ನಟ ಸುನಿಲ್ ಶೆಟ್ಟಿ ಅವರ ಹೇಳಿಕೆ

ಮುಂಬಯಿ – ನಾವು ಔರಂಗಜೇಬ್, ಅಕ್ಬರ್, ಬಾಬರ್, ಬೀರಬಲ್ಲನ ಬಗ್ಗೆಯೇ ಏಕೆ ಮಾತನಾಡುತ್ತೇವೆ? ನಮ್ಮ ಇತಿಹಾಸವು ನಮ್ಮ ಸಂಸ್ಕೃತಿಯ ಬಗ್ಗೆ ಇರಬೇಕು. ಅದು ವೇದಗಳ ಬಗ್ಗೆ, ರಜಪೂತ ರಾಜರ ಬಗ್ಗೆ, ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮತ್ತು ಉಳಿದ ಎಲ್ಲರ ಬಗ್ಗೆ ಇರಬೇಕು. ಪ್ರತಿಯೊಂದು ರಾಜ್ಯದಲ್ಲಿನ ಪ್ರತಿಯೊಬ್ಬ ನಾಯಕನ ಬಗ್ಗೆ ಚರ್ಚೆಯಾಗಬೇಕು ಎಂದು ನಟ ಸುನಿಲ್ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೆಟ್ಟಿಯವರು ಮುಂದುವರಿದು ಮಾತನಾಡುತ್ತಾ, ಸೋಮನಾಥ ದೇವಾಲಯದ ಬಗ್ಗೆ ನನ್ನ ಭಾವನೆಗಳು ಅತ್ಯಂತ ತೀವ್ರವಾಗಿವೆ. ದೇವಾಲಯವು ಹಲವಾರು ಬಾರಿ ಲೂಟಿಗೊಳಗಾದರೂ, ಅದು ಇಂದು ಅಚಲವಾಗಿ ನಿಂತಿದೆ ಎಂದು ಹೇಳಿದರು.
೧. ನಟ ಸುನಿಲ್ ಶೆಟ್ಟಿ ಅವರು ೨೦೨೫ ರಲ್ಲಿ ತೆರೆಕಂಡ ‘ಕೇಸರಿ ವೀರ್’ ಎಂಬ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರವು ಗುಜರಾತಿನ ಸೋಮನಾಥ ದೇವಾಲಯದ ಮೇಲೆ ನಡೆದ ಸತತ ಆಕ್ರಮಣ ಮತ್ತು ಧ್ವಂಸದ ಘಟನೆಗಳ ಆಧಾರಿತವಾಗಿತ್ತು; ಆದರೆ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಲಭಿಸಲಿಲ್ಲ. ಸುನಿಲ್ ಶೆಟ್ಟಿ ಅವರು ಚಿತ್ರವು ಏಕೆ ವಿಫಲವಾಯಿತು ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸುವಾಗ ಮೇಲಿನ ವಿಚಾರಗಳನ್ನು ಹಂಚಿಕೊಂಡರು.
೨. ಸುನಿಲ್ ಶೆಟ್ಟಿ ಅವರು ಮುಂದುವರಿದು ಮಾತನಾಡುತ್ತಾ, ಚಿತ್ರವನ್ನು ನಿರ್ಮಿಸುವ ಮೊದಲು ದೊಡ್ಡ ಮಟ್ಟದ ಅಭ್ಯಾಸವನ್ನು ಮಾಡಲಾಗಿತ್ತು; ಆದರೆ ದುರದೃಷ್ಟವಶಾತ ಚಿತ್ರವು ಓಡಲಿಲ್ಲ. ವಿತರಣೆಯು ಒಂದು ಪ್ರಮುಖ ಅಂಶವಾಯಿತು. ಚಿತ್ರಮಂದಿರಗಳು ಲಭ್ಯವಾಗಲಿಲ್ಲ. ನಿರ್ಮಾಪಕರಿಗೂ ದೊಡ್ಡ ಮಟ್ಟದ ನಷ್ಟ ಉಂಟಾಯಿತು; ಏಕೆಂದರೆ ಅವರೇ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದ್ದರು ಮತ್ತು ಆ ಪದ್ಧತಿಯು ಪರಿಣಾಮಕಾರಿಯಾಗಲಿಲ್ಲ. ಒಂದು ಉತ್ತಮ ಚಿತ್ರವು ವ್ಯರ್ಥವಾಯಿತು ಎಂದು ಅವರು ನಮೂದಿಸಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”