ಭಾರತೀಯ ಸೇನೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ‘ISI’ ಗೆ ರವಾನಿಸಿದ ಆರೋಪ!
(ISI: ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ – ಪಾಕಿಸ್ತಾನದ ಗುಪ್ತಚರ ಸಂಸ್ಥೆ)

ಪೋಖರಣ್ (ರಾಜಸ್ಥಾನ) – ಪಾಕಿಸ್ತಾನದ ಗಡಿಭಾಗದಲ್ಲಿರುವ ಜೈಸಲ್ಮೇರ್ ಜಿಲ್ಲೆಯ ಪೋಖರಣ್ ಪ್ರದೇಶದಲ್ಲಿ ‘ISI’ ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸ್ಥಳೀಯ ಯುವಕನೊಬ್ಬನನ್ನು ರಾಜಸ್ಥಾನ ಪೊಲೀಸರ ಗುಪ್ತಚರ ವಿಭಾಗವು ಇತ್ತೀಚೆಗೆ ಬಂಧಿಸಿದೆ. ಆರೋಪಿಯು ಭಾರತೀಯ ಸೇನೆಗೆ ಸಂಬಂಧಿಸಿದ ಯುದ್ಧತಂತ್ರದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದನು.
1. ರಾಜ್ಯದಲ್ಲಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಲಾಗಿದೆ ಎಂದು ಗುಪ್ತಚರ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪ್ರಫುಲ್ ಕುಮಾರ್ ತಿಳಿಸಿದ್ದಾರೆ.
2. ಇದೇ ಅವಧಿಯಲ್ಲಿ ಪೋಖರಣ್ ತಾಲ್ಲೂಕಿನ ನೆಡಾನ್ ಗ್ರಾಮದ ಝಬರಾರಾಮ್ (28 ವರ್ಷ) ಎಂಬಾತನ ಚಟುವಟಿಕೆಗಳು ಸಂದೇಹಾಸ್ಪದವಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆರೋಪಿಯು ನಿರಂತರವಾಗಿ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ (ಸಂಪರ್ಕ ಅಧಿಕಾರಿಗಳು) ಜೊತೆ ಸಂಪರ್ಕದಲ್ಲಿದ್ದನು.
3. ತನಿಖೆ ಮತ್ತು ಮೊಬೈಲ್ ಫೋನ್‌ನ ತಾಂತ್ರಿಕ ಪರೀಕ್ಷೆಯ ಸಮಯದಲ್ಲಿ ಗಂಭೀರ ವಿಷಯಗಳು ಬೆಳಕಿಗೆ ಬಂದಿವೆ. ಪಾಕಿಸ್ತಾನಿ ಸಂಸ್ಥೆಗಳು ಆತನನ್ನು ‘ಹನಿ ಟ್ರ್ಯಾಪ್’ (ಮಹಿಳೆಯರ ಮೂಲಕ ವ್ಯಕ್ತಿಯನ್ನು ಬಲೆಗೆ ಬೀಳಿಸುವುದು) ಮೂಲಕ ಸಿಲುಕಿಸಿ ಹಣದ ಆಮಿಷ ಒಡ್ಡಿದ್ದವು. ಈ ಆಮಿಷಕ್ಕೆ ಒಳಗಾದ ಆರೋಪಿಯು ಭಾರತೀಯ ಸೇನೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದನು.
4. ಪೊಲೀಸರು ಝಬರಾರಾಮ್‌ನನ್ನು ಜೈಪುರದ ಕೇಂದ್ರ ತನಿಖಾ ಕೇಂದ್ರಕ್ಕೆ ಕರೆತಂದಿದ್ದಾರೆ. ರಾಜಸ್ಥಾನ ಪೊಲೀಸ್, ಸೇನಾ ಗುಪ್ತಚರ ಸಂಸ್ಥೆ ಮತ್ತು ಇತರ ಭದ್ರತಾ ಸಂಸ್ಥೆಗಳು ಜಂಟಿಯಾಗಿ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿವೆ. ಅಪರಾಧ ಸಾಬೀತಾದ ನಂತರ, ರಾಜಸ್ಥಾನ ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ದೇಶದ್ರೋಹಿಗಳ ವಿರುದ್ಧ ತ್ವರಿತ ಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಪ್ರಯತ್ನಿಸುವುದು ಅತ್ಯಗತ್ಯ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ