(ರೀಲ್ಸ್ ಎಂದರೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಾರ ಮಾಡಲಾಗುವ ಸಣ್ಣ ವಿಡಿಯೋ.)

| ಈ ಮೇಲೆ ಪ್ರಕಟಿಸಿದ ಚಿತ್ರದ ಉದ್ದೇಶ ಯಾರ ರಾಷ್ಟ್ರೀಯ ಮತ್ತು ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು |
ರಾಯಚೂರು – ನಗರದಲ್ಲಿ ರಾಷ್ಟ್ರಧ್ವಜ ಮತ್ತು ಭಗವದ್ಗೀತೆಯ ಮೇಲೆ ಕಾಲಿಟ್ಟು ‘ರೀಲ್ಸ್’ ಮಾಡಿದ ಇಬ್ಬರು ಮತಾಂಧ ಮುಸ್ಲಿಂ ಯುವಕರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ನವಾಜ್ ಮತ್ತು ಸೊಹೇಲ್ ಹೆಸರಿನ ಈ ಇಬ್ಬರು ಮುಸ್ಲಿಂ ಯುವಕರು ರಾಷ್ಟ್ರಧ್ವಜ ಮತ್ತು ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಮೇಲೆ ಕಾಲಿಟ್ಟು ‘ರೀಲ್ಸ್’ ತಯಾರಿಸಿ ಅದನ್ನು ‘ವಾಟ್ಸಾಪ್ ಸ್ಟೇಟಸ್’ನಲ್ಲಿ (ಇತರರು ನೋಡಲು ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪ್ರಸಾರ ಮಾಡಿದ ಚಿತ್ರಣ) ಹಾಕಿಕೊಂಡಿದ್ದರು. ರಾಷ್ಟ್ರ ಮತ್ತು ಹಿಂದೂ ಧರ್ಮಕ್ಕೆ ಅವಮಾನ ಮಾಡಿದ ಈ ಘಟನೆಯಿಂದ ರಾಯಚೂರು ಜಿಲ್ಲೆಯಲ್ಲಿ ಆಕ್ರೋಶದ ಅಲೆ ಎದ್ದಿದೆ. ಅನೇಕ ಹಿಂದೂ ಸಂಘಟನೆಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಈ ಆಕ್ಷೇಪಾರ್ಹ ‘ವಾಟ್ಸಾಪ್ ಸ್ಟೇಟಸ್’ ವಿರುದ್ಧ ರಾಷ್ಟ್ರನಿಷ್ಠ ಮತ್ತು ಹಿಂದುತ್ವನಿಷ್ಠ ಕಾರ್ತಿಕ್ ರೆಡ್ಡಿ ಅವರು ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದರು. ಪೊಲೀಸರು ವಾಟ್ಸಾಪ್ ಸ್ಟೇಟಸ್ ಹಾಕಿದ ಆರೋಪಿಗಳನ್ನು ಪತ್ತೆ ಹಚ್ಚಿ, 24 ಗಂಟೆಗಳ ಒಳಗಾಗಿ ನವಾಜ್ ಮತ್ತು ಸೊಹೇಲ್‌ನನ್ನು ಬಂಧಿಸಿದ್ದಾರೆ. ‘ಈ ಪ್ರಕರಣದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿ ಮನಸ್ಥಿತಿಯನ್ನು ಬುಡಸಮೇತ ನಾಶಮಾಡಲು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು! |
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಸ್ವದೇಶವೇ ಸರ್ವಸ್ವ !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!