ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಸೂತ್ರದಾರ ಸೈಫುಲ್ಲಾ ಕಸೂರಿ ಬೆದರಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಪ್ರಮುಖ ಸೂತ್ರದಾರ, ಭಯೋತ್ಪಾದಕರ ಸೈಫುಲ್ಲಾ ಕಸೂರಿಯ ಹೊಸ ವೀಡಿಯೊವೊಂದು ಹೊರಬಂದಿದ್ದು, ಅದರಲ್ಲಿ ಅವನು ಸಮುದ್ರ ಮಾರ್ಗದ ಮೂಲಕ ಭಾರತದ ಮೇಲೆ ಭಯೋತ್ಪಾದನಾ ದಾಳಿ ನಡೆಸುವ ಸಂಚು ರೂಪಿಸುತ್ತಿರುವುದು ಬಹಿರಂಗವಾಗಿದೆ. ಅಲ್ಲದೆ ಭಾರತದಲ್ಲಿನ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸುವುದಾಗಿ ಅವನು ಬೆದರಿಕೆ ಹಾಕಿದ್ದಾನೆ. ಈತ ಭಯೋತ್ಪಾದಕ ಹಫೀಜ್ ಸಯೀದ್ ನ ‘ಲಷ್ಕರ್-ಎ-ತೊಯ್ಬಾ’ ಸಂಘಟನೆಯ ಪ್ರಮುಖ ಭಯೋತ್ಪಾದಕನಾಗಿದ್ದಾನೆ. ೨೦೦೮ ರ ಮುಂಬಯಿ ದಾಳಿಯು ಸಮುದ್ರ ಮಾರ್ಗದ ಮೂಲಕವೇ ನಡೆದಿತ್ತು, ಈಗ ಅಂತಹದ್ದೇ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಸೂರಿಯು ವೀಡಿಯೊದಲ್ಲಿ, ಭೂಮಿ, ಆಕಾಶ ಅಥವಾ ಸಮುದ್ರ – ಶತ್ರುಗಳಿಗೆ ಎಲ್ಲಿಯೂ ಜಾಗ ಉಳಿಯುವುದಿಲ್ಲ. ಈ ದಾಳಿಯು ಅಲ್ಲಾನ ಇಚ್ಛೆಯಾಗಿದೆ. ಪಾಕಿಸ್ತಾನವು ಶೀಘ್ರದಲ್ಲೇ ಎಲ್ಲಾ ವ್ಯೂಹಾತ್ಮಕ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲಿದೆ ಎಂದು ಉದ್ಧಟತನದಿಂದ ಹೇಳಿದ್ದಾನೆ.
ಭಾರತವು ‘ಜಲ ಭಯೋತ್ಪಾದನೆ’ (ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದುಗೊಳಿಸಿದ್ದರಿಂದ ಪಾಕಿಸ್ತಾನದಲ್ಲಿ ಉಂಟಾಗಿರುವ ನೀರಿನ ಅಭಾವ) ನಡೆಸುತ್ತಿದೆ ಮತ್ತು ಬಲೂಚಿಸ್ತಾನದಲ್ಲಿ ಅಸ್ಥಿರತೆ ನಿರ್ಮಿಸುತ್ತಿದೆ ಎಂದು ಅವನು ಆರೋಪಿಸಿದ್ದಾನೆ. ವೀಡಿಯೊದಲ್ಲಿ ಕಸೂರಿಯು ತನಗೆ ಪಾಕಿಸ್ತಾನಿ ಸೈನ್ಯದ ಬೆಂಬಲವಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾನೆ ಹಾಗೂ ಸೈನ್ಯದ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಾನೆ.
ಸಂಪಾದಕೀಯ ನಿಲುವುಭಾರತದ ಮೇಲೆ ಈ ರೀತಿಯ ದಾಳಿ ನಡೆಸುವ ಬಹಿರಂಗ ಬೆದರಿಕೆ ಹಾಕುವವರನ್ನು, ಅವರು ದಾಳಿ ಮಾಡುವ ಮೊದಲೇ ಪಾಕಿಸ್ತಾನದೊಳಗೆ ನುಗ್ಗಿ ಹತ್ಯೆ ಮಾಡಬಾರದೇಕೆ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara