|

ನವ ದೆಹಲಿ – ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಮಾಜಿ ಭೂಸೇನಾ ಮುಖ್ಯಸ್ಥ ಜನರಲ್ ಮನೋಜ ನರವಣೆ ಅವರದ್ದೆಂದು ಹೇಳಲಾದ ಪುಸ್ತಕದ ಆಯ್ದ ಭಾಗಗಳನ್ನು ಸಂಸತ್ತಿನಲ್ಲಿ ಓದಿ ತೋರಿಸಿದ್ದರು. ಇದಕ್ಕೆ ಆಡಳಿತಾರೂಢ ಸಂಸದರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಈ ಪುಸ್ತಕದ ಪ್ರಕಾಶನ ಸಂಸ್ಥೆಯಾದ ‘ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ’ ಔಪಚಾರಿಕ ಸ್ಪಷ್ಟನೆಯನ್ನು ನೀಡಿದೆ. ‘ಜನರಲ್ ಮನೋಜ ನರವಣೆಯವರ ಆತ್ಮಕಥೆಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ವಿಶೇಷ ಪ್ರಕಟಣಾ ಹಕ್ಕುಗಳು ನಮ್ಮ ಬಳಿ ಮಾತ್ರ ಇವೆ. ಅಲ್ಲದೆ ಈ ಪುಸ್ತಕವು ಇದುವರೆಗೆ ಯಾವುದೇ ರೂಪದಲ್ಲಿ ಪ್ರಕಟಗೊಂಡಿಲ್ಲ’ ಎಂದು ಈ ಸಂಸ್ಥೆಯು ಸ್ಪಷ್ಟಪಡಿಸಿದೆ.
ಪ್ರಕಾಶನ ಸಂಸ್ಥೆಯು, ನಾವು ಸ್ಪಷ್ಟಪಡಿಸುವುದೇನೆಂದರೆ, ಪುಸ್ತಕದ ಯಾವುದೇ ಮುದ್ರಿತ ಅಥವಾ ಡಿಜಿಟಲ್ ಪ್ರತಿಗಳನ್ನು ನಾವು ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಯಾವುದೇ ರೀತಿಯಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಿಲ್ಲ. ಪ್ರಸ್ತುತ ಚಲಾವಣೆಯಲ್ಲಿರುವ ಯಾವುದೇ ಆವೃತ್ತಿಯು – ಪೂರ್ಣವಾಗಿರಲಿ ಅಥವಾ ಭಾಗಶಃ ಆಗಿರಲಿ, ಯಾವುದೇ ರೂಪದಲ್ಲಿದ್ದರೂ ಅದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ. ಇಂತಹ ಅನಧಿಕೃತ ವಿತರಣೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು `ಪೆಂಗ್ವಿನ್ ರಾಂಡಮ್ ಹೌಸ ಇಂಡಿಯಾ’ ಎಚ್ಚರಿಕೆ ನೀಡಿದೆ.
Truth Exposed. Lies Cornered. ⚠️📚
Penguin makes it clear:
General Manoj Naravane’s autobiography has NOT been published yet.Any printed or digital copy is a copyright violation. ❌
So the big question 👇
On what basis did Rahul Gandhi quote and politicize a non-existent… pic.twitter.com/gPd3AImq2d— Sanatan Prabhat (@SanatanPrabhat) February 10, 2026
ಏನಿದು ಪ್ರಕರಣ?
ರಾಹುಲ್ ಗಾಂಧಿಯವರ ಪ್ರಕಾರ, ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದಲ್ಲಿ 2020 ರಲ್ಲಿ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಕುರಿತು ಸರಕಾರಕ್ಕೆ ಅನಾನುಕೂಲ ಉಂಟುಮಾಡುವಂತಹ ಸತ್ಯಗಳಿವೆ. ರಾಹುಲ್ ಗಾಂಧಿ ಈ ಪುಸ್ತಕದ ಕೆಲವು ಭಾಗಗಳನ್ನು ಸಂಸತ್ತಿನಲ್ಲಿ ಓದಿದ್ದರು. ಅದರಲ್ಲಿ, ಈ ಘಟನೆಯ ಸಂದರ್ಭದಲ್ಲಿ ಮೋದಿ ಸರಕಾರವು ಜನರಲ್ ನರವಣೆಯವರನ್ನು ಒಂಟಿಯಾಗಿಸಿತ್ತು ಮತ್ತು ಚೀನೀ ಸೈನಿಕರ ಮೇಲೆ ಗುಂಡು ಹಾರಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಸಂಪೂರ್ಣವಾಗಿ ಅವರಿಗೆ ಬಿಟ್ಟಿತ್ತು ಎಂದು ಉಲ್ಲೇಖಿಸಲಾಗಿದೆ ಎಂದು ಅವರು ದಾವೆ ಮಾಡಿದ್ದರು.
ಸಂಪಾದಕೀಯ ನಿಲುವುಹೀಗಿರುವಾಗ, ಈ ಪ್ರಕಾಶನ ಸಂಸ್ಥೆಯೇ ರಾಹುಲ್ ಗಾಂಧಿಯವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು! ಒಂದು ವೇಳೆ ಸಂಸ್ಥೆಯು ಹಾಗೆ ಮಾಡದಿದ್ದರೆ, ಚೀನಾ ಪರ ಹೇಳಿಕೆ ನೀಡುವ ರಾಹುಲ್ ಗಾಂಧಿಯವರ ಜೊತೆಗೆ ಪ್ರಕಾಶನ ಸಂಸ್ಥೆಯ ಮೇಲೆಯೂ ಪೊಲೀಸರು ಪ್ರಕರಣ ದಾಖಲಿಸಬೇಕು! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ