ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ

ಮಧ್ಯಪ್ರದೇಶ – ಸಿಹೋರ್ ನ ಪ್ರಸಿದ್ಧ ವ್ಯಾಪಾರಿ ಸೇಠ್ ಜುಮ್ಮಾಲಾಲ್ ರುಥಿಯಾ ಅವರ ವಂಶಜರು ೧೦೯ ವರ್ಷಗಳ ಹಿಂದೆ ಬ್ರಿಟಿಷ್ ಸರಕಾರಕ್ಕೆ ನೀಡಿದ ಸಾಲವನ್ನು ವಸೂಲಿ ಮಾಡಲು ಬ್ರಿಟಿಷ್ ಸರಕಾರಕ್ಕೆ ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ. ೧೯೧೭ ರಲ್ಲಿ ಮೊದಲ ಮಹಾಯುದ್ಧದ ಸಮಯದಲ್ಲಿ ವ್ಯಾಪಾರಿ ರುಥಿಯಾ ಅವರು ಬ್ರಿಟಿಷ್ ಸರಕಾರಕ್ಕೆ ಸಾಲ ನೀಡಿದ್ದರು.
Indian Royal Family Moves to Recover 109-Year-Old Loan from Britain 🇮🇳💰🇬🇧
Descendants of Seth Jummalal Ruthia, a prominent businessman from Sehore, are preparing a legal notice to the British government to reclaim a loan extended in 1917 during World War I.
After more than a… pic.twitter.com/Jk3XEq0VQU
— Sanatan Prabhat (@SanatanPrabhat) February 26, 2026
೧. ೧೯೧೭ ರಲ್ಲಿ ಮೊದಲ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸರಕಾರವು ಸಿಹೋರ್ ನ ಪ್ರಸಿದ್ಧ ವ್ಯಾಪಾರಿ ಸೇಠ್ ಜುಮ್ಮಾಲಾಲ್ ರುಥಿಯಾ ಅವರಿಂದ ೩೫ ಸಹಸ್ರ ರೂಪಾಯಿಗಳ ಸಾಲ ಪಡೆದಿತ್ತು. ಆ ಸಮಯದಲ್ಲಿ ಸೇಠ್ ಜುಮ್ಮಾಲಾಲ್ ರುಥಿಯಾ ಭೋಪಾಲ್ ಸಂಸ್ಥಾನದ ಒಬ್ಬ ಶ್ರೀಮಂತ ವ್ಯಕ್ತಿಯಾಗಿದ್ದರು. ಆ ಕಾಲದಲ್ಲಿ ಈ ಮೊತ್ತವು ಅತ್ಯಂತ ದೊಡ್ಡದಾಗಿ ಪರಿಗಣಿಸಲ್ಪಟ್ಟಿತ್ತು.
೨. ‘ಬ್ರಿಟಿಷ್ ಸರಕಾರವು ೧೦೯ ವರ್ಷಗಳ ನಂತರವೂ ಈ ಸಾಲವನ್ನು ಮರುಪಾವತಿ ಮಾಡಿಲ್ಲ’, ಎಂಬುದು ರುಥಿಯಾ ಕುಟುಂಬದವರ ಆರೋಪವಾಗಿದೆ. ಸೇಠ್ ಜುಮ್ಮಾಲಾಲ್ ರುಥಿಯಾ ಅವರ ಮೊಮ್ಮಗ ವಿವೇಕ್ ರುಥಿಯಾ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಬ್ರಿಟಿಷ್ ಸರಕಾರಕ್ಕೆ ಸಾಲ ನೀಡಿರುವ ಹಳೆಯ ದಾಖಲೆಗಳು ಪತ್ತೆಯಾಗಿವೆ ಎಂದು ವಿವೇಕ್ ಹೇಳಿದ್ದಾರೆ. ‘ಹಳೆಯ ದಾಖಲೆಗಳಲ್ಲಿ ಕೆಲವು ಪ್ರಮಾಣಪತ್ರಗಳು, ಪತ್ರವ್ಯವಹಾರಗಳು, ತಂದೆಯ ಮರಣದ ನಂತರದ ಕುಟುಂಬದ ಮರಣಶಾಸನ (ವಿಲ್) ಸೇರಿದಂತೆ ಬ್ರಿಟಿಷರಿಗೆ ಸಾಲ ನೀಡಿದ ಬಗ್ಗೆ ಲಿಖಿತ ಪುರಾವೆಗಳು ಸಿಕ್ಕಿವೆ’, ಎಂದು ವಿವೇಕ್ ರುಥಿಯಾ ತಿಳಿಸಿದ್ದಾರೆ.
೩. ಭಾರತದ ಸ್ವಾತಂತ್ರ್ಯದ ಮೊದಲು ರುಥಿಯಾ ಕುಟುಂಬವು ಸಿಹೋರ್ ಮತ್ತು ಭೋಪಾಲ್ ಸಂಸ್ಥಾನಗಳಲ್ಲಿ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿತ್ತು. ಆಡಳಿತದಲ್ಲಿಯೂ ಅವರ ವಿಶೇಷ ಪ್ರಭಾವವಿತ್ತು. ರುಥಿಯಾ ಅವರ ಬಳಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಮತ್ತು ಆಸ್ತಿ ಇತ್ತು. ಇಂದಿಗೂ ಸಿಹೋರ್‌ನ ಶೇ. ೨೦ ರಿಂದ ೩೦ ರಷ್ಟು ವಸತಿ ಪ್ರದೇಶಗಳು ರುಥಿಯಾ ಕುಟುಂಬದ ಮಾಲೀಕತ್ವದ ಭೂಮಿಯ ಮೇಲೆ ಇವೆ ಎಂದು ಹೇಳಲಾಗುತ್ತದೆ. ರುಥಿಯಾ ಕುಟುಂಬದ ಆಸ್ತಿಗಳು ಇಂದಿಗೂ ಸಿಹೋರ್, ಇಂದೋರ ಮತ್ತು ಭೋಪಾಲನಲ್ಲಿ ಇವೆ.
೪. ಕಾನೂನು ತಜ್ಞರ ಪ್ರಕಾರ ಈ ಪ್ರಕ್ರಿಯೆಯಲ್ಲಿ ಕಾನೂನು ಅಡೆತಡೆಗಳು ಬರುವ ಸಾಧ್ಯತೆಯಿದೆ. ಬ್ರಿಟಿಷ್ ಸರಕಾರಕ್ಕೆ ನೋಟಿಸ್ ಕಳುಹಿಸಬಹುದು; ಆದರೆ ಸಾಲ ನೀಡುವಾಗ ಅಥವಾ ಅದನ್ನು ಮರುಪಾವತಿಸಲು ಯಾವ ಶರತ್ತುಗಳನ್ನು ವಿಧಿಸಲಾಗಿತ್ತು? ಹಾಗೆಯೇ ಸ್ವಾತಂತ್ರ್ಯ ಸಿಕ್ಕ ನಂತರ ಇಂತಹ ಸಾಲಗಳ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಾಗಿತ್ತು? ಇಂತಹ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !