
ಗೋದ್ರಾ (ಗುಜರಾತ್) – ಇಲ್ಲಿನ ಸೆಶನ್ಸ್ ನ್ಯಾಯಾಲಯವು ೨೦೨೪ ರ ಗೋಹತ್ಯೆ ಮತ್ತು ಗೋಮಾಂಸ ಸಾಗಾಟ ಪ್ರಕರಣದಲ್ಲಿ ಮೆಹಬೂಬ್ ಅಬ್ದುಲ್ಲಾ ಸಬುರಿಯಾ ಮತ್ತು ಫರ್ಹಾನ್ ಮೆಹಬೂಬ್ ಸಬುರಿಯಾ ಅವರಿಗೆ ೧0 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ೨ ಲಕ್ಷ ರೂಪಾಯಿ ದಂಡ ವಿಧಿಸಿದೆ. ಇವರಿಬ್ಬರೂ ತಂದೆ-ಮಗನಾಗಿದ್ದಾರೆ. ಮೂರನೇ ಆರೋಪಿ ಸಲೀಂ ಸಿದ್ದಿಕ್ ಅವರನ್ನು ಸಂಶಯದ ಲಾಭ ನೀಡಿ ನಿರಪರಾಧಿ ಎಂದು ಖುಲಾಸೆಗೊಳಿಸಲಾಗಿದೆ. ಗುಜರಾತ್‌ನಲ್ಲಿ ಗೋಹತ್ಯೆ, ಗೋಮಾಂಸ ಸಂಗ್ರಹಣೆ, ಸಾಗಾಟ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧವಿದೆ.
ಜುಲೈ ೯, ೨೦೨೪ ರಂದು ಗೋದ್ರಾ ಬಿ ವಿಭಾಗದ ಪೊಲೀಸ್ ಠಾಣೆಯ ಅಧಿಕಾರಿಗಳು ನಿಯಮಿತ ಗಸ್ತು ತಿರುಗುತ್ತಿದ್ದಾಗ, ಗೋದ್ರಾ-ಹಮೀರಪುರ ರಸ್ತೆಯ ಅಲಿ ಮಸೀದಿ ಪ್ರದೇಶದಲ್ಲಿ ಸಂದೇಹಾಸ್ಪದ ವಾಹನವೊಂದು ಪತ್ತೆಯಾಯಿತು. ವಾಹನವನ್ನು ತಡೆದು ವಿಚಾರಣೆ ನಡೆಸಲು ಪ್ರಯತ್ನಿಸಿದಾಗ ಕೆಲವರು ಅಲ್ಲಿಂದ ಓಡಿಹೋದರು. ಅವರಲ್ಲಿ ಇಬ್ಬರನ್ನು ಹಿಡಿಯಲಾಯಿತು. ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿ ಮಾಂಸ ಮತ್ತು ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ವಿಚಾರಣೆಯ ವೇಳೆ ಅವರು ತಮ್ಮ ಹೆಸರುಗಳನ್ನು ಮೆಹಬೂಬ್ ಅಬ್ದುಲ್ಲಾ ಸಬುರಿಯಾ ಮತ್ತು ಫರ್ಹಾನ್ ಮೆಹಬೂಬ್ ಸಬುರಿಯಾ ಎಂದು ಹೇಳಿದರು. ಸಲೀಂ ಸಿದ್ದಿಕ್ ಮತ್ತು ಫೈಸಲ್ ಮಕ್ಸೂದ್ ಅವರು ತಮ್ಮನ್ನು ಹಮೀರಪುರಕ್ಕೆ ಕರೆಸಿಕೊಂಡು ಮಾಂಸದ ದಾಸ್ತಾನು ತುಂಬಿಸಿಕೊಟ್ಟರು ಮತ್ತು ಮನೆಯಿಂದ ಮಾರಾಟಕ್ಕೆ ಕೊಂಡೊಯ್ಯಲು ಹೇಳಿದ್ದನ್ನು ಅವರು ಪೋಲೀಸರಿಗೆ ಹೇಳಿದ್ದಾರೆ.
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ