
ಢಾಕಾ (ಬಾಂಗ್ಲಾದೇಶ) – ಮಹಮ್ಮದ್ ಯೂನುಸ್ ಅವರ ಮಧ್ಯಂತರ ಸರಕಾರದ ಅವಧಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಸಹಜವಾಗಿರಲಿಲ್ಲ; ಆದರೆ ಚುನಾಯಿತ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಸಂಬಂಧಗಳು ಸುಧಾರಿಸಲಿವೆ ಎಂದು ಸರಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹೀದ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನಮಗೆ ನಿಜವಾಗಿಯೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಇಚ್ಛೆಯಿತ್ತು !
ಮಧ್ಯಂತರ ಸರಕಾರದ ಅವಧಿಯಲ್ಲಿ ಭಾರತದೊಂದಿಗಿನ ಸಂಬಂಧದ ಸ್ಥಿತಿ ಹೇಗಿತ್ತು?’ ಎಂದು ಕೇಳಿದ ಪ್ರಶ್ನೆಗೆ ತೌಹೀದ್ ಹುಸೇನ್ ಅವರು, ಹಲವು ಕಾರಣಗಳಿಂದಾಗಿ ಈ ಅವಧಿಯಲ್ಲಿ ಎರಡೂ ದೇಶಗಳ ನಡುವಿನ ಸಂಬಂಧಗಳು ಉತ್ತಮವಾಗಿರಲಿಲ್ಲ. ಭಾರತದೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವ ಬಗ್ಗೆ ನಾವು ನಿರಂತರವಾಗಿ ಮಾತನಾಡುತ್ತಿದ್ದೆವು. ನನ್ನ, ಮುಖ್ಯ ಸಲಹೆಗಾರರ ಅಥವಾ ಸರಕಾರದ ಭೂಮಿಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ತಿಳುವಳಿಕೆ ಮತ್ತು ಹೊಣೆಗಾರಿಕೆಯ ದೃಷ್ಟಿಕೋನದಿಂದ ನಮಗೆ ನಿಜವಾಗಿಯೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಇಚ್ಛೆಯಿತ್ತು. ಇದೇ ನಮ್ಮ ಆಸೆಯಾಗಿತ್ತು, ಎಂದು ಉತ್ತರಿಸಿದರು.
ಯಾರ ಮೇಲೂ ದೋಷಾರೋಪಣೆ ಮಾಡಲು ಇಷ್ಟವಿಲ್ಲ !
ಸಂಬಂಧಗಳು ಏಕೆ ಸುಧಾರಿಸಲಿಲ್ಲ? ಎಂದು ಕೇಳಿದಾಗ ಹುಸೇನ್ ಅವರು, ಸಂಬಂಧಗಳನ್ನು ನಿಭಾಯಿಸುವಲ್ಲಿ ಅನೇಕ ಅಡೆತಡೆಗಳು ಎದುರಾದವು. ಯಾರ ಮೇಲೂ ದೋಷಾರೋಪಣೆ ಮಾಡಲು ನಾನು ಬಯಸುವುದಿಲ್ಲ. ಭಾರತವು ತನ್ನ ಹಿತಾಸಕ್ತಿಗಳ ದೃಷ್ಟಿಯಿಂದಲೇ ಹೆಜ್ಜೆಗಳನ್ನು ಇಟ್ಟಿದೆ. ನಾವು ಕೂಡ ನಮ್ಮ ಹಿತಾಸಕ್ತಿಗಳನ್ನು ರಕ್ಷಿಸುವಂತಹ ಪ್ರಯತ್ನಗಳನ್ನೇ ಮಾಡಿದ್ದೇವೆ, ಎಂದು ಅವರು ಹೇಳಿದರು.
ಮುಂದಿನ ಸರಕಾರದ ಅವಧಿಯಲ್ಲಿ ಸಮಸ್ಯೆಗಳು ಬಗೆಹರಿಯಬಹುದು !
ಎರಡೂ ಕಡೆಯ ಹಿತಾಸಕ್ತಿಗಳ ಬಗ್ಗೆ ಇರುವ ವಿಭಿನ್ನ ವಿಚಾರಗಳಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಮುಂದಿನ ಸರಕಾರದ ಅವಧಿಯಲ್ಲಿ ಈ ಸಮಸ್ಯೆಗಳು ಬಗೆಹರಿಯಬಹುದು. ನನ್ನ ಉತ್ತರಾಧಿಕಾರಿಗಳು ಮತ್ತು ಅದರ ನಂತರ ಬರುವ ಸರಕಾರವು ತನ್ನ ಅವಧಿಯಲ್ಲಿ ಮತ್ತೆ ಸಹಜ ಸಂಬಂಧವನ್ನು ಸ್ಥಾಪಿಸಬಹುದು. ಸಮಸ್ಯೆಗಳು ಮುಂದುವರಿಯಬಹುದು; ಆದರೆ ಸಹಜ ಸಂಬಂಧಗಳು ಬಹಳ ಮುಖ್ಯ. ನಮ್ಮ ಅವಧಿಯಲ್ಲಿ ಈ ಸಂಬಂಧವು ಅಷ್ಟೊಂದು ಸಹಜವಾಗಿರಲಿಲ್ಲ.
ಶೇಖ್ ಹಸೀನಾ ಅವರನ್ನು ಮರಳಿ ಕಳುಹಿಸದ ಭಾರತದ ನಿಲುವಿನ ಬಗ್ಗೆ ಮಾತನಾಡುವುದು ಸರಿಯಲ್ಲ !
ಶೇಖ್ ಹಸೀನಾ ಅವರನ್ನು ಮರಳಿ ಕಳುಹಿಸುವ ಬಗ್ಗೆ ಭಾರತದ ನಿಲುವಿನ ಕುರಿತು ಕೇಳಿದ ಪ್ರಶ್ನೆಗೆ ಹುಸೇನ್ ಅವರು, ಈ ನಿಲುವಿನ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಔಪಚಾರಿಕವಾಗಿ ನಡೆದ ವಿಷಯಗಳ ಬಗ್ಗೆ ಮಾತ್ರ ಮಾತನಾಡಬಹುದು. ನಾವು ಅವರನ್ನು ಮರಳಿ ಕಳುಹಿಸಲು ವಿನಂತಿಸಿದ್ದೇವೆ; ಆದರೆ ಭಾರತದಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ. ಅದಕ್ಕೂ ಮೀರಿ ತರ್ಕ ಮಾಡುವುದು ಸರಿಯಲ್ಲ, ಎಂದು ಹುಸೇನ್ ವಿವರಿಸಿದರು
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !