ಗರ್ಭಗುಡಿಯಲ್ಲಿ ತುಂಬಿದ ಮರಳನ್ನು ತೆಗೆದ ನಂತರ ವರ್ಷದೊಳಗೆ ಪ್ರವೇಶ ಸಿಗಲಿದೆ

ಭುವನೇಶ್ವರ (ಒಡಿಶಾ) – ಇಲ್ಲಿನ ಪ್ರಾಚೀನ ಕೊನಾರ್ಕ್ ಮಂದಿರದ ಗರ್ಭಗುಡಿಗೆ ಒಂದು ವರ್ಷದ ನಂತರ ಭಕ್ತರಿಗೆ ಪ್ರವೇಶಿಸಲು ಅವಕಾಶ ಸಿಗಲಿದೆ. ಪ್ರಸ್ತುತ ಗರ್ಭಗುಡಿಯಲ್ಲಿ ಮರಳು ತುಂಬಿದ್ದು, ಅದನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಮಂದಿರದ ಹಿಂದೆ ೧೫ ಅಡಿ ಎತ್ತರದ ಗೋಡೆಯಿದೆ. ಅದು ಕುಸಿಯಬಾರದೆಂದು ಬ್ರಿಟಿಷರು ೧೯೦೩-೦೪ ರ ಅವಧಿಯಲ್ಲಿ ಮಂದಿರದ ಗರ್ಭಗುಡಿಯಲ್ಲಿ ಸಾವಿರಾರು ಟನ್ ಮರಳನ್ನು ತುಂಬಿದ್ದರು. ಅಂದಿನಿಂದ ಗರ್ಭಗುಡಿ ಮುಚ್ಚಲ್ಪಟ್ಟಿದೆ. ಈಗ ಭಾರತೀಯ ಪುರಾತತ್ವ ಇಲಾಖೆ ಮತ್ತು ‘ಐಐಟಿ ಮದ್ರಾಸ್’ ತಜ್ಞರ ೩೦ ಜನರ ತಂಡಕ್ಕೆ ಈ ಮರಳನ್ನು ತೆಗೆಯುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಸಂಪೂರ್ಣವಾಗಿ ಮರಳನ್ನು ತೆಗೆಯಲು ೩ ತಿಂಗಳುಗಳು ಬೇಕಾಗುತ್ತವೆ. ಒಂದು ವರ್ಷದ ನಂತರ ಭಕ್ತರಿಗೆ ಮೊದಲ ಬಾರಿಗೆ ಈ ಐತಿಹಾಸಿಕ ಮಂದಿರದ ಗರ್ಭಗುಡಿ ಒಳಗೆ ಪ್ರವೇಶಿಸಲು ಅವಕಾಶ ಸಿಗಲಿದೆ. ಈ ಮಂದಿರಕ್ಕೆ ಪ್ರತಿ ವರ್ಷ ೩೫ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ದೇಶದ ಪುರಾತತ್ವ ಸ್ಮಾರಕಗಳಲ್ಲಿ ತಾಜ್ ಮಹಲ್ ನಂತರ ಈ ಮಂದಿರವು ಎರಡನೇ ಸ್ಥಾನದಲ್ಲಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !