ಭಾಜಪದ ಹಿರಿಯ ನಾಯಕ ಕಿರಿಟ್ ಸೋಮಯ್ಯ ಅವರಿಂದ ಮುಖ್ಯಮಂತ್ರಿಗಳಿಗೆ ಕಠಿಣ ಕ್ರಮಕ್ಕಾಗಿ ಒತ್ತಾಯ!

  • ಮಾಲೇಗಾಂವ್ ಮಹಾನಗರ ಪಾಲಿಕೆಯಲ್ಲಿ ಸಾಮೂಹಿಕ ನಮಾಜ್ ಮಾಡಿದ ಪ್ರಕರಣ

  • ಮಹಾನಗರ ಪಾಲಿಕೆಯಲ್ಲಿನ ಈ ಘಟನೆ ಸಂವಿಧಾನ ವಿರೋಧಿ ಎಂದು ಭಾಜಪ ಶಾಸಕ ಅತುಲ್ ಭಾತ್ಖಲ್ಕರ್ ಟೀಕೆ!

ಮಾಲೇಗಾಂವ್ – ಮಾಲೇಗಾಂವ್ ಮಹಾನಗರ ಪಾಲಿಕೆಯ ವಿದ್ಯುತ್ ವಿಭಾಗದಲ್ಲಿ ಮುಸ್ಲಿಮರು ಸಾಮೂಹಿಕವಾಗಿ ನಮಾಜ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಜಪ ನಾಯಕ ಕಿರಿಟ ಸೋಮಯ್ಯ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತಮ್ಮ ಪತ್ರದಲ್ಲಿ ಸೋಮಯ್ಯ ಅವರು, ‘ಮಹಾನಗರ ಪಾಲಿಕೆಯ ವಿದ್ಯುತ್ ವಿಭಾಗದ ಕಚೇರಿಯಲ್ಲಿ ಬಹಿರಂಗವಾಗಿ ನಮಾಜ್ ಮಾಡಲಾಗಿದೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಈ ಘಟನೆಗೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಸಂಬಂಧಿತ ಉದ್ಯೋಗಿಗಳನ್ನು ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಭಾಜಪ ಶಾಸಕ ಅತುಲ್ ಭಾತ್ಖಲ್ಕರ್ ಮಾತನಾಡಿ, ‘ಮಹಾನಗರ ಪಾಲಿಕೆಯ ಕಚೇರಿಯಲ್ಲಿ ನಮಾಜ್ ಮಾಡುವುದು ಕಾನೂನುಬಾಹಿರ ಮತ್ತು ಸಂವಿಧಾನ ವಿರೋಧಿಯಾಗಿದೆ. ಈ ಪ್ರಕರಣದಲ್ಲಿ ಪಾಲಿಕೆ ಆಡಳಿತ ಮತ್ತು ರಾಜ್ಯ ಸರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು, ಹಾಗೆಯೇ ನಮಾಜ್ ಆಯೋಜಿಸಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹೇಳಿದ್ದಾರೆ.