
ನವದೆಹಲಿ – ಭಾರತೀಯ ರೈಲ್ವೆಯು ಮಾರ್ಚ್ 1, 2026 ರಿಂದ ತನ್ನ ಹಳೆಯ ‘ಯು.ಟಿ.ಎಸ್.’ (ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್) ಹೆಸರಿನ ‘ಮೊಬೈಲ್ ಆ್ಯಪ್’ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಿದ್ದು, ಈಗ ‘ರೇಲ್ ಒನ್’ ಎಂಬ ಹೆಸರಿನ ಹೊಸ ಆ್ಯಪ್ ಅನ್ನು ಪ್ರಾರಂಭಿಸಲಿದೆ. ‘ಯು.ಟಿ.ಎಸ್. ಆ್ಯಪ್’ ಅನ್ನು ಪ್ರಸ್ತುತ ಕಾಯ್ದಿರಿಸದ ಅಂದರೆ ಜನರಲ್ ಟಿಕೆಟ್‌ಗಳ ಜೊತೆಗೆ ‘ಪ್ಲಾಟ್‌ಫಾರ್ಮ್ ಪಾಸ್’ ಮತ್ತು ‘ಸೀಸನ್ ಪಾಸ್‌ಬುಕ್’ಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿತ್ತು. ಈಗ ‘ರೇಲ್ ಒನ್’ ಆ್ಯಪ್ ಎಲ್ಲಾ ಆನ್‌ಲೈನ್ ಟಿಕೆಟ್ ಸೇವೆಗಳು ಮತ್ತು ರೈಲ್ವೆಗೆ ಸಂಬಂಧಿಸಿದ ಸೌಲಭ್ಯಗಳನ್ನು ನಿರ್ವಹಿಸಲಿದೆ.
1. ‘ರೇಲ್ ಒನ್’ ಇದು ಒಂದೇ ಸ್ಥಳದಲ್ಲಿ ಅನೇಕ ಸೇವೆಗಳನ್ನು ಒಟ್ಟುಗೂಡಿಸುವ ಆ್ಯಪ್ ಆಗಿದೆ. ಇದರಲ್ಲಿ ಕಾಯ್ದಿರಿಸದ (ಜನರಲ್) ಮತ್ತು ಕಾಯ್ದಿರಿಸಿದ (ರಿಸರ್ವ್ಡ್) ಟಿಕೆಟ್ ಪಡೆಯುವುದು, ಪ್ಲಾಟ್‌ಫಾರ್ಮ್ ಟಿಕೆಟ್ ಖರೀದಿ, ರೈಲ್ವೆಯ ನೈಜ ಸಮಯದ ಮಾಹಿತಿ (ರನ್ನಿಂಗ್ ಸ್ಟೇಟಸ್) ಮತ್ತು ಪಿ.ಎನ್.ಆರ್. ಸ್ಥಿತಿ ಪರಿಶೀಲನೆ (ಟಿಕೆಟ್ ವೇಟಿಂಗ್ ಇದೆಯೇ ಅಥವಾ ಕನ್ಫರ್ಮ್ ಆಗಿದೆಯೇ ಎಂದು ತಿಳಿಯಲು), ರೈಲ್ವೆ ಬೋಗಿಗಳ ಮಾಹಿತಿ, ಆಹಾರ ಪದಾರ್ಥಗಳನ್ನು ಆರ್ಡರ್ ಮಾಡುವುದು ಮುಂತಾದ ಸೌಲಭ್ಯಗಳನ್ನು ನೀಡಲಾಗಿದೆ. ವಿವಿಧ ಸೌಲಭ್ಯಗಳು ಆ್ಯಪ್‌ನಲ್ಲಿಯೇ ಲಭ್ಯವಿರುವುದರಿಂದ ಪ್ರಯಾಣಿಕರು ಇನ್ನು ಮುಂದೆ ಬೇರೆ ಬೇರೆ ಆ್ಯಪ್‌ಗಳನ್ನು ಬಳಸುವ ಅಗತ್ಯವಿಲ್ಲ.
2. ಪ್ರಯಾಣಿಕರು ತಮ್ಮ ಬಳಿ ಪ್ರಸ್ತುತ ಇರುವ ‘ಯು.ಟಿ.ಎಸ್.’ ಅಥವಾ ‘ಐ.ಆರ್.ಸಿ.ಟಿ.ಸಿ.’ ‘ಲಾಗಿನ್’ ವಿವರಗಳನ್ನು ಬಳಸಿಯೇ ‘ರೇಲ್ ಒನ್’ ಆ್ಯಪ್‌ಗೆ ಲಾಗಿನ್ ಮಾಡಬಹುದು.
3. ರೇಲ್ ಒನ್ ಆ್ಯಪ್ ಮೂಲಕ ಜುಲೈ 2026 ರವರೆಗೆ ಕಾಯ್ದಿರಿಸದ ಟಿಕೆಟ್‌ಗಳಿಗಾಗಿ ‘ಡಿಜಿಟಲ್ ಪೇಮೆಂಟ್’ ಮಾಡಿದರೆ ಪ್ರಯಾಣಿಕರಿಗೆ ಶೇ. 3 ರಷ್ಟು ರಿಯಾಯಿತಿ ಸಿಗಲಿದೆ.
‘ರೇಲ್ ಒನ್’ ಆ್ಯಪ್ ಡೌನ್‌ಲೋಡ್ ಮಾಡಿ! – ರೈಲ್ವೆ ಆಡಳಿತ ಮಂಡಳಿ
‘ಯು.ಟಿ.ಎಸ್. ಆ್ಯಪ್’ ಫೆಬ್ರವರಿ 28 ರವರೆಗೆ ಚಾಲ್ತಿಯಲ್ಲಿರುತ್ತದೆ; ಆದರೆ ಮಾರ್ಚ್ 1 ರ ನಂತರ ರೈಲ್ವೆ ಕಾಯ್ದಿರಿಸುವಿಕೆಗಾಗಿ ‘ರೇಲ್ ಒನ್’ ಆ್ಯಪ್ ಅನ್ನೇ ಬಳಸಬೇಕಾಗುತ್ತದೆ. ‘ಪ್ರಯಾಣಿಕರು ‘ರೇಲ್ ಒನ್’ ಆ್ಯಪ್ ಡೌನ್‌ಲೋಡ್ ಮಾಡಿ ಅದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಇದರಿಂದ ಪ್ರಯಾಣದ ಸಮಯದಲ್ಲಿ ತೊಂದರೆಯಾಗುವುದಿಲ್ಲ’ ಎಂದು ರೈಲ್ವೆ ಆಡಳಿತ ಮಂಡಳಿ ತಿಳಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!