ಇರಾನ್ ನ ಗುಪ್ತಚರ ಸಂಸ್ಥೆಯ ಸಂದೇಶ

ಟೆಹರಾನ್ (ಇರಾನ್) / ಟೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳ ಜನಸಾಮಾನ್ಯರಲ್ಲಿ ಯುದ್ಧದ ಭೀತಿ ಆವರಿಸಿದೆ. ಇರಾನ್ ನ ಗುಪ್ತಚರ ಸಂಸ್ಥೆಯು, ‘ಯುದ್ಧವು ದೀರ್ಘಕಾಲ ನಡೆಯಲಿದ್ದು, ಇದಕ್ಕೆ ಸಿದ್ಧರಾಗಿರಬೇಕು’ ಎಂದು ಜನರಿಗೆ ತಿಳಿಸಿದೆ. ಅಲ್ಲಿನ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಜನರು ಸೈನ್ಯದ ಮೇಲೆ ವಿಶ್ವಾಸವಿಡಬೇಕು ಮತ್ತು ದಾಳಿ ಮಾಡುವವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.
ಟೆಲ್ ಅವಿವ್ ಮೇಲೂ ಇರಾನ್ ದಾಳಿ!
ಇಸ್ರೇಲ್ ನ ರಾಜಧಾನಿ ಟೆಲ್ ಅವಿವ್ ಮೇಲೆಯೂ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದಾಗಿ ಅಲ್ಲಿನ ಜನರು ಬಂಕರ್ ಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ತಮ್ಮ ಅತಿದೊಡ್ಡ ಶತ್ರುವಾದ ಇರಾನ್ ಅನ್ನು ನಾಶಮಾಡಲು ಹೋರಾಡುತ್ತಿವೆ ಎಂದು ಇಸ್ರೇಲ್ ನ ಜನರು ಹೇಳುತ್ತಿದ್ದಾರೆ. ಇರಾನ್ ಕೇವಲ ಇಸ್ರೇಲ್ ಗೆ ಮಾತ್ರವಲ್ಲದೆ ಇಡೀ ಜಗತ್ತಿಗೇ ಅಪಾಯಕಾರಿಯಾಗಿದೆ. ಇರಾನ್ ಕ್ಷಿಪಣಿಗಳು ೪ ಸಾವಿರ ಕಿಲೋಮೀಟರ್ ದೂರದವರೆಗೆ ಕ್ರಮಿಸಬಲ್ಲವು. ಈಗ ಇರಾನ್ ಯುರೋಪಿಯನ್ ದೇಶಗಳ ಮೇಲೆಯೂ ದಾಳಿ ಮಾಡಬಹುದೆಂದು ಆತಂಕ ವ್ಯಕ್ತಪಡಿಸಲಾಗುತ್ತಿದೆ.
ನಾವು ಇಸ್ರೇಲ್ ನಲ್ಲಿ ಸುರಕ್ಷಿತವಾಗಿದ್ದೇವೆ! – ಭಾರತೀಯ ನಾಗರಿಕರು
ಇಸ್ರೇಲ್ ನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಇಸ್ರೇಲಿ ಜನರು ಮಾನಸಿಕವಾಗಿ ತುಂಬಾ ಸದೃಢರಾಗಿದ್ದಾರೆ. ಅವರಿಗೆ ಇಂತಹ ಪರಿಸ್ಥಿತಿಯಲ್ಲಿ ಬದುಕುವ ಅಭ್ಯಾಸವಾಗಿದೆ. ಯುದ್ಧದ ಸ್ಥಿತಿಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಅವರಿಗೆ ತಿಳಿದಿದೆ. ಇಲ್ಲಿ ವಾಸಿಸುವ ಭಾರತೀಯರೂ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. ನಾವು ಇಲ್ಲಿ ಚೆನ್ನಾಗಿದ್ದೇವೆ. ಸದ್ಯಕ್ಕೆ ಸರಕಾರಕ್ಕೆ ನಮ್ಮನ್ನು ವಾಪಸ್ ಕರೆಸಿಕೊಳ್ಳುವಂತೆ ನಾವು ಬೇಡಿಕೆ ಇಡುವುದಿಲ್ಲ ಮತ್ತು ನಮಗೆ ಸದ್ಯಕ್ಕೆ ಭಯವೂ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಇರಾನ್ ನ ಕುಮ್ ನಗರದ ಪ್ರಾಧ್ಯಾಪಕ ಮಹಮ್ಮದ್ ಹುಸೇನ್ ಸೂರತವಾಲಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇರಾನ್ ನ ಟೆಹರಾನ್, ಕುಮ್, ಇಸ್ಫಹಾನ್ ಮತ್ತು ಅರಾಕ್ ನಂತಹ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೂನ್ ೨೦೨೫ ರಲ್ಲಿ ಇಸ್ರೇಲ್‌ನೊಂದಿಗೆ ನಡೆದ ಯುದ್ಧದ ಸಮಯದಲ್ಲಿಯೂ ಭಾರತೀಯರ ವಸತಿ ಪ್ರದೇಶಗಳಲ್ಲಿ ಯಾವುದೇ ದಾಳಿ ಅಥವಾ ಹಾನಿಯ ಸುದ್ದಿ ಬಂದಿರಲಿಲ್ಲ. ಈ ಬಾರಿಯೂ ಯಾವುದೇ ಭಾರತೀಯರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಪರಿಸ್ಥಿತಿ ಹದಗೆಟ್ಟರೆ ಭಾರತೀಯ ವಿದ್ಯಾರ್ಥಿಗಳನ್ನು ಇರಾನ್ ನಿಂದ ಸುರಕ್ಷಿತವಾಗಿ ಸ್ಥಳಾಂತರ! – ಇರಾನ್ ನ ವಿದ್ಯಾರ್ಥಿ ಸಂಘಟನೆ
‘ಇರಾನ್ ಯುನಿಟ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ಟೆಹರಾನ್ ಮತ್ತು ಇರಾನ್ ನ ಇತರ ಭಾಗಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಎಂದು ತಿಳಿಸಿದೆ. ಇರಾನ್ ನಲ್ಲಿ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ನಮಗೆ ಅವರ ಪೋಷಕರಿಂದ ಕರೆಗಳು ಬರುತ್ತಿದ್ದು, ಅವರು ಭಯಭೀತರಾಗಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇವೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಪರಿಗಣಿಸಬೇಕು ಮತ್ತು ಪರಿಸ್ಥಿತಿ ಹದಗೆಟ್ಟರೆ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾವು ಮನವಿ ಮಾಡಿದ್ದೇವೆ ಎಂದು ಸಂಘಟನೆ ಹೇಳಿದೆ.
ಜನವರಿ ೨೦೨೬ ರ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ವಿದ್ಯಾರ್ಥಿಗಳು ಸೇರಿದಂತೆ ೧೦,೦೦೦ಕ್ಕೂ ಹೆಚ್ಚು ಭಾರತೀಯರು ಇರಾನ್ ನಲ್ಲಿ ವಾಸಿಸುತ್ತಿದ್ದಾರೆ, ಮತ್ತು ೪೧,೦೦೦ಕ್ಕೂ ಹೆಚ್ಚು ಭಾರತೀಯರು ಇಸ್ರೇಲ್ ನಲ್ಲಿ ನೆಲೆಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation