• ೨೫ ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸ• ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳ ಜಪ್ತಿ |

ಸಹರಾನಪುರ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳವು ನಗರದ ಕುತುಬಶೇರ್ ಪ್ರದೇಶದ ಏಕತಾ ಕಾಲೋನಿಯಿಂದ ರೋಹಿಂಗ್ಯಾ ಮುಸಲ್ಮಾನನೊಬ್ಬನನ್ನು ಬಂಧಿಸಿದೆ. ಬಂಧಿತನ ಹೆಸರು ಶಹಾಬುದ್ದೀನ್ ಎಂದಾಗಿದ್ದು, ಆತನಿಂದ ಮೊಬೈಲ್ ಫೋನ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಮನೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತ ಹಲವು ವರ್ಷಗಳಿಂದ ಈ ಜಿಲ್ಲೆಯಲ್ಲಿ ವಾಸಿಸುತ್ತಿದ್ದನು ಮತ್ತು ಮಾಂಸದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು.
೧. ಕಳೆದ ಅನೇಕ ದಿನಗಳಿಂದ ಭಯೋತ್ಪಾದನಾ ವಿರೋಧಿ ದಳಕ್ಕೆ ಮ್ಯಾನ್ಮಾರ್ ನ ಕೆಲವು ಜನರು ಅಕ್ರಮವಾಗಿ ಭಾರತಕ್ಕೆ ನುಗ್ಗಿದ್ದಾರೆ ಮತ್ತು ಅವರು ಸಹರಾನಪುರ ಜಿಲ್ಲೆಯ ಮಾಂಸದ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿ ಲಭಿಸಿತ್ತು.
೨. ಪೊಲೀಸರಿಗೆ ಶಹಾಬುದ್ದೀನ್ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಏಕತಾ ಕಾಲೋನಿಯಲ್ಲಿ ಆತನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ ಅವನು ಮೂಲತಃ ಮ್ಯಾನ್ಮಾರ್ ನಿವಾಸಿ ಎಂಬುದು ಬೆಳಕಿಗೆ ಬಂದಿದೆ.
೩. ಆತನ ಜೇಬಿನಿಂದ ಒಂದು ಮೊಬೈಲ್ ಫೋನ್, ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮೀಷನರ್ ಹೆಸರಿರುವ ಒಂದು ನೀಲಿ ಸ್ಲಿಪ್, ಅಧಿಕೃತ ಆಧಾರ್ ಕಾರ್ಡ್ ಅಷ್ಟೇ ಅಲ್ಲದೆ, ಭೂಮಿಯ ದಾಖಲೆಗಳು, ಬ್ಯಾಂಕ್ ಖಾತೆಗಳು, ವಿದ್ಯುತ್ ಬಿಲ್ ರಸೀದಿಗಳು ಇತ್ಯಾದಿಗಳು ಪತ್ತೆಯಾಗಿವೆ.
೪. ವಿಚಾರಣೆಯ ಸಮಯದಲ್ಲಿ ತಾನು ಮೂಲತಃ ಮ್ಯಾನ್ಮಾರ್ ನವನೆಂದು ಮತ್ತು ೨೦-೨೫ ವರ್ಷಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾಂಸದ ಕಾರ್ಖಾನೆಯಲ್ಲಿ ಕೆಲಸ ಮಾಡಲು ಮತ್ತು ಇತರ ಕೆಲಸಗಳನ್ನು ಮಾಡಲು ಭಾರತೀಯ ಗುರುತಿನ ಚೀಟಿ ಅಗತ್ಯವಾಗಿತ್ತು; ಆದ್ದರಿಂದ ಒಬ್ಬ ದಲ್ಲಾಳಿಯ ಮೂಲಕ ಆಧಾರ್ ಕಾರ್ಡ್ ಪಡೆದಿದ್ದಾಗಿ ತಿಳಿಸಿದ್ದಾನೆ. ಆಧಾರ್ ಕಾರ್ಡ್ ನೀಡಿದ ಆ ದಲ್ಲಾಳಿಯ ಹೆಸರು ನೆನಪಿಲ್ಲ ಎಂದು ಆತ ಹೇಳಿದ್ದಾನೆ.
ಸಂಪಾದಕೀಯ ನಿಲುವು
|
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister