ಬಂಧಿತ ಸೈನಿಕರಿಂದ ವಿಡಿಯೋ ಪ್ರಸಾರ ಮಾಡಿ, ಪಾಕ್ ಸೇನೆಯ ವಿರುದ್ಧ ಟೀಕೆ

ಕ್ವೆಟ್ಟಾ (ಬಲೂಚಿಸ್ತಾನ) – ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿ.ಎಲ್.ಎ.) 7 ಪಾಕಿಸ್ತಾನಿ ಸೈನಿಕರನ್ನು ಸೆರೆಹಿಡಿದಿದ್ದರೂ, ಬಂಧಿತರು ತಮ್ಮ ಸೈನಿಕರಲ್ಲ ಎಂದು ಪಾಕ್ ಸೇನೆಯು ವಾದಿಸುತ್ತಿದೆ. ತನ್ನ ಯಾವುದೇ ಸೈನಿಕರು ನಾಪತ್ತೆಯಾಗಿಲ್ಲ ಅಥವಾ ಯಾರನ್ನೂ ಬಂಧಿಸಿಲ್ಲ ಎಂದು ಪಾಕಿಸ್ತಾನಿ ಸೇನೆಯು ಹೇಳಿದೆ. ಇದರ ಬೆನ್ನಲ್ಲೇ ಬಿ.ಎಲ್.ಎ. ಬಂಧಿತ ಸೈನಿಕರ ವಿಡಿಯೋಗಳನ್ನು ಪ್ರಸಾರ ಮಾಡಿದೆ. ಈ ವಿಡಿಯೋದಲ್ಲಿ ಇಬ್ಬರು ಪಾಕಿಸ್ತಾನಿ ಸೈನಿಕರು ಅಳುತ್ತಿರುವುದು ಕಂಡುಬಂದಿದೆ. ‘ಪಾಕ್ ಸೇನೆಯೇ ನಮ್ಮನ್ನು ಇಲ್ಲಿಗೆ ಕಳುಹಿಸಿಕೊಟ್ಟಿತ್ತು; ಆದರೆ ಈಗ ಸೇನೆಯು ನಮ್ಮನ್ನು ಗುರುತಿಸಲು ನಿರಾಕರಿಸುತ್ತಿದೆ’ ಎಂದು ಅವರು ಹೇಳುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಪಾಕ್ ಸೇನೆಯು ತಮಗೆ ನೀಡಿದ್ದ ಗುರುತಿನ ಚೀಟಿಗಳನ್ನೂ ಸಹ ಬಂಧಿತ ಸೈನಿಕರು ಈ ವಿಡಿಯೋದಲ್ಲಿ ತೋರಿಸಿದ್ದಾರೆ.
Pakistan Army refuses to recognize soldiers captured by the Baloch Liberation Army.
In Kargil too, it denied its own fallen.
If it wouldn’t accept its dead, will it accept its living?
BLA demands release of Baloch prisoners in 7 days in exchange. ⏳#Balochistan #PakistanArmy… https://t.co/QHqxchyW5x pic.twitter.com/wDZo5llPLy
— Sanatan Prabhat (@SanatanPrabhat) February 20, 2026
ಬಂಧನಕ್ಕೊಳಗಾದವರ ಬಿಡುಗಡೆಗೆ ಆಗ್ರಹ!
ಬಿ.ಎಲ್.ಎ. ಇತ್ತೀಚಿನ ಕಾರ್ಯಾಚರಣೆಗಳ ಮೂಲಕ 20 ಕ್ಕೂ ಹೆಚ್ಚು ವ್ಯಕ್ತಿಗಳನ್ನು ತನ್ನ ವಶಕ್ಕೆ ಪಡೆದಿರುವುದಾಗಿ ಹೇಳಿಕೊಂಡಿತ್ತು. ಅವರಲ್ಲಿ ಕೆಲವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. ಬಿ.ಎಲ್.ಎ. ಪಾಕ್ ಸೈನಿಕರ ಬಿಡುಗಡೆಗೆ ಪ್ರತಿಯಾಗಿ ಬಲೂಚ್ ಬಂಧಿತರ ಬಿಡುಗಡೆಗೆ ಬೇಡಿಕೆಯಿಟ್ಟಿದೆ. ಇದಕ್ಕಾಗಿ 7 ದಿನಗಳ ಗಡುವನ್ನು ನೀಡಿದೆ. ಒಂದು ವೇಳೆ ಬೇಡಿಕೆಯನ್ನು ಈಡೇರಿಸದಿದ್ದರೆ, ತಮ್ಮ ‘ಬಲೂಚ್ ನ್ಯಾಷನಲ್ ಕೋರ್ಟ್’ ಮೂಲಕ ಸೈನಿಕರಿಗೆ ಶಿಕ್ಷೆ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ. ಬಲೂಚ್ ಲಿಬರೇಶನ್ ಆರ್ಮಿಯು ಬಲೂಚಿಸ್ತಾನವನ್ನು ಒಂದು ಸ್ವತಂತ್ರ ರಾಷ್ಟ್ರವೆಂದು ಪರಿಗಣಿಸುತ್ತದೆ ಮತ್ತು ಅದು ತನ್ನದೇ ಆದ ಸಂವಿಧಾನ ಹಾಗೂ ಕಾನೂನುಗಳ ಮೂಲಕ ಆಡಳಿತ ನಡೆಸುತ್ತದೆ.
ಸಂಪಾದಕೀಯ ನಿಲುವುಕಾರ್ಗಿಲ್ ಯುದ್ಧದ ಸಮಯದಲ್ಲಿಯೂ ಪಾಕಿಸ್ತಾನವು ಹತರಾದ ತನ್ನ ಸೈನಿಕರ ಮೃತದೇಹಗಳನ್ನು ಸ್ವೀಕರಿಸಲು ನಿರಾಕರಿಸಿತ್ತು. ಅಂತಹ ಪಾಕಿಸ್ತಾನವು ತನ್ನ ಜೀವಂತ ಸೈನಿಕರನ್ನಾದರೂ ಹೇಗೆ ತಾನೇ ಒಪ್ಪಿಕೊಂಡೀತು? |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ