ಯಂತ್ರಗಳು ‘ನಿಜವಾದ ಶ್ರದ್ಧೆ’ಯನ್ನು ಎಂದಿಗೂ ನೀಡಲು ಸಾಧ್ಯವಿಲ್ಲ ಎಂದೂ ಉಲ್ಲೇಖ

ರೋಮ್ (ಇಟಲಿ) – ಕ್ಯಾಥೋಲಿಕ್ ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಲಿಯೋ (ಹದಿನಾಲ್ಕನೆಯವರು) ಪಾದ್ರಿಗಳಿಗೆ ಸ್ಪಷ್ಟ ಮತ್ತು ಕಠಿಣ ಸಂದೇಶ ನೀಡುತ್ತಾ, ‘ಚರ್ಚ್‌ಗಳಲ್ಲಿ ನೀಡಲಾಗುವ ಉಪದೇಶಗಳನ್ನು ಸಿದ್ಧಪಡಿಸಲು ಕೃತಕ ಬುದ್ಧಿಮತ್ತೆ ಅಂದರೆ ಎಐನ ಯಾವುದೇ ಆಧಾರವನ್ನು ತೆಗೆದುಕೊಳ್ಳಬಾರದು’ ಎಂದು ಹೇಳಿದ್ದಾರೆ. ಫೆಬ್ರವರಿ 19 ರಂದು ರೋಮ್‌ನಲ್ಲಿ ಪಾದ್ರಿಗಳೊಂದಿಗೆ ಸಂವಾದ ನಡೆಸುವಾಗ ಅವರು, ಉಪದೇಶವನ್ನು ಬರೆಯುವುದು ಎಂದರೆ ಕೇವಲ ಶಬ್ದಗಳ ಜೋಡಣೆಯಲ್ಲ, ಬದಲಾಗಿ ಸ್ವಂತ ನಂಬಿಕೆ ಮತ್ತು ಜೀವನದ ಅನುಭವಗಳನ್ನು ಜನರೊಂದಿಗೆ ಹಂಚಿಕೊಳ್ಳುವುದು, ಇದನ್ನು ಯಾವುದೇ ಯಂತ್ರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
1. ಪೋಪ್ ಲಿಯೋ ಅವರು ಪಾದ್ರಿಗಳಿಗೆ, ಎಐ ಸಹಾಯದಿಂದ ಉಪದೇಶವನ್ನು ಬರೆಯುವುದು ಒಂದು ‘ಶಾರ್ಟ್‌ಕಟ್’ ಆಗಿದೆ. ಈ ‘ಶಾರ್ಟ್‌ಕಟ್’ ಪಾದ್ರಿಗಳ ಆಧ್ಯಾತ್ಮಿಕ ಶಿಸ್ತನ್ನು ದುರ್ಬಲಗೊಳಿಸಬಹುದು. ನಿಜವಾದ ಉಪದೇಶವು ಪಾದ್ರಿಗಳ ಜೀವನದ ಹೋರಾಟ ಮತ್ತು ದೇವರ ಮೇಲಿನ ನಿಷ್ಠೆಯಿಂದ ಸೃಷ್ಟಿಯಾಗುತ್ತದೆ. ಕಂಪ್ಯೂಟರ್ ಕೇವಲ ಶಬ್ದಗಳನ್ನು ಜೋಡಿಸಬಲ್ಲದು, ಅವುಗಳನ್ನು ಅನುಭವಿಸಲು ಸಾಧ್ಯವಿಲ್ಲ.
2. ತಾನು ಹೊಸ ತಂತ್ರಜ್ಞಾನದ ವಿರೋಧಿಯಲ್ಲ ಎಂದು ಪೋಪ್ ಸ್ಪಷ್ಟಪಡಿಸಿದರು. ವ್ಯಾಟಿಕನ್ ಧಾರ್ಮಿಕ ಗ್ರಂಥಗಳನ್ನು 60 ಭಾಷೆಗಳಿಗೆ ಅನುವಾದಿಸುವ ಎಐ ವ್ಯವಸ್ಥೆಯನ್ನು ಸ್ವೀಕರಿಸಿದೆ; ಆದರೆ ಯಂತ್ರವು ಸಂದೇಶವನ್ನು ಅನುವಾದಿಸಬಹುದು, ಆದರೆ ಆ ಸಂದೇಶವನ್ನು ರೂಪಿಸುವುದು ಮತ್ತು ಅದರ ಆಳವಾದ ಅರ್ಥವನ್ನು ವಿವರಿಸುವುದು ಕೇವಲ ಮಾನವನ ಜವಾಬ್ದಾರಿಯಾಗಿರಬೇಕು.
ಸಾಮಾಜಿಕ ಜಾಲತಾಣಗಳಲ್ಲಿನ ಜನಪ್ರಿಯತೆಯ ಬಗ್ಗೆ ಎಚ್ಚರದಿಂದಿರುವಂತೆ ಸಲಹೆ
ಪೋಪ್ ಅವರು ಪಾದ್ರಿಗಳಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಆಕರ್ಷಣೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ‘ಆನ್‌ಲೈನ್ ಜನಪ್ರಿಯತೆ ಅಥವಾ ‘ಲೈಕ್ಸ್’ ಸಂಖ್ಯೆಯನ್ನು ಆಧ್ಯಾತ್ಮಿಕ ಯಶಸ್ಸಿನ ಅಳತೆಗೋಲು ಎಂದು ಪರಿಗಣಿಸಬಾರದು’ ಎಂದು ಅವರು ಹೇಳಿದರು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !