ಸಂತರ ಚೈತನ್ಯಮಯ ಮಾರ್ಗದರ್ಶನದಿಂದ ಜಾಗೃತವಾದ ಬೆಂಗಳೂರಿನ ಹಿಂದುತ್ವನಿಷ್ಠ ವಕೀಲರು ಹಾಗೂ ಹಿಂದೂ ಸಮಾಜ !

ಬೆಂಗಳುರು – ಭಾರತ ಇಂದು ಅನೇಕ ಸಂಕಟಗಳಿಂದ ಸುತ್ತುವರಿದಿದೆ. ಲವ್ ಜಿಹಾದ್, ಹಲಾಲ್ ಜಿಹಾದ್, ಲ್ಯಾಂಡ್ ಜಿಹಾದ್, ಇತಿಹಾಸದ ವಿಕೃತಿಕರಣ, ಅಲ್ಪಸಂಖ್ಯಾತರ ಓಲೈಕೆ, ಅಶ್ಲೀಲ ವೆಬ್‌ಸೀರಿಸ್‌ಗಳು, ವಂಚನೆ ಸೇರಿದಂತೆ ಅನೇಕ ಸವಾಲುಗಳು ನಮ್ಮ ಮುಂದಿವೆ. ಇವುಗಳಿಗೆ ಸಮಗ್ರ ಉಪಾಯಯೋಜನೆ ರೂಪಿಸುವುದು ಅಗತ್ಯವಾಗಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ ಗೌಡರು ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬಸವಗುಡಿಯ ಪೈ ವಿಸ್ತ ಕನ್ವೆನ್ಷನ್ ಹಾಲ್, ಸೌತ್ ಎಂಡ್ ಸರ್ಕಲ್ದಲ್ಲಿ ಆಯೋಜಿಸಲಾದ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ ಮೋಹನ್ ಗೌಡರು ಉಪಸ್ಥಿತರಿದ್ದರು.

ಪೂಜ್ಯ ರಮಾನಂದ ಗೌಡರು ಮಾತನಾಡುತ್ತಾ, ಹಿಂದೂಗಳಲ್ಲಿ ಧರ್ಮಬಂಧುತ್ವ ಕಡಿಮೆಯಾಗುತ್ತಿದೆ ಎಂದು ಹೇಳಿದರು. ಇಂದು ದೇಶವು ಭ್ರಷ್ಟಾಚಾರ, ಅನೀತಿ ಹಾಗೂ ದುರಾಡಳಿತದಿಂದ ಬಳಲುತ್ತಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು ಧರ್ಮಾಧಿಷ್ಠಿತ ಸಂಘಟನೆಯ ಮೂಲಕ ರಾಮರಾಜ್ಯವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು. ನಾವು ಭಗವಂತನ ಭಕ್ತರಾಗಿದಾಗ ಮಾತ್ರ ಇಂದಿನ ಸಂಕಟಗಳನ್ನು ದೂರ ಮಾಡಬಹುದು. ರಾಷ್ಟ್ರ ಮತ್ತು ಧರ್ಮವು ಒಂದೇ ನಾಣ್ಯದ ಎರಡು ಮುಖಗಳಂತಿವೆ. ಧರ್ಮ ಉನ್ನತ ಸ್ಥಿತಿಯಲ್ಲಿ ಇದ್ದಾಗ ಭಾರತವು ಗತ ವೈಭವವನ್ನು ಅನುಭವಿಸಿತ್ತು. ರಾಷ್ಟ್ರವು ಸನಾತನ ಧರ್ಮದ ಆಧಾರದ ಮೇಲೆ ನಡೆಯುವಾಗ ಮಾತ್ರ ಅದು ಯಶಸ್ವಿಯಾಗಿ ಮುಂದುವರಿಯುತ್ತದೆ. ರಾಷ್ಟ್ರದ ಆತ್ಮವೇ ಸನಾತನ ಧರ್ಮವಾಗಿದ್ದು, ಅದಕ್ಕೆ ಸಂವಿಧಾನಾತ್ಮಕ ಮಾನ್ಯತೆ ದೊರಕಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆದ್ದರಿಂದ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಅಗತ್ಯವಾಗಿದೆ. ಇದು ಕೇವಲ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ವ್ಯಕ್ತಿಗತ ಜೀವನದಲ್ಲಿಯೂ ಅನ್ವಯವಾಗಬೇಕು. “ಹೀನಾನಿ ಗುಣಾನಿ ದೂಷಯತಿ ಇತಿ ಹಿಂದು” ಎಂಬ ವ್ಯಾಖ್ಯಾನದ ಪ್ರಕಾರ, ಹೀನ ದುರ್ಗುಣಗಳನ್ನು ತ್ಯಜಿಸಿ ಸಾತ್ವಿಕ ಜೀವನ ನಡೆಸುವವನೇ ಹಿಂದೂ. ಇಂದು ಧರ್ಮಶಿಕ್ಷಣದ ಕೊರತೆಯಿಂದ ಹಿಂದೂಗಳು ಬಾಹ್ಯ ಆಕರ್ಷಣೆಗಳಿಗೆ ಒಳಗಾಗುತ್ತಿದ್ದಾರೆ. ಧರ್ಮಾಚರಣೆ ಇಲ್ಲದ ಕಾರಣ ಮನುಷ್ಯನು ದುಃಖವನ್ನು ಅನುಭವಿಸುತ್ತಿದ್ದಾನೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಅರ್ಥ ಮತ್ತು ಕಾಮದ ಬಗ್ಗೆ ಮಾತ್ರ ಒತ್ತು ನೀಡುತ್ತಿದ್ದು, ಧರ್ಮ ಮತ್ತು ಮೋಕ್ಷದ ಬಗ್ಗೆ ಸಮರ್ಪಕ ಮಾರ್ಗದರ್ಶನ ನೀಡದಿರುವುದರಿಂದ ಜನರು ದುಃಖಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು. ಧರ್ಮಶಾಸ್ತ್ರದಲ್ಲಿ “ಧರ್ಮೋ ರಕ್ಷತಿ ರಕ್ಷಿತಃ” ಎಂದು ಹೇಳಲಾಗಿದೆ. ನಾವು ಧರ್ಮವನ್ನು ಆಚರಣೆಯಲ್ಲಿ ತಂದಾಗ ಮಾತ್ರ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಗುರುವಿನ ಮಾರ್ಗದರ್ಶನದಲ್ಲಿ ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆ ಮಾಡಿದರೆ, ಭಗವಂತನೇ ನಮ್ಮ ರಕ್ಷಣೆ ಮಾಡುತ್ತಾನೆ. ಇದಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಹಕ್ಕ-ಬುಕ್ಕರು ಪ್ರೇರಣಾದಾಯಕ ಉದಾಹರಣೆಗಳಾಗಿದ್ದಾರೆ ಎಂದು ಅವರು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ. ಮೋಹನ್ ಗೌಡ ಇವರು ನಮ್ಮ ದೇಶದಲ್ಲಿ ಬೆಳೆಯುತ್ತಿರುವ ಹೊಸ ಪೀಳಿಗೆಗಳಿಗೆ ಧರ್ಮದ ಕುರಿತು ಜ್ಞಾನ ಸಿಗದಿರುವುದೇ ಈ ಅಧರ್ಮಾಚರಣೆಗೆ ಮೂಲ ಕಾರಣವೆಂದು ತೋರುತ್ತಿದೆ. ಅನ್ಯ ಧರ್ಮೀಯರಿಗೆ ಅವರ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮದ ಶಿಕ್ಷಣ ಪಡೆಯುವ ಅವಕಾಶವಿದೆ, ಆದರೆ ಹಿಂದೂಗಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗದ ಕಾರಣ ಅವರು ಧರ್ಮದಿಂದ ದೂರವಾಗುತ್ತಿದ್ದಾರೆ ಎಂದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ