ಬಂಗಾಳದಲ್ಲಿ ‘ಎಸ್.ಐ.ಆರ್.’ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ ಪ್ರಕರಣ

ಕೋಲಕಾತಾ (ಬಂಗಾಳ) – ರಾಜ್ಯದಲ್ಲಿ ‘ಎಸ್.ಐ.ಆರ್.’ (‘ಎಸ್.ಐ.ಆರ್.’ ಎಂದರೆ ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ ಅಂದರೆ ಮತದಾರರ ವಿಶೇಷ ಆಳವಾದ ಪುನರ್ವಿಮರ್ಶೆ) ಪ್ರಕ್ರಿಯೆಯ ಅವಧಿಯಲ್ಲಿ ನಿರ್ಲಕ್ಷ್ಯ ಮತ್ತು ಸಾಂವಿಧಾನಿಕ ಅಧಿಕಾರಗಳ ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮುರ್ಷಿದ್ ಆಲಂ, ಸೆಫಾವುರ್ ರೆಹಮಾನ್ ಸೇರಿದಂತೆ ಬಂಗಾಳದ 7 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಡಾ. ಸೆಫಾವುರ್ ರೆಹಮಾನ್ ಅವರು ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದು, ಅವರಿಗೆ ಮುರ್ಷಿದಾಬಾದ್ ಜಿಲ್ಲೆಯ ಸಂಸೇರಗಂಜ್ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯಿತ್ತು. ಮುರ್ಷಿದ್ ಆಲಂ ಅವರು ಸಹಾಯಕ ಕೃಷಿ ನಿರ್ದೇಶಕರಾಗಿದ್ದು, ಅವರಿಗೆ 57 ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿಯಿತ್ತು. ನಿತೀಶ್ ದಾಸ್ ಅವರು ಫರಕ್ಕಾ ಪ್ರದೇಶದ ಕಂದಾಯ ಅಧಿಕಾರಿಯಾಗಿದ್ದು, ಅವರಿಗೆ ಫರಕ್ಕಾ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯಿತ್ತು. ಡಾಲಿಯಾ ರೇ ಚೌಧರಿ ಅವರು ಮಹಿಳಾ ಅಭಿವೃದ್ಧಿ ಅಧಿಕಾರಿಯಾಗಿದ್ದು, ಅವರಿಗೆ ಮಯನಾಗುಡಿ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯಿತ್ತು. ಸತ್ಯಜಿತ್ ದಾಸ್ ಅವರು ಜಂಟಿ ತಾಲ್ಲೂಕು ಅಭಿವೃದ್ಧಿ ಅಧಿಕಾರಿಯಾಗಿದ್ದು, ಅವರಿಗೆ ‘139 ಕ್ಯಾನಿಂಗ್ ಪೂರ್ವ’ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯಿತ್ತು. ಜಾಯ್‌ದೀಪ್ ಕುಂಡು ಅವರಿಗೆ ‘139 ಕ್ಯಾನಿಂಗ್ ಪೂರ್ವ’ ವಿಧಾನಸಭಾ ಕ್ಷೇತ್ರದ ಮತದಾರರ ಆಳವಾದ ಪುನರ್ವಿಮರ್ಶೆಯ ಜವಾಬ್ದಾರಿಯಿತ್ತು. ದೇಬಾಶಿಷ್ ವಿಶ್ವಾಸ್ ಅವರು ಜಂಟಿ ತಾಲ್ಲೂಕು ಅಭಿವೃದ್ಧಿ ಅಧಿಕಾರಿಯಾಗಿದ್ದು, ಅವರಿಗೆ 229 ದೇಬ್ರಾ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯಿತ್ತು.
ಆಯೋಗವು ಈ ಅಧಿಕಾರಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ. ‘ಎಸ್.ಐ.ಆರ್.’ ಇದು ಸೂಕ್ಷ್ಮ ವಿಷಯವಾಗಿದ್ದು, ಅದರಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಆಯೋಗವು ತಿಳಿಸಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”