ದೇವಸ್ಥಾನದ ಮುಂದಿದ್ದ ಮಸೀದಿಯಲ್ಲಿ ನಮಾಜ್ ನಡೆಯುತ್ತಿದ್ದಕ್ಕೆ ವಿರೋಧ

ಜಬಲ್ಪುರ (ಮಧ್ಯಪ್ರದೇಶ) – ಜಿಲ್ಲೆಯ ಸಿಹೋರಾ ಭಾಗದ ದುರ್ಗಾ ದೇವಸ್ಥಾನದ ಆರತಿಯನ್ನು ಧ್ವನಿವರ್ಧಕಗಳ ಮೂಲಕ ಪ್ರಸಾರ ಮಾಡಲಾಗುತ್ತಿತ್ತು. ಅದೇ ವೇಳೆ ದೇವಸ್ಥಾನದ ಎದುರಿಗಿರುವ ‘ಮದೀನಾ ಅಹ್ಲೆ ಸುನ್ನತ್’ ಮಸೀದಿಯಲ್ಲಿ ನಮಾಜ್ ನಡೆಯುತ್ತಿತ್ತು. ಈ ಕಾರಣದಿಂದಾಗಿ ಮುಸಲ್ಮಾನರು ಧ್ವನಿವರ್ಧಕದ ಮೂಲಕ ಕೇಳಿಬರುತ್ತಿದ್ದ ಆರತಿಯನ್ನು ವಿರೋಧಿಸಿದರು. ಇದಕ್ಕೆ ಹಿಂದೂಗಳು ಪ್ರತಿರೋಧ ವ್ಯಕ್ತಪಡಿಸಿದಾಗ, ಮುಸಲ್ಮಾನರು ದೇವಸ್ಥಾನವನ್ನು ಧ್ವಂಸಗೊಳಿಸಿದರು. ಈ ಘಟನೆಯು ಆಜಾದ್ ಚೌಕ್ ನ ವಾರ್ಡ್ ಸಂಖ್ಯೆ 5 ರಲ್ಲಿ ನಡೆದಿದೆ.
Unacceptable! 😡
In Jabalpur, MP, a Durga Mandir was attacked because the Aarti "disturbed" Namaz at a nearby mosque.
Do Hindus vandalise mosques during Azaan?
So why the attack on our temples?
This is exactly why the demand for Hindu Rashtra is growing. 🚩🙏#Jabalpur… pic.twitter.com/cHskZNpTWj
— Sanatan Prabhat (@SanatanPrabhat) February 20, 2026
೧. ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿದರು. ಜಬಲ್ಪುರ ವಲಯದ ಮಹಾನಿರೀಕ್ಷಕರು, ಉಪಮಹಾನಿರೀಕ್ಷಕರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಸದ್ಯ ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದೆ. ನಾಗರಿಕರು ಶಾಂತಿ ಕಾಪಾಡಬೇಕು ಮತ್ತು ಮನೆಯಲ್ಲೇ ಇರಬೇಕು ಎಂದು ಸರ್ಕಾರ ಮನವಿ ಮಾಡಿದೆ.
೨. ಈ ಘಟನೆಯಲ್ಲಿ 25 ಕ್ಕೂ ಹೆಚ್ಚು ಶಂಕಿತರನ್ನು ಗುರುತಿಸಲಾಗಿದ್ದು, 15 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಹಿಂಸಾಚಾರಕ್ಕೆ ಬಳಸಲಾದ ಕೆಲವು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಕಲ್ಲು ತೂರಾಟದಲ್ಲಿ ಭಾಗಿಯಾದವರ ಪಾತ್ರ ಮತ್ತು ಘಟನೆಯ ಹಿಂದಿನ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ.
೩. ಸ್ಥಳೀಯರ ಮಾಹಿತಿಯ ಪ್ರಕಾರ, ಎರಡೂ ಧಾರ್ಮಿಕ ಸ್ಥಳಗಳು ಪರಸ್ಪರ ಹತ್ತಿರದಲ್ಲಿರುವುದರಿಂದ ಈ ಹಿಂದೆಯೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ರಂಜಾನ್ ತಿಂಗಳು ಆರಂಭವಾಗಿರುವುದರಿಂದ ವಾತಾವರಣವು ಹೆಚ್ಚು ಸಂವೇದನಾಶೀಲವಾಗಿದೆ.
ಸಂಪಾದಕೀಯ ನಿಲುವುಆರತಿಯ ಸಮಯದಲ್ಲಿ ಅಜಾನ್ ಆದಾಗ ಹಿಂದೂಗಳು ಎಂದಿಗೂ ಮಸೀದಿಗೆ ನುಗ್ಗಿ ಧ್ವಂಸ ಮಾಡುವುದಿಲ್ಲ; ಆದರೆ ನಮಾಜ್ ಸಮಯದಲ್ಲಿ ಆರತಿ ಆರಂಭವಾದಾಗ ಮುಸಲ್ಮಾನರಿಗೆ ತೊಂದರೆಯಾಗುತ್ತದೆ ಮತ್ತು ಅವರು ಮಂದಿರದ ಮೇಲೆ ಆಕ್ರಮಣ ಮಾಡುತ್ತಾರೆ. ಇದನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೇ ಅನಿವಾರ್ಯವಾಗಿದೆ.! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ