|

ಲಂಡನ್ (ಬ್ರಿಟನ್) – ಬ್ರಿಟನ್‌ನ ಲೆಸ್ಟರ್‌ನಲ್ಲಿ 2022 ರಲ್ಲಿ ನಡೆದ ದಂಗೆಯ ಕುರಿತು ‘ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್’ (SOAS) ವಿಶ್ವವಿದ್ಯಾಲಯವು ‘ಬೆಟರ್ ಟುಗೆದರ್’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಹಿಂಸಾಚಾರಕ್ಕೆ ಹಿಂದೂಗಳು ಮತ್ತು ಹಿಂದುತ್ವದ ಸಿದ್ಧಾಂತವೇ ಕಾರಣ ಎಂದು ಹೊಣೆ ಮಾಡಲಾಗಿದೆ; ಆದರೆ, ಪೊಲೀಸ್ ದಾಖಲೆಗಳು ಮತ್ತು ಸ್ಥಳೀಯ ವಾಸ್ತವವು ವಿಭಿನ್ನವಾಗಿದೆ ಎಂದು ಲೆಸ್ಟರ್‌ನ ಹಿಂದೂ ಸಮುದಾಯ ಮತ್ತು ‘ಹಿಂದೂ ಕಮ್ಯುನಿಟಿ ಆರ್ಗನೈಸೇಶನ್ ಗ್ರೂಪ್’ ಹೇಳಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಹಿಂದೂಗಳನ್ನು ಪ್ರತಿನಿಧಿಸುವ ಈ ಗುಂಪು, ಈ ವರದಿಯು ವಾಸ್ತವಕ್ಕೆ ದೂರವಾಗಿದ್ದು, ಕೇವಲ ಹಿಂದೂಗಳನ್ನು ಗುರಿಯಾಗಿಸಲು ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದೆ.
ಸೊರೊಸ್ ಸಂಸ್ಥೆಯಿಂದ ಧನಸಹಾಯ ಮತ್ತು ತನಿಖಾ ಸಮಿತಿಯ ಬಗ್ಗೆ ಪ್ರಶ್ನೆ
ಈ ವರದಿಯನ್ನು ಸಿದ್ಧಪಡಿಸಲು ಜಾರ್ಜ್ ಸೊರೊಸ್ ಅವರ ‘ಓಪನ್ ಸೊಸೈಟಿ ಫೌಂಡೇಶನ್’ನಿಂದ ಅಂದಾಜು 6.50 ಕೋಟಿ ರೂಪಾಯಿಗಳಷ್ಟು ಹಣವನ್ನು ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಸೊರೊಸ್ ಸಂಸ್ಥೆಯಿಂದ ಹಣ ಪಡೆದಿರುವುದರಿಂದ ಈ ವರದಿಯ ನಿಷ್ಪಕ್ಷಪಾತದ ಮೇಲೆ ಪ್ರಶ್ನೆಗಳು ಎದ್ದಿವೆ ಎಂದು ಹಿಂದೂ ಸಂಘಟನೆಗಳು ಹೇಳಿವೆ. ಈ ತನಿಖಾ ಸಮಿತಿಯಲ್ಲಿ ಸುರೇಶ ಗ್ರೋವರ್, ಚೇತನ ಭಟ್ ಮತ್ತು ಜುವಾನ ಮೆಂಡೆಜ್ ಎಂಬುವವರು ಇದ್ದರು. ಸಮಿತಿಯ ಕೆಲವು ಸದಸ್ಯರು ಈ ಮೊದಲೇ ಹಿಂದೂಗಳನ್ನು ದೋಷಿಗಳೆಂದು ಬಿಂಬಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಹಿಂದೂಗಳ ಮೇಲಿನ ದಾಳಿಗಳ ನಿರ್ಲಕ್ಷ್ಯ
ಸೆಪ್ಟೆಂಬರ್ 2022 ರಲ್ಲಿ ಸತತ ಮೂರು ರಾತ್ರಿಗಳ ಕಾಲ ಹಿಂದೂಗಳ ಮನೆಗಳು, ವಾಹನಗಳು ಮತ್ತು ದೇವಾಲಯಗಳ ಮೇಲೆ ದಾಳಿಗಳು ನಡೆದಿದ್ದವು. ದೇವಾಲಯದ ಧ್ವಜವನ್ನು ಕಿತ್ತೆಸೆದು ಮಂದಿರವನ್ನು ಧ್ವಂಸಗೊಳಿಸಿದ ಘಟನೆಗಳೂ ಸಂಭವಿಸಿದ್ದವು. ಹಿಂದೂ ಯುವಕರ ಮೇಲೆ ಬೀದಿಗಳಲ್ಲಿ ಹಲ್ಲೆ ನಡೆದಿತ್ತು. ಆದರೆ, ಈ ವರದಿಯಲ್ಲಿ ಇಂತಹ ಘಟನೆಗಳನ್ನು ಗೌಣವಾಗಿ ಪರಿಗಣಿಸಿ, ಹಿಂದುತ್ವವನ್ನೇ ಆಕ್ರಮಣಕಾರಿ ಎಂದು ತೋರಿಸಲಾಗಿದೆ. ಲಂಡನ್‌ನಿಂದ ಬಸ್‌ಗಳಲ್ಲಿ ಜನರನ್ನು ಕರೆತರಲಾಗಿತ್ತು ಎಂಬ ಆರೋಪವನ್ನು ಜಿ.ಪಿ.ಎಸ್. (GPS) ದಾಖಲೆಗಳು ಸುಳ್ಳೆಂದು ಸಾಬೀತುಪಡಿಸಿದ್ದರೂ, ವರದಿಯಲ್ಲಿ ಅಂತಹ ಸುಳ್ಳು ದಾವೆಗಳಿಗೆ ಮಹತ್ವ ನೀಡಲಾಗಿದೆ.
ವದಂತಿಗಳು ಮತ್ತು ತಪ್ಪು ಮಾಹಿತಿ
ಕ್ರಿಕೆಟ್ ಪಂದ್ಯದ ನಂತರದ ಘಟನೆಯನ್ನು ಧಾರ್ಮಿಕ ಬಣ್ಣ ಬಳಿಯಲು ಯತ್ನಿಸಲಾಗಿತ್ತು, ಆದರೆ ಇದರಲ್ಲಿ ಯಾವುದೇ ಧಾರ್ಮಿಕ ಉದ್ದೇಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು. 15 ವರ್ಷದ ಬಾಲಕಿಯ ಅಪಹರಣದ ಯತ್ನ ನಡೆದಿದೆ ಎಂಬ ಸುದ್ದಿ ಸುಳ್ಳೆಂದು ಸಾಬೀತಾಗಿತ್ತು. ಮಸೀದಿಗಳ ಮೇಲೆ ದಾಳಿ ನಡೆದಿದೆ ಎಂಬ ವದಂತಿಗಳೂ ತಪ್ಪು ಎಂದು ಪೊಲೀಸರು ತಿಳಿಸಿದ್ದರು. ಹೀಗಿದ್ದರೂ, ಇಂತಹ ಸುಳ್ಳು ಮಾಹಿತಿಗಳಿಗೆ ಈ ವರದಿಯಲ್ಲಿ ಸ್ಥಾನ ನೀಡಲಾಗಿದೆ ಎಂಬುದು ಪೊಲೀಸರು ತಿಳಿಸಿದರು. ಆದರೂ ಕೂಡ ಈ ದಾವೆಗಳಿಗೆ ವರದಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂದರ್ಭ
ಬ್ರಿಟಿಷ್ ಸರಕಾರದ ಅಧಿಕೃತ ತನಿಖೆ ಮತ್ತು ಹೆನ್ರಿ ಜಾಕ್ಸನ್ ಸೊಸೈಟಿಯ ವರದಿಯು ಹಿಂದೂಗಳ ಮೇಲಿನ ದಾಳಿಯನ್ನು ಉಲ್ಲೇಖಿಸಿದೆ. ಆದರೆ, SOAS ವರದಿಯು ಏಕಪಕ್ಷೀಯ ನಿರೂಪಣೆಯನ್ನು ಮುಂದಕ್ಕೆ ತಳ್ಳುತ್ತಿದೆ ಎಂದು ಆರೋಪಿಸಲಾಗಿದೆ. ಹಿಂದೂ ಸಮುದಾಯವು ಈ ವರದಿಯನ್ನು ತಿರಸ್ಕರಿಸಿದ್ದು, ಇದು ಜಾಗತಿಕ ಮಟ್ಟದಲ್ಲಿ ಹಿಂದೂಗಳನ್ನು ಅಪಕೀರ್ತಿ ಮಾಡುವ ಪಿತೂರಿ ಎಂದು ಹೇಳಿದೆ.
ಸಂಪಾದಕೀಯ ನಿಲುವುಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಹಿಂದೂಗಳನ್ನೇ ಆಕ್ರಮಣಕಾರಿಗಳನ್ನಾಗಿ ಬಿಂಬಿಸಿ ಮುಸ್ಲಿಮರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation