
ವಾಷಿಂಗ್ಟನ್ (ಅಮೆರಿಕ): ಡಿಸೆಂಬರ್ 2025 ರವರೆಗೆ ಸುಮಾರು 3,800 ಕ್ಕೂ ಹೆಚ್ಚು ಭಾರತೀಯರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ, ಹಾಗೆಯೇ ಕಳೆದ ವರ್ಷ ಸೌದಿ ಅರೇಬಿಯಾದಿಂದ ಸುಮಾರು 12,000 ಕ್ಕೂ ಹೆಚ್ಚು ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಜೆದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ನೀಡಿರುವ ಅಂಕಿ-ಅಂಶಗಳ ಪ್ರಕಾರ ಅಲ್ಲಿಂದ 3,865 ಭಾರತೀಯರನ್ನು ಗಡಿಪಾರು ಮಾಡಲಾಗಿದ್ದು, ಈ ಮಾಹಿತಿಯನ್ನು ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಸಂಸತ್ತಿನಲ್ಲಿ ನೀಡಿದ್ದಾರೆ. ‘ಕಳೆದ 5 ವರ್ಷಗಳಲ್ಲಿ ಅಮೆರಿಕ ಮತ್ತು ಇತರ ದೇಶಗಳಿಂದ ಎಷ್ಟು ಭಾರತೀಯ ನಾಗರಿಕರನ್ನು ಗಡಿಪಾರು ಮಾಡಲಾಗಿದೆ ಹಾಗೂ ವಲಸೆಯನ್ನು ತಡೆಯಲು ಕೇಂದ್ರ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ?’ ಎಂದು ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದರು.
Saudi Arabia has deported over 12,000 Indians in the last year for staying illegally. ✈️🚫
Over 3800 Indians were deported from the US
The irony? While Indians are being sent back from abroad, illegal Bangladeshis and Rohingyas entering India are often nurtured and provided… pic.twitter.com/VFYxlS7Sb0
— Sanatan Prabhat (@SanatanPrabhat) February 6, 2026
ಯಾವ ದೇಶಗಳಿಂದ ಗಡಿಪಾರು?
1. ಮ್ಯಾನ್ಮಾರ್: 1,591 ಭಾರತೀಯರನ್ನು ಹೊರಹಾಕಿದೆ.
2. ಮಲೇಷ್ಯಾ 1,485, ಸಂಯುಕ್ತ ಅರಬ್ ಎಮಿರೇಟ್ಸ್ (UAE) 1,469, ಬಹ್ರೇನ್ 764, ಥೈಲ್ಯಾಂಡ್ 481, ಕಾಂಬೋಡಿಯಾ 305 ಮತ್ತು ಕೆನಡಾ 188 ಭಾರತೀಯರನ್ನು ಗಡಿಪಾರು ಮಾಡಿದೆ.
3. ಯುನೈಟೆಡ್ ಕಿಂಗ್‌ಡಮ್, ಚೀನಾ, ಆಸ್ಟ್ರೇಲಿಯಾ, ಕತಾರ್ ಸೇರಿದಂತೆ ಇತರ ದೇಶಗಳು ಅನೇಕ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಿವೆ.
4. 2025 ರಲ್ಲಿ ಅಮೆರಿಕದ ವಿವಿಧ ಕಾನ್ಸುಲೇಟ್ ವ್ಯಾಪ್ತಿಯಿಂದ ನ್ಯೂಯಾರ್ಕ್ (47), ಅಟ್ಲಾಂಟಾ (31), ಹೂಸ್ಟನ್ (234), ಸ್ಯಾನ್ ಫ್ರಾನ್ಸಿಸ್ಕೋ (49) ಮತ್ತು ಸಿಯಾಟಲ್ (31) ಭಾರತೀಯರನ್ನು ಗಡಿಪಾರು ಮಾಡಲಾಗಿದೆ.
ಗಡಿಪಾರು ಮಾಡಲು ಕಾರಣಗಳು!
ವಿದೇಶಾಂಗ ಸಚಿವಾಲಯವು ಇದಕ್ಕೆ ಕಾರಣಗಳನ್ನು ವಿವರಿಸಿದೆ:
ಅನೇಕ ಭಾರತೀಯ ಯುವಕರು ಏಜೆಂಟರ ಮೂಲಕ ಅಕ್ರಮವಾಗಿ ವಿದೇಶಕ್ಕೆ ಹೋಗುತ್ತಾರೆ, ಅಲ್ಲಿನ ಅಧಿಕಾರಿಗಳಿಗೆ ಸಿಕ್ಕಿಬಿದ್ದಾಗ ಗಡಿಪಾರು ಮಾಡಲಾಗುತ್ತದೆ. ಹಾಗೂ ವೀಸಾ (ಯಾವುದಾದರೂ ದೇಶದಲ್ಲಿ ಪ್ರವೇಶ ಮಾಡುವುದಕ್ಕಾಗಿ, ಯಾವುದಾದರೂ ದೇಶ ಬಿಟ್ಟು ಹೋಗುವುದಕ್ಕಾಗಿ ಅಥವಾ ಯಾವುದಾದರೂ ದೇಶದಲ್ಲಿ ಪ್ರವಾಸ ಮಾಡಲು ಅನುಮತಿ ನೀಡುವ ಅಧಿಕೃತ ದಾಖಲೆ ಅಥವಾ ಮೊಹರು) ವಿದೇಶಕ್ಕೆ ಹೋದ ನಂತರ ಅವಧಿ ಮುಗಿದ ನಂತರವೂ ಕೂಡ ಅಕ್ರಮವಾಗಿ ನೆಲೆಸುವುದು. ನೌಕರಿ ಅಥವಾ ಪ್ರವೇಶ ಪಡೆಯುವುದಕ್ಕಾಗಿ ನಕಲಿ ಶೈಕ್ಷಣಿಕ ದಾಖಲೆ ಅಥವಾ ಪಾಸ್‌ಪೋರ್ಟ್ ಬಳಸುವುದು, ವಿದೇಶದಲ್ಲಿ ಇರುವಾಗ ಅವಧಿ ಮುಗಿದ ನಂತರ ಹೊಸ ದಾಖಲೆ ಪಡೆಯುವಲ್ಲಿ ವಿಫಲವಾಗುವುದು, ಪ್ರವಾಸಿ ವೀಸಾದಲ್ಲಿ ಹೋಗಿ ಕೆಲಸ ಮಾಡುವುದು, ವಿದೇಶದಲ್ಲಿರುವಾಗ ಕಳ್ಳತನ, ಹಿಂಸಾಚಾರ, ಮಾದಕವಸ್ತು ಸಾಗಾಣಿಕೆ ಅಥವಾ ಇತರ ಅಪರಾಧಿ ಕೃತ್ಯಗಳಲ್ಲಿ ಸಹಭಾಗಿಯಾಗುವುದು, ಕೆಲವೊಮ್ಮೆ ಕಾರ್ಮಿಕರು ಮತ್ತು ಮಾಲೀಕರಲ್ಲಿ ನಡೆಯುವ ವಿವಾದದಿಂದ ಅಥವಾ ಕಾರ್ಮಿಕರ ಒಪ್ಪಂದದಂತೆ ವೇತನ ದೊರೆಯದಿದ್ದಾಗ ಕಾರ್ಮಿಕರು ಕೆಲಸ ನಿಲ್ಲಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಯಮ ಪಾಲನೆಯಾಗದೇ ಇದ್ದಾಗ ಕಾರ್ಮಿಕರನ್ನು ಗಡಿಪಾರು ಮಾಡಬಹುದು.
ಕೈಕೋಳ ತೊಡಿಸಿ ಕರೆತರುವ ಬಗ್ಗೆ ಆಕ್ಷೇಪ
ಕಳೆದ ವರ್ಷ ಅಮೆರಿಕದಿಂದ ಭಾರತೀಯರನ್ನು ವಿಮಾನದಲ್ಲಿ ಕೈಕೋಳ ಹಾಕಿ ಕಳುಹಿಸಲಾಗಿತ್ತು. ಈ ಬಗ್ಗೆ ಮಾತನಾಡಿದ ಕೀರ್ತಿ ವರ್ಧನ್ ಸಿಂಗ್, “ಭಾರತ ಸರಕಾರವು ಅಮೆರಿಕ ಮತ್ತು ಇತರ ದೇಶಗಳೊಂದಿಗೆ ಗಡಿಪಾರು ಪ್ರಕ್ರಿಯೆಯ ಬಗ್ಗೆ ಚರ್ಚಿಸುತ್ತಿದೆ. ಗಡಿಪಾರು ಮಾಡುವ ಮೊದಲು ವ್ಯಕ್ತಿಯು ಭಾರತೀಯ ನಾಗರಿಕನೆಂಬುದನ್ನು ದೃಢಪಡಿಸಲಾಗುತ್ತಿದೆ. ಗಡಿಪಾರು ಮಾಡುವಾಗ ಭಾರತೀಯರಿಗೆ ಉತ್ತಮ ನಡತೆ ಸಿಗಬೇಕೆಂದು ನಾವು ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಕೈಕೋಳ ತೊಡಿಸುವ ಅಥವಾ ಕಠಿಣ ಬಂಧನದಲ್ಲಿಡುವ ಪದ್ಧತಿಯನ್ನು ನಾವು ಬಲವಾಗಿ ಆಕ್ಷೇಪಿಸಿದ್ದೇವೆ” ಎಂದರು.
ವಲಸೆ ತಡೆಗಟ್ಟುವ ಕ್ರಮಗಳು
ಭವಿಷ್ಯದಲ್ಲಿ ವಿದೇಶಕ್ಕೆ ಹೋಗುವ ಭಾರತೀಯರು ವಂಚನೆಗೆ ಒಳಗಾಗಬಾರದೆಂದು ಏಜೆಂಟರ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವವರು ‘ಇಮಿಗ್ರೇಷನ್ ಕ್ಲಿಯರೆನ್ಸ್’ ಪಡೆಯುವುದು ಕಡ್ಡಾಯವಾಗಿದೆ. ಡಿಸೆಂಬರ್ 2025 ರ ಅಂತ್ಯದವರೆಗೆ, ನೋಂದಾವಣೆಯಾಗದ 3,505 ಏಜೆಂಟರ ಹೆಸರುಗಳನ್ನು ‘eMigrate’ ಪೋರ್ಟಲ್‌ನಲ್ಲಿ ಪ್ರಕಟಿಸಲಾಗಿದೆ. ಈ ವೇದಿಕೆಯ ಮೂಲಕ ಭಾರತೀಯ ಕಾರ್ಮಿಕರಿಗೆ ಕಾನೂನುಬದ್ಧ ಮತ್ತು ಸುರಕ್ಷಿತ ವಲಸೆಗಾಗಿ ಸಹಾಯ ಮಾಡಲಾಗುತ್ತಿದೆ.
ಸಂಪಾದಕೀಯ ನಿಲುವುವಿದೇಶಗಳಲ್ಲಿ ಅಕ್ರಮವಾಗಿ ವಾಸಿಸುವ ಭಾರತೀಯರನ್ನು ಹೊರಹಾಕಲಾಗುತ್ತಿದೆ, ಆದರೆ ಭಾರತಕ್ಕೆ ನುಸುಳುವ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳಿಗೆ ಎಲ್ಲಾ ದಾಖಲೆಗಳನ್ನು ನೀಡಿ ಪೋಷಿಸಲಾಗುತ್ತಿದೆ! |
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್