ಅಫ್ಘಾನಿಸ್ತಾನ: ಭಯೋತ್ಪಾದಕ ನೆಲೆಗಳ ಮೇಲೆ ಪಾಕಿಸ್ತಾನದಿಂದ ವೈಮಾನಿಕ ದಾಳಿ: ೧೭ ಜನರ ಸಾವು

ಕಾಬೂಲ (ಅಫ್ಘಾನಿಸ್ತಾನ) – ‘ಜೇನು ಗೂಡಿಗೆ ಕೈ ಹಾಕಿದಂತೆ’ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಮತ್ತು ಏರ್ ಸ್ಟ್ರೈಕ್ ನ ಸೇಡನ್ನು ತೀರಿಸಿಕೊಳ್ಳಲಾಗುವುದು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರಕಾರವು ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಅಫ್ಘಾನಿಸ್ತಾನದ ಪ್ರಾಂತ್ಯಗಳಲ್ಲಿ ಪಾಕಿಸ್ತಾನಿ ವಾಯುಪಡೆಯು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಂದೇ ಕುಟುಂಬದ ೧೭ ಜನರು ಸಾವನ್ನಪ್ಪಿದ್ದಾರೆ.
೧. ತಾಲಿಬಾನ್ ಸರಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಕುರಿತು ಮಾತನಾಡಿ, ಪಾಕಿಸ್ತಾನದ ಈ ಕೃತ್ಯವು ಖಂಡನೀಯವಾಗಿದೆ. ನಾವು ಇದರ ಪ್ರತಿಕಾರವನ್ನು ಖಂಡಿತ ತೀರಿಸಿಕೊಳ್ಳುತ್ತೇವೆ. ಪಾಕಿಸ್ತಾನವು ವಾಯುಗಡಿಯ ನಿಯಮಗಳನ್ನು ಉಲ್ಲಂಘಿಸಿದೆ. ಆದ್ದರಿಂದ ಅಫ್ಘಾನಿಸ್ತಾನಕ್ಕೆ ಪ್ರತಿಯಾಗಿ ಕ್ರಮ ಕೈಗೊಳ್ಳುವ ಪೂರ್ಣ ಅಧಿಕಾರವಿದೆ. ಸರಿಯಾದ ಸಮಯ ಬಂದಾಗ ನಾವು ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.
೨. ಪಾಕಿಸ್ತಾನದ ಮಾಹಿತಿ ಸಚಿವ ಅಟ್ಟಾವುಲ್ಲಾ ತರಾರ್ ಮಾತನಾಡಿ, ಪಾಕಿಸ್ತಾನವು ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಂಗಸಂಸ್ಥೆಯೊಂದನ್ನು ಗುರಿಯಾಗಿಸಿತು ಎಂದು ತಿಳಿಸಿದ್ದಾರೆ. ಈ ಸಂಘಟನೆಯು ಇತ್ತೀಚೆಗೆ ಇಸ್ಲಾಮಾಬಾದ್ ನ ಮಸೀದಿಯೊಂದರ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು, ಈ ದಾಳಿಯಲ್ಲಿ ೩೧ ಜನರು ಸಾವನ್ನಪ್ಪಿದ್ದರು ಮತ್ತು ೧೬೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ೨೦೦೮ ರ ಮ್ಯಾರಿಯಟ್ ಹೋಟೆಲ್ ಬಾಂಬ್ ಸ್ಫೋಟದ ನಂತರ ಇಸ್ಲಾಮಾಬಾದ್ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿತ್ತು.
ಸಂಪಾದಕೀಯ ನಿಲುವುಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಮಾಡುತ್ತದೆ ಮತ್ತು ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಇದೇ ರೀತಿಯ ದಾಳಿ ನಡೆಸಿದಾಗ ಬೊಬ್ಬೆ ಹೊಡೆಯುತ್ತದೆ; ಆದರೆ ಇದೇ ಪಾಕಿಸ್ತಾನ ಇಂದು ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುತ್ತದೆ. ಇದು ಅದರ ದ್ವಂದ್ವ ನೀತಿಯನ್ನು ತೋರಿಸುತ್ತದೆ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು