|

ಜಮ್ಮು-ಕಾಶ್ಮೀರ – ಕಿಶ್ತವಾಡ್ ದ ಛಾತ್ರು ಎಂಬಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಶ್ವಾನ ‘ಟೈಸನ್’ ಮಹತ್ವದ ಸಾಧನೆ ಮಾಡಿದೆ. ಕಾರ್ಯಾಚರಣೆಯ ಸಮಯದಲ್ಲಿ ಟೈಸನ್ ಭಯೋತ್ಪಾದಕರು ಅಡಗಿದ್ದ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಿತು, ಅಲ್ಲದೆ ಚಕಮಕಿಯಲ್ಲಿ ಭಯೋತ್ಪಾದಕರ ಮೊದಲ ಗುಂಡನ್ನು ತಾನೇ ಎದುರಿಸಿತು. ಈ ಚಕಮಕಿಯಲ್ಲಿ ‘ಜೈಶ್-ಎ-ಮೊಹಮ್ಮದ್’ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಕೊಲ್ಲಲ್ಪಟ್ಟಿದ್ದಾನೆ. ಇಲ್ಲಿಯವರೆಗೆ ಅನೇಕ ಕಾರ್ಯಾಚರಣೆಗಳಲ್ಲಿ ಸೇನೆಯ ಶ್ವಾನಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೈನಿಕರಿಗೆ ಸಹಾಯ ಮಾಡುವ ಮೂಲಕ ಪ್ರಮುಖ ಪಾತ್ರ ವಹಿಸಿವೆ. ಈ ಶ್ವಾನಗಳು ದೇಶಕ್ಕಾಗಿ ರಕ್ತವನ್ನೂ ಸುರಿಸಿವೆ.
೧. ಅಕ್ಟೋಬರ್ ೨೮, ೨೦೨೪ ರಂದು ಅಖ್ನೂರ್ ಪ್ರದೇಶದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಗುಂಡಿನ ದಾಳಿಯಲ್ಲಿ ‘ಫ್ಯಾಂಟಮ್’ ಎಂಬ ಶ್ವಾನ ದೇಶಕ್ಕಾಗಿ ಬಲಿದಾನ ನೀಡಿತ್ತು.
೨. ಸೆಪ್ಟೆಂಬರ್ ೨೦೨೩ ರಲ್ಲಿ ರಾಜೌರಿಯಲ್ಲಿ ನಡೆದ ಚಕಮಕಿಯಲ್ಲಿ ‘ಕೆಂಟ್’ ಹೆಸರಿನ ಹೆಣ್ಣು ‘ಲ್ಯಾಬ್ರಡಾರ್’ ತಳಿಯ ಶ್ವಾನವೂ ಪರಮೋಚ್ಚ ಬಲಿದಾನ ಮಾಡಿತ್ತು. ಭಯೋತ್ಪಾದಕರನ್ನು ಬೆನ್ನಟ್ಟುವಲ್ಲಿ ‘ಕೆಂಟ್’ ಈ ಕಾರ್ಯಾಚರಣೆಯ ನೇತೃತ್ವ ವಹಿಸಿತ್ತು, ಆಗ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಆರಂಭವಾಯಿತು. ಸೈನಿಕರನ್ನು ರಕ್ಷಿಸಲು ‘ಕೆಂಟ್’ ಗುಂಡನ್ನು ತಾನೇ ಸ್ವೀಕರಿಸಿ ಪ್ರಾಣಾರ್ಪಣೆ ಮಾಡಿತು.
೩. ಭಾರತೀಯ ಸೇನೆಯ ಈ ಮೂಕ ಯೋಧರ ಶೌರ್ಯ ಮತ್ತು ನಿಷ್ಠೆಯು ಸೇನೆಯ ಪ್ರತಿಯೊಂದು ಕಾರ್ಯಾಚರಣೆಯ ದೊಡ್ಡ ಶಕ್ತಿಯಾಗಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !