ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ೩೭

ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಪರಿಹಾರವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಸ್ಫೂರ್ತಿ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ನಿಯಮಗಳು ಮತ್ತು ‘ಕಾಯಿಲೆಗೆ ಅನುಗುಣವಾಗಿ ಯೋಗ್ಯ ವ್ಯಾಯಾಮ’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಸ್ಫೂರ್ತಿದಾಯಕವಾಗಿರಲಿದೆ ! ಜೀರ್ಣಕ್ರಿಯೆಯನ್ನು ಸುಧಾರಿಸುವ ದೃಷ್ಟಿಯಿಂದ ವ್ಯಾಯಾಮಕ್ಕೆ ಸಂಬಂಧಿಸಿದ ಅಂಶಗಳನ್ನು ನೀಡಲಾಗಿದೆ.

ಜೀರ್ಣವಾಗುವ ದೃಷ್ಟಿಯಿಂದ ವ್ಯಾಯಾಮಗಳಿಗೆ ಸಂಬಂಧಿಸಿದ ಗಮನಕ್ಕೆ ಬಂದ ಅಂಶಗಳನ್ನು ಹಿಂದಿನ ಸಂಚಿಕೆಯಲ್ಲಿ ಓದಿದೆವು. ಅದರ ಮುಂದಿನ ಭಾಗವನ್ನು ಇಲ್ಲಿ ಕೊಡಲಾಗಿದೆ.
೨. ವ್ಯಾಯಾಮವನ್ನು ಮಾಡುವಾಗ ಗಮನದಲ್ಲಿಡಬೇಕಾದ ಅಂಶಗಳು
ಅ. ವ್ಯಾಯಾಮವನ್ನು ಮಾಡಲು ಪ್ರಾರಂಭಿಸುವಾಗ ಅದನ್ನು ನಿಧಾನವಾಗಿ ಮಾಡಬೇಕು. ಅದಕ್ಕಾಗಿ ಸಮಯದ ಆಯೋಜನೆ ಮಾಡಿ ಮತ್ತು ವ್ಯಾಯಾಮವು ನಿರಂತರವಾಗಿರಬೇಕು. ತಮ್ಮ ದೇಹವು ಹೇಳಿದಂತೆ ವ್ಯಾಯಾಮವನ್ನು ಮಾಡಿರಿ !
ಆ. ಪ್ರತಿದಿನ ಮಧ್ಯಮ ಸ್ವರೂಪದ ವ್ಯಾಯಾಮಗಳನ್ನು ಮಾಡುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಮಧ್ಯ ಮಧ್ಯದಲ್ಲಿ ಮತ್ತು ಹೆಚ್ಚು ತೀವ್ರ ಸ್ವರೂಪದ ವ್ಯಾಯಾಮ ಮಾಡುವುದನ್ನು ತಡೆಯಿರಿ.
ಇ. ವ್ಯಾಯಾಮ ಮಾಡಲು ಪ್ರಾರಂಭಿಸುತ್ತಿದ್ದರೆ, ನಡೆಯುವುದು ಅಥವಾ ಹಗುರವಾದ ಯೋಗಾಸನಗಳನ್ನು ಮಾಡಿರಿ. ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಆಗುವುದಿಲ್ಲ.
ಈ. ವ್ಯಾಯಾಮವನ್ನು ಮಾಡುವಾಗ ಮತ್ತು ನಂತರ ಸ್ವಲ್ಪ ನೀರನ್ನು ಕುಡಿಯಿರಿ; ಏಕೆಂದರೆ ಜೀರ್ಣವಾಗಲು ಮತ್ತು ಕರಳುಗಳ ಚಟುವಟಿಕೆಯಾಗಲು ನೀರು ಮಹತ್ವದ್ದಾಗಿದೆ.
ಉ. ತಿಂದ ನಂತರ ತಕ್ಷಣ ವ್ಯಾಯಾಮ ಮಾಡಬೇಡಿ. ನಡುವೆ ೧-೨ ಗಂಟೆಗಳ ಅಂತರವಿರಲಿ; ಅದರಿಂದ ಜೀರ್ಣಕ್ರಿಯೆಯು ಸರಿಯಾಗಿ ಆಗುವುದು.

ಊ. ತಮ್ಮ ಕ್ಷಮತೆ ಮತ್ತು ಹೊಟ್ಟೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಿತವಾಗಿ ವ್ಯಾಯಾಮ ಮಾಡಿರಿ. ಒಂದು ವೇಳೆ ನಿಮಗೆ ಜೀರ್ಣಕ್ರಿಯೆಯ ಯಾವುದೇ ಕಾಯಿಲೆಗಳಿದ್ದರೆ, ಆಧುನಿಕ ವೈದ್ಯರ ಮಾರ್ಗದರ್ಶನ ಪಡೆಯಿರಿ.
೩. ಆಹಾರ ಮತ್ತು ವ್ಯಾಯಾಮದ ಸರಿಯಾದ ಸಮತೋಲನದ ಅಗತ್ಯ !
ವ್ಯಾಯಾಮದಿಂದ ಹೆಚ್ಚೆಚ್ಚು ಲಾಭವನ್ನು ಪಡೆಯಲು ನಿಮಗೆ ಪೂರಕವಾದ ಆಹಾರದ ಅಗತ್ಯವಿದೆ. ಆಹಾರದಲ್ಲಿ ಆವಶ್ಯಕವಾಗಿರುವ ಆ ಎಲ್ಲ ಪೋಷಕಾಂಶಗಳಲ್ಲಿ ನಿಮ್ಮ ದೇಹದ ಪ್ರಕೃತಿಗೆ ಅನುಗುಣವಾಗಿ ಆಯ್ಕೆ ಮಾಡಬೇಕು. ಸಾಮಾನ್ಯವಾಗಿ ಭಾರತೀಯರ ಊಟದಲ್ಲಿ ಎಲ್ಲ ಪೋಷಕಾಂಶಗಳು ಇದ್ದೇ ಇರುತ್ತವೆ; ಆದರೆ ‘ತಮ್ಮ ಪ್ರಕೃತಿಗನುಸಾರ ಏನು ಆವಶ್ಯಕವಾಗಿದೆ ?’, ಅದಕ್ಕನುಸಾರ ವೈದ್ಯರ ಸಲಹೆಯಿಂದ ಅದರಲ್ಲಿ ಹೆಚ್ಚು-ಕಡಿಮೆ ಮಾಡಬಹುದು. ‘ವ್ಯಾಯಾಮವನ್ನು ಮಾಡುವವರು ಸಾಧ್ಯವಾದಷ್ಟು ಅತೀ ಖಾರದ ಆಹಾರವನ್ನು ಸೇವಿಸುವುದು ತಪ್ಪಿಸಿದರೆ ಜೀರ್ಣಕ್ರಿಯೆಯು ಬೇಗ ಸುಧಾರಿಸುತ್ತದೆ’, ಎಂಬುದು ಗಮನಕ್ಕೆ ಬಂದಿದೆ.
೪. ಪೂರ್ಣ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಈ ಆಹಾರಗಳು ಸೂಕ್ಷ್ಮ ಜೀವಾಣುಗಳಿಗಾಗಿ ಪೂರಕವಾಗಿರುವುದು
ಪೂರ್ಣ ಧಾನ್ಯಗಳು (ಪೂರ್ಣ ಧಾನ್ಯಗಳೆಂದರೆ ಧಾನ್ಯದ ನೈಸರ್ಗಿಕ ರೂಪವಾಗಿದೆ, ಯಾವುದು ನೈಸರ್ಗಿಕ ರೂಪವಾಗಿದೆಯೋ ಮತ್ತು ಯಾವುದರಲ್ಲಿ ಧಾನ್ಯದ ಎಲ್ಲ ಭಾಗಗಳು – ‘ಬ್ರಾಮ್ (ಹೊರಗಿನ ಪದರ)’, ‘ಎಂಡೋಸ್ಪರ್ಮ (ಮಧ್ಯದ ಭಾಗ)’ ಮತ್ತು ‘ಜರ್ಮ (ಒಳಗಿನ ಭಾಗ)’ – ಹಾಗೆಯೇ ಇರುತ್ತವೆ.), ಹಣ್ಣುಗಳು ಮತ್ತು ತರಕಾರಿಗಳು ಈ ಆಹಾರವು ಸೂಕ್ಷ್ಮ ಜೀವಾಣುಗಳಿಗಾಗಿ ಪೂರಕವಾಗಿರುತ್ತದೆ.
೫. ಸಾಧ್ಯವಾದಷ್ಟು ಊಟದ ಮೊದಲು ೩೦ ನಿಮಿಷಗಳು ಮತ್ತು ಊಟದ ನಂತರ ೨ ಗಂಟೆಗಳ ವರೆಗೆ ವ್ಯಾಯಾಮ ಮಾಡಬಾರದು. ಪ್ರತಿದಿನ ಊಟದ ಸಮಯವು ನಿಶ್ಚಿತವಾಗಿರಬೇಕು.’ (೮.೧೨.೨೦೨೪)
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಫೋಂಡಾ, ಗೋವಾ.
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !