ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ಆರೋಪ

ಮಾಸ್ಕೋ (ರಷ್ಯಾ) – ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ಆರೋಪದ ಮೇಲೆ ‘ಟೆಲಿಗ್ರಾಂ’ ಆ್ಯಪ್ ಸಂಸ್ಥಾಪಕ ಪಾವೆಲ್ ಡುರೊವ್ ವಿರುದ್ಧ ರಷ್ಯಾ ಮೊಕದ್ದಮೆ ದಾಖಲಿಸಿದೆ. ರಷ್ಯಾದ ಭದ್ರತಾ ಸಂಸ್ಥೆ ‘ಫೆಡರಲ್ ಸೆಕ್ಯೂರಿಟಿ ಸರ್ವಿಸ್’ ನೀಡಿದ ಮಾಹಿತಿಯ ಮೇರೆಗೆ ತನಿಖೆ ಆರಂಭಿಸಲಾಗಿದೆ. ಪಾವೆಲ್ ಡುರೊವ್ ಪ್ರಸ್ತುತ ದುಬೈನಲ್ಲಿ ವಾಸವಿದ್ದು, ಟೆಲಿಗ್ರಾಂನ ಪ್ರಧಾನ ಕಚೇರಿಯೂ ದುಬೈನಲ್ಲೇ ಇದೆ. ಅದರಿಂದಾಗಿ ರಷ್ಯಾದ ಈ ಕ್ರಮವು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಆರೋಪಗಳನ್ನು ತಳ್ಳಿಹಾಕಿದ ಟೆಲಿಗ್ರಾಂ
ಟೆಲಿಗ್ರಾಂ ಅಪರಾಧ ಚಟುವಟಿಕೆಗಳ ಕೇಂದ್ರವಾಗಿದೆ ಅಥವಾ ಅದರ ಮೇಲೆ ಪಾಶ್ಚಿಮಾತ್ಯ ಮತ್ತು ಉಕ್ರೇನ್‌ನ ಗುಪ್ತಚರ ಸಂಸ್ಥೆಗಳ ಪ್ರಭಾವವಿದೆ ಎಂಬ ಆರೋಪಗಳನ್ನು ಟೆಲಿಗ್ರಾಂ ಸಂಸ್ಥೆಯು ಸ್ಪಷ್ಟವಾಗಿ ತಳ್ಳಿಹಾಕಿದೆ. ವಿಶ್ವಾದ್ಯಂತ ತಮ್ಮ ಆ್ಯಪ್ ಅನ್ನು ಒಂದು ಬಿಲಿಯನ್ (೧00 ಕೋಟಿ) ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರು ಬಳಸುತ್ತಿದ್ದಾರೆ ಮತ್ತು ಬಳಕೆದಾರರ ಗೌಪ್ಯತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಸಂಸ್ಥೆಯು ಬದ್ಧವಾಗಿದೆ ಎಂದು ಟೆಲಿಗ್ರಾಂ ದಾವೆ ಮಾಡಿದೆ.
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ