೧ ಜುಲೈಯಿಂದ ‘ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ ಸ್ಥಾಪನೆ

ಡೆಹ್ರಾಡೂನ (ಉತ್ತರಾಖಂಡ) – ಉತ್ತರಾಖಂಡದ ಭಾಜಪ ಸರಕಾರವು ಮದರಸಾ ಮಂಡಳಿಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಮದರಸಾ ಮಂಡಳಿಯ ಬದಲಿಗೆ ಈಗ ಹೊಸ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ರಾಜ್ಯಪಾಲರ ಒಪ್ಪಿಗೆ ದೊರೆತ ನಂತರ ‘ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ವನ್ನು ರಚಿಸಲಾಗಿದ್ದು, ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ.
Uttarakhand Abolishes Madrasa Board! 🚨
Starting July 1st, a new Minority Education Authority will be established in the state. 🏫
It is time to scrap Madrasa Boards and stop religion-based education nationwide.
Streamlining our education system is a vital step toward… pic.twitter.com/Dsg6f5HpDA
— Sanatan Prabhat (@SanatanPrabhat) February 4, 2026
ಅಧಿಸೂಚನೆಯ ಪ್ರಕಾರ, ಅಧ್ಯಕ್ಷರು ಸೇರಿದಂತೆ ಒಟ್ಟು ೧೧ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ರೂರ್ಕಿಯ ಬಿ.ಎಸ್.ಎಂ. ಪಿಜಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಸುರ್ಜಿತ್ ಸಿಂಗ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಪ್ರಾಧಿಕಾರವು ಇನ್ನು ಮುಂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಬಗ್ಗೆ ನೀತಿಗಳನ್ನು ನಿರ್ಧರಿಸಲಿದೆ. ಮುಖ್ಯವಾಗಿ ಮದರಸಾ ಸಂಸ್ಥೆಗಳ ನಿರ್ವಹಣೆಯನ್ನು ಈ ಪ್ರಾಧಿಕಾರವೇ ನೋಡಿಕೊಳ್ಳಲಿದೆ. ಅಲ್ಲದೆ, ಶಿಕ್ಷಣದ ಸ್ವರೂಪ ಮತ್ತು ಪಠ್ಯಕ್ರಮವನ್ನು ಕೂಡ ಪ್ರಾಧಿಕಾರವೇ ನಿರ್ಧರಿಸಲಿದೆ. ಈ ಹೊಸ ಪ್ರಾಧಿಕಾರವು ೧ ಜುಲೈ ೨೦೨೬ ರಿಂದ ಅಸ್ತಿತ್ವಕ್ಕೆ ಬರಲಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಾತನಾಡಿ, ಈಗ ಉತ್ತರಾಖಂಡ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರವು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ. ಮದರಸಾ ಮಂಡಳಿಯನ್ನು ರದ್ದುಗೊಳಿಸುವ ಸರಕಾರದ ನಿರ್ಧಾರದ ನಂತರ ಪ್ರಾಧಿಕಾರ ಸ್ಥಾಪನೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಎಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ‘ಉತ್ತರಾಖಂಡ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್’ನಿಂದ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ, ಎಂದು ತಿಳಿಸಿದರು.
ಸಂಪಾದಕೀಯ ನಿಲುವುದೇಶಾದ್ಯಂತ ಮದರಸಾ ಮಂಡಳಿಗಳನ್ನು ರದ್ದುಗೊಳಿಸಿ, ಧರ್ಮದ ಹೆಸರಿನಲ್ಲಿ ಶಿಕ್ಷಣ ನೀಡುವುದನ್ನು ನಿಲ್ಲಿಸಬೇಕು. ಇದರಿಂದ ದೇಶದಲ್ಲಿನ ಜಿಹಾದಿ ಕೃತ್ಯಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಸಹಾಯವಾಗುತ್ತದೆ ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ