ದೇಶದಲ್ಲಿ ವಿಧ್ವಂಸಕ ಕೃತ್ಯಗಳ ಸಂಚು ಬಯಲು

ಚೆನ್ನೈ (ತಮಿಳುನಾಡು) – ದೆಹಲಿ ಪೊಲೀಸರು ತಮಿಳುನಾಡು ಮತ್ತು ಬಂಗಾಳದಿಂದ ೮ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಈ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್) ಮತ್ತು ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಭಯೋತ್ಪಾದಕರ ಗುಂಪು ವಿದೇಶಿ ಗೂಢಚರರ ನಿರ್ದೇಶನದ ಮೇರೆಗೆ ಭಾರತದಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿತ್ತು.
8 terrorists arrested from Tamil Nadu & West Bengal. 🚨
A nationwide sabotage plot linked to foreign handlers has been foiled by the Delhi Police.
Investigations reveal links to Pakistan-based Lashkar-e-Taiba, ISI, and Bangladesh-based terror networks.
Agencies had recently… pic.twitter.com/kqJztwC9GT
— Sanatan Prabhat (@SanatanPrabhat) February 22, 2026
೧. ಪೊಲೀಸರು ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಗಾರ್ಮೆಂಟ್ ಯೂನಿಟ್‌ಗಳಿಂದ ಮಿಜಾನೂರ್ ರೆಹಮಾನ್, ಮಹಮ್ಮದ್ ಶಬತ್, ಉಮರ್, ಮಹಮ್ಮದ್ ಲಿಟನ್, ಮಹಮ್ಮದ್ ಶಾಹಿದ್ ಮತ್ತು ಮಹಮ್ಮದ್ ಉಜ್ಜಲ್ ಎಂಬ ೬ ಭಯೋತ್ಪಾದಕರನ್ನು ಬಂಧಿಸಿದ್ದರೆ, ಇತರ ಇಬ್ಬರನ್ನು ಬಂಗಾಳದಿಂದ ಬಂಧಿಸಲಾಗಿದೆ. ಬಂಧಿತರಲ್ಲಿ ಕೆಲವರು ಬಾಂಗ್ಲಾದೇಶಿ ಪ್ರಜೆಗಳಾಗಿದ್ದಾರೆ. ಇವರು ತಮ್ಮ ಗುರುತನ್ನು ಮರೆಮಾಚಲು ನಕಲಿ ಆಧಾರಕಾರ್ಡ್‌ಗಳನ್ನು ಬಳಸುತ್ತಿದ್ದರು.
೨. ಇವರೆಲ್ಲರ ಸೂತ್ರಧಾರಿ ಕಾಶ್ಮೀರದ ನಿವಾಸಿಯಾಗಿದ್ದು, ಪ್ರಸ್ತುತ ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾನೆ. ಈ ಸೂತ್ರಧಾರಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದಾನೆ ಎಂದು ನಂಬಲಾಗಿದ್ದು, ಬಂಧಿತ ೮ ಶಂಕಿತರು ಆತನ ಸೂಚನೆಯಂತೆ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
೩. ಈ ಭಯೋತ್ಪಾದಕರಿಂದ ೮ ಮೊಬೈಲ್ ಫೋನ್‌ಗಳು ಮತ್ತು ೧೬ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಭಯೋತ್ಪಾದಕರು ಅನೇಕ ನಗರಗಳ ಪರಿಶೀಲನೆ ನಡೆಸಿ ಬಂದಿದ್ದರು. ಇದಲ್ಲದೆ ದೆಹಲಿಯಲ್ಲಿ ‘ಫ್ರೀ ಕಾಶ್ಮೀರ್’ (ಸ್ವತಂತ್ರ ಕಾಶ್ಮೀರ) ಭಿತ್ತಿಪತ್ರಗಳನ್ನು ಹಚ್ಚುವಲ್ಲಿಯೂ ಇವರು ಭಾಗಿಯಾಗಿದ್ದರು.
೪. ಕೆಂಪುಕೋಟೆ ಪರಿಸರ ಮತ್ತು ಹಿಂದೂಗಳ ದೇವಾಲಯಗಳ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಒಂದು ದಿನದ ಹಿಂದೆಯಷ್ಟೇ ಕೇಂದ್ರೀಯ ಭದ್ರತಾ ಸಂಸ್ಥೆಗಳು ಎಚ್ಚರಿಸಿದ್ದವು. ಅದರ ಬೆನ್ನಲ್ಲೇ ಈ ೮ ಜನರನ್ನು ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಇಂತಹವರ ಮೇಲೆ ತ್ವರಿತ ಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಮರಣದಂಡನೆ ಶಿಕ್ಷೆಯಾಗುವಂತೆ ಮತ್ತು ಅದು ತಕ್ಷಣವೇ ಜಾರಿಯಾಗುವಂತೆ ಸರಕಾರವು ಪ್ರಯತ್ನಿಸುವುದು ಅತ್ಯಗತ್ಯವಾಗಿದೆ ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ