
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ವಿಧನಸಭೆಯ ಆಯವ್ಯಯ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ಶಾಸಕ ಕಮಾಲ ಅಖ್ತರ್ ಅವರು ರಮಜಾನ್ ಸಮಯದಲ್ಲಿ ಮಸೀದಿಗಳಿಂದ ಧ್ವನಿವರ್ಧಕಗಳ ಮೂಲಕ ಸಹರಿ (ರಮಜಾನ್ ಮಾಸದಲ್ಲಿ ಮುಂಜಾನೆ ಉಪವಾಸ ಆರಂಭಿಸುವ ಮೊದಲು ಸೇವಿಸುವ ಆಹಾರ) ಮತ್ತು ಇಫ್ತಾರ್ (ಮುಸಲ್ಮಾನರು ಸಾಯಂಕಾಲ ಉಪವಾಸ ಬಿಡುವುದು) ಸಮಯದ ಘೋಷಣೆಗಳ ವಿಷಯವನ್ನು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಹೋಳಿ, ದೀಪಾವಳಿ, ದಸರಾ, ಕಾವಡಿ ಯಾತ್ರೆ ಹಾಗೂ ಕ್ರೈಸ್ತ ಮತ್ತು ಸಿಖ್ ಸಮುದಾಯದ ಹಬ್ಬಗಳನ್ನು ಆಚರಿಸಲಾಗುತ್ತದೆ. ಆದ್ದರಿಂದ ರಮಜಾನ್ ಪವಿತ್ರ ತಿಂಗಳಿನಲ್ಲಿ ಮಸೀದಿಗಳಿಗೆ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಲು ಅನುಮತಿ ನೀಡಬೇಕೆಂದು ಅವರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಅವರು, ‘ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು’ ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ ಎಂದು ತಿಳಿಸಿದರು.
ಗಡಿಯಾರವಿಲ್ಲದ ಕಾಲದ ಸಂಪ್ರದಾಯ ಈಗ ಕಾಲಬಾಹ್ಯ.
ಸಚಿವ ಖನ್ನಾ ಅವರು ಮುಂದೆ ಮಾತನಾಡಿ, ಸಹರಿ ಮತ್ತು ಇಫ್ತಾರ್ ಸಮಯದ ಬಗ್ಗೆ ಮಸೀದಿಗಳಿಂದ ಘೋಷಣೆ ಮಾಡುವ ಸಂಪ್ರದಾಯವು ಗಡಿಯಾರಗಳಿಲ್ಲದ ಕಾಲದ್ದಾಗಿದೆ. ಹಿಂದೆ ಜನರು ಸೂರ್ಯನ ದಿಕ್ಕಿನ ಆಧಾರದ ಮೇಲೆ ಸಮಯವನ್ನು ಅಂದಾಜಿಸುತ್ತಿದ್ದರು. ಈಗ ಪ್ರತಿಯೊಬ್ಬ ವ್ಯಕ್ತಿಯ ಬಳಿಯೂ, ಅವರು ರಿಕ್ಷಾ ಚಾಲಕರಿರಲಿ ಅಥವಾ ತರಕಾರಿ ಮಾರಾಟಗಾರರಿರಲಿ, ಮೊಬೈಲ್ ಫೋನ್ ಇದೆ ಮತ್ತು ಸಮಯ ತಿಳಿಯುತ್ತದೆ. ಆದ್ದರಿಂದ ಇಂತಹ ಘೋಷಣೆಗಳ ಅವಶ್ಯಕತೆ ಉಳಿದಿಲ್ಲ ಎಂದು ಅವರು ಹೇಳಿದರು.
ಧಾರ್ಮಿಕ ನಂಬಿಕೆಯಲ್ಲಿ ಹಸ್ತಕ್ಷೇಪವಿಲ್ಲ
ಸುರೇಶ್ ಖನ್ನಾ ಅವರು, ಸರಕಾರವು ಯಾರ ಧಾರ್ಮಿಕ ನಂಬಿಕೆಯಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ; ಆದರೆ ಧ್ವನಿಯ ತೀವ್ರತೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶಗಳು ಅನ್ವಯವಾಗುತ್ತವೆ. ಇದು ಸರಕಾರದ ನಿರ್ಧಾರವಲ್ಲ, ಬದಲಾಗಿ ನ್ಯಾಯಾಲಯದ ಆದೇಶವಾಗಿದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಕಮಾಲ್ ಅಖ್ತರ್ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶವು ಕೇವಲ ಧ್ವನಿಯ ತೀವ್ರತೆಯ ಬಗ್ಗೆ ಇದೆಯೇ ಹೊರತು ಧ್ವನಿವರ್ಧಕ ಬಳಕೆಯ ಮೇಲೆ ಸಂಪೂರ್ಣ ನಿಷೇಧವಿಲ್ಲ ಎಂದು ಉಲ್ಲೇಖಿಸಿದರು. (ಸುಳ್ಳು ಹೇಳಿ, ಸಮರ್ಥಿಸಿಕೊಳ್ಳುವ ಪ್ರವೃತ್ತಿಯ ಶಾಸಕರು! – ಸಂಪಾದಕರು).
ಸಂಪಾದಕೀಯ ನಿಲುವುಭಾಜಪ ಆಡಳಿತವಿರುವ ಪ್ರತಿಯೊಂದು ರಾಜ್ಯಗಳು ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ