
ಕರ್ಣಾವತಿ (ಗುಜರಾತ್) – ಇಸ್ಲಾಂ ಮತ್ತು ಪೈಗಂಬರ್ ವಿರುದ್ಧ ಮಾತನಾಡುವ 7 ಜನರ ಪಟ್ಟಿಯನ್ನು ಸಿದ್ಧಪಡಿಸಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ATS) ಫೈಜಾನ್ ಶೇಕ್ ಎಂಬ ವ್ಯಕ್ತಿಯನ್ನು ಬಂಧಿಸಿದೆ. ಫೈಜಾನ್ ಮೂಲತಃ ಉತ್ತರ ಪ್ರದೇಶದ ರಾಂಪುರದ ನಿವಾಸಿಯಾಗಿದ್ದು, ನವಸಾರಿಯಲ್ಲಿ ದರ್ಜಿಯಾಗಿ ಕೆಲಸ ಮಾಡುತ್ತಿದ್ದನು.
ಭಯೋತ್ಪಾದನಾ ನಿರೋಧಕ ದಳದ ತನಿಖೆಯಲ್ಲಿ, ಫೈಜಾನ್ ಶೇಕ್ ಮೇಲೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಅಲ್-ಖೈದಾದ ಮತಾಂಧ ಸಿದ್ಧಾಂತಗಳ ಪ್ರಭಾವವಿರುವುದು ಕಂಡುಬಂದಿದೆ. ಫೈಜಾನ್, ಪೈಗಂಬರ್ ವಿರುದ್ಧ ಹೇಳಿಕೆ ನೀಡುವವರ ಮಾಹಿತಿಯನ್ನು ಕಲೆ ಹಾಕುತ್ತಿದ್ದನೆಂದು ವಿಚಾರಣೆಯ ವೇಳೆ ತಿಳಿದುಬಂದಿದೆ. ಈತ ದೆಹಲಿ ಮತ್ತು ಉತ್ತರ ಪ್ರದೇಶದ ಜನರ ಪಟ್ಟಿಯನ್ನು ಸಿದ್ಧಪಡಿಸಿದ್ದನು. ಹತ್ಯೆಗಾಗಿ ತಾನು ಬಟ್ಟೆ ಹೊಲಿದು ಸಂಪಾದಿಸಿದ ಹಣದಿಂದ ‘ರಿವಾಲ್ವರ್’ ಕೂಡ ಖರೀದಿಸಿದ್ದನು. ಆದರೆ ಭಯೋತ್ಪಾದನಾ ನಿರೋಧಕ ದಳವು ಅವನ ಯೋಜನೆ ಕಾರ್ಯರೂಪಕ್ಕೆ ಬರುವ ಮೊದಲೇ ಅವನನ್ನು ಸೆರೆಹಿಡಿದಿದೆ. ಅವನಿಂದ ಉರ್ದು ಮತ್ತು ಅರೇಬಿಕ್ ಭಾಷೆಯಲ್ಲಿ ಬರೆಯಲಾದ 29 ಪುಟಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ.
ಫೈಜಾನ್ ಒಟ್ಟು 7 ಜನರ ಹೆಸರಿನ ಪಟ್ಟಿಯನ್ನು ಸಿದ್ಧಪಡಿಸಿದ್ದನು. ಇದರಲ್ಲಿ ಅಭಿಷೇಕ್ ಠಾಕೂರ್, ದಕ್ಷ್ ಚೌಧರಿ, ಗೌರವ್ ರಜಪೂತ್, ಡಾ. ಪ್ರಕಾಶ್, ಯುಧಿ ರಾಣಾ, ಅಕ್ಕು ಪಂಡಿತ್ ಮತ್ತು ವಿಕ್ರಾಂತ್ ಅವರ ಹೆಸರುಗಳಿವೆ.
ಸಂಪಾದಕೀಯ ನಿಲುವುಮುಸ್ಲಿಮರು ತಮ್ಮ ಧರ್ಮದ ಬಗ್ಗೆ ಜಾಗರೂಕರಾಗಿರುವುದರಿಂದ, ಯಾರಾದರೂ ತಮ್ಮ ಧರ್ಮವನ್ನು ಅವಮಾನಿಸಿದರೆ ಅವರಿಗೆ ಪಾಠ ಕಲಿಸಲು ಅವರು ಯಾವುದೇ ಹಂತಕ್ಕೆ ಹೋಗಲು ಸಿದ್ಧರಿರುತ್ತಾರೆ, ಆದರೆ ಹಿಂದೂಗಳು ತಾವೇ ತಮ್ಮ ಧರ್ಮವನ್ನು ಅವಮಾನಿಸಿಕೊಳ್ಳುತ್ತಾರೆ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!