಯ ಜನತಾ ಯುವ ಮೋರ್ಚಾ ಖಡಕವಾಸಲಾ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಸಾರಂಗ ನವಲೆ, ನಾಂದೇಡ ಸಿಟಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಅತುಲ ಭೋಸ
Twenty four years of relentless commitment to protect Khadakwasla from water pollution & illegal activities!
Over 200 dedicated citizens from #Pune and surrounding areas, along with activists of Hindu Janajagruti Samiti, formed a resolute human chain around #Khadakwasla… pic.twitter.com/tHABrqZqao
— HinduJagrutiOrg (@HinduJagrutiOrg) March 3, 2026
ವಿಶೇಷ ಸಹಕಾರ!
‘ಶ್ರೀ ರಾಧಾಕೃಷ್ಣ ಪ್ಯೂರ್ ವೆಜ್’ನ ಶ್ರೀಕಾಂತ ಶೆಟ್ಟಿ, ‘ಅನ್ನಪೂರ್ಣ ಮೆಸ್’ನ ಕಮಲೇಶ ಸಿಂಗ್ ರಾಜಪುರೋಹಿತ, ಶ್ರೀಮತಿ ನಿರ್ಮಲಾ ಫಡಣೀಸ್, ಸರ್ವಶ್ರೀ ನಿಖಿಲ ಪಾಯಗುಡೆ, ಉಮೇಶ ಗೋರೆ, ಯಶವಂತ ಬಾಪು ಲಾಯಗುಡೆ.
ವರ್ಷ ೨೦೦೩ ರಲ್ಲಿ ಹೀಗೆ ಪ್ರಾರಂಭವಾಯಿತು ಅಭಿಯಾನಧರ್ಮಶಿಕ್ಷಣದ ಅಭಾವದಿಂದ ಹಬ್ಬ-ಉತ್ಸವಗಳ ಹಿಂದಿನ ಮೂಲ ಉದ್ದೇಶವು ಮರೆಯಾಗುತ್ತಿದೆ. ಧೂಳಿವಂದನ ಮತ್ತು ರಂಗಪಂಚಮಿಯ ದಿನದಂದು ರಾಸಾಯನಿಕ ಬಣ್ಣಗಳನ್ನು ಹಚ್ಚಿಕೊಂಡು ನಾಗರಿಕರು ಖಡಕವಾಸಲಾ ಜಲಾಶಯದಲ್ಲಿ ಸ್ನಾನ ಮಾಡಲು ಬರುತ್ತಿದ್ದರು. ಪುಣೆ ನಗರಕ್ಕೆ ನೀರು ಪೂರೈಸುವ ಮುಖ್ಯ ಜಲಸ್ರೋತವು ಇದರಿಂದ ಪ್ರದೂಷಿತವಾಗುತ್ತಿತ್ತು. ಇದನ್ನು ಗಮನಿಸಿ, ರಾಷ್ಟ್ರೀಯ ಜಲಸಂಪನ್ಮೂಲ ರಕ್ಷಣೆಯ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ಖಡಕವಾಸಲಾ ಜಲಾಶಯ ರಕ್ಷಣೆಯ ಉಪಕ್ರಮವನ್ನು ವರ್ಷ ೨೦೦೩ ರಲ್ಲಿಯೇ ಕೈಗೆತ್ತಿಕೊಂಡಿತು. |
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ