|

ಚಿಖಲಿ (ಜಿಲ್ಲೆ ಬುಲಡಾಣಾ) – ಚಿಖಲಿ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಗೋವಂಶ ಹತ್ಯೆ ತಡೆಯಲು ಸಕ್ರಿಯರಾಗಿರುವ ಗೋರಕ್ಷಕ ಓಮರಾಜೆ ಮದನರಾಜೆ ಗಾಯಕವಾಡ ಅವರ ಮೇಲೆ ಕೆಲವು ಸಮಾಜಘಾತುಕ ಶಕ್ತಿಗಳು ಜೀವಹಾನಿ ಮಾಡುವ ಉದ್ದೇಶದಿಂದ ಆಕ್ರಮಣ ನಡೆಸಿವೆ. ಹಿಂದುತ್ವವಾದಿ ಸಂಘಟನೆಗಳು ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ.
ಫೆಬ್ರವರಿ ೨೧ ರ ಸಂಜೆ ೫.೪೫ ರ ಸುಮಾರಿಗೆ ಓಮರಾಜೆ ಗಾಯಕವಾಡ ಅವರು ಮನೆಗೆ ತೆರಳುತ್ತಿದ್ದಾಗ ಅಸ್ಮಾನ್ ಖಾನ್, ಅಕಿಲ್ ಖಾನ್ ಮತ್ತು ಫರ್ಜಾನ್ ಖಾನ್, ಅನೀಸ್ ಖಾನ್ ಎಂಬುವವರು ಅವರನ್ನು ತಡೆದರು. ನೀನು ಗೋರಕ್ಷಕನಾಗಿದ್ದೀಯಾ? ಹಿಂದೂ-ಹಿಂದೂ ಅಂತೀಯಾ? ಎಂದು ಪ್ರಶ್ನಿಸಿ ಗಲಾಟೆ ಮಾಡಿದರು, ಅಷ್ಟೇ ಅಲ್ಲದೆ ಅವರನ್ನು ಅಮಾನವೀಯವಾಗಿ ಒದ್ದು ಹಲ್ಲೆ ನಡೆಸಿದರು. ಗಾಯಕವಾಡ ಅವರಿಗೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ. ಕೆಲವು ತಿಂಗಳ ಹಿಂದೆ ಓಮರಾಜೆ ಅವರು ಗೋಮಾಂಸದ ಎರಡು ‘ಕಂಟೇನರ್’ಗಳನ್ನು ಹಿಡಿದುಕೊಟ್ಟಿದ್ದರು. ಆ ದ್ವೇಷದಿಂದ ಆರೋಪಿಗಳು ಈ ಕೆಲಸ ಮಾಡಿದ್ದಾರೆ.(ಪೊಲೀಸರು ಗೋರಕ್ಷಕರಿಗೆ ರಕ್ಷಣೆ ನೀಡುವುದಿಲ್ಲವೇಕೆ? ಗೋರಕ್ಷಕರ ಮೇಲೆ ಆಕ್ರಮಣ ನಡೆದಿದ್ದಕ್ಕೆ ಪೊಲೀಸರ ಹೊಣೆಗಾರಿಕೆಯನ್ನು ನಿರ್ಧರಿಸಿ ಅವರ ಮೇಲೆ ಕ್ರಮ ಕೈಗೊಳ್ಳಬಾರದೇಕೆ? – ಸಂಪಾದಕರು) ಓಮರಾಜೆ ಅವರು ಕೂಡಲೇ ಸಮೀಪದ ಅಂಗಡಿಯೊಂದರಲ್ಲಿ ಆಶ್ರಯ ಪಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
🚨🔥 Chikhli Tensions: Attack on Go Rakshak Raises Bigger Questions 🐄⚠️
In Chikhli (Buldhana district, Maharashtra), a Go rakshak was attacked after intercepting a suspected beef container.
The incident has intensified local tensions, with activists warning of strong… pic.twitter.com/BqM5DeoOcV
— Sanatan Prabhat (@SanatanPrabhat) February 23, 2026
ಹಿಂದೂ ಅಸ್ಮಿತೆಯ ಮೇಲಿನ ಪ್ರಹಾರ: ಹಿಂದುತ್ವವಾದಿಗಳ ಟೀಕೆ !
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿಂದುತ್ವವಾದಿಗಳು, ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಆಕ್ರಮಣವಲ್ಲ, ಬದಲಿಗೆ ಹಿಂದೂ ಅಸ್ಮಿತೆಯ ಮೇಲೆ ನಡೆದ ಪ್ರಹಾರವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಗೋರಕ್ಷಕರಿಗೆ ಪೊಲೀಸ್ ರಕ್ಷಣೆ ನೀಡಬೇಕು ಮತ್ತು ಆಕ್ರಮಣಕಾರಿಗಳನ್ನು ತಕ್ಷಣ ಬಂಧಿಸಿ ಅವರ ಮೇಲೆ ಮಕೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ) ದಂತಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯ ಮೂಲಕ ಆಗ್ರಹಿಸಲಾಗಿದೆ. (ಹಿಂದೂಗಳೇ, ಕೇವಲ ಮನವಿ ನೀಡಿ ಸುಮ್ಮನಾಗಬೇಡಿ, ಉದ್ಧಟ ಧರ್ಮಾಂಧರ ಮೇಲೆ ಕಠಿಣ ಕ್ರಮವಾಗುವವರೆಗೆ ಪೊಲೀಸ್ ಆಡಳಿತದ ಅನುಸರಣೆ ಮಾಡಿ! – ಸಂಪಾದಕರು) ಇದೇ ವೇಳೆ “ಎಟಿಗೆ ಎದಿರೇಟು ಎಂಬಂತೆ ಉತ್ತರ ನೀಡಲಾಗುವುದು” ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಸದ್ಯ ಓಮರಾಜೆ ಗಾಯಕವಾಡ ಅವರು ಚಿಕಿತ್ಸೆ ಪಡೆಯುತ್ತಿದ್ದು, ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಜಾಗರೂಕತೆ ವಹಿಸುತ್ತಿದ್ದಾರೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ