ಉತ್ತರಾಖಂಡ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ ಶಮ್ಸ್ ಅವರ ಹೇಳಿಕೆ

ಡೆಹ್ರಾಡೂನ (ಉತ್ತರಾಖಂಡ) – ಯಾವುದೇ ಧಾರ್ಮಿಕಸ್ಥಳದ ಮೂಲ ಉದ್ದೇಶ ಶ್ರದ್ಧೆ ಮತ್ತು ಭಕ್ತಿಯಾಗಿರುತ್ತದೆ. ಎಲ್ಲಿ ಒಬ್ಬ ವ್ಯಕ್ತಿಗೆ ಶ್ರದ್ಧೆ ಇರುವುದಿಲ್ಲವೋ, ಅಲ್ಲಿಗೆ ಹೋಗುವುದರಿಂದ ಉದ್ದೇಶವೂ ಪೂರ್ಣಗೊಳ್ಳುವುದಿಲ್ಲ ಮತ್ತು ಸಮಾಜಕ್ಕೆ ಸಕಾರಾತ್ಮಕ ಸಂದೇಶವೂ ಹೋಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಅನಗತ್ಯ ಸಂಘರ್ಷದ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಆದ್ದರಿಂದ ಯಾರ ಶ್ರದ್ಧೆಯು ಸನಾತನ ಧರ್ಮದ ತೀರ್ಥಕ್ಷೇತ್ರಗಳೊಂದಿಗೆ ಬೆಸೆದುಕೊಂಡಿಲ್ಲವೋ, ಅಂತಹವರ ಪ್ರವೇಶವನ್ನು ಅಲ್ಲಿ ನಿಷೇಧಿಸುವುದು ಸಂಪೂರ್ಣವಾಗಿ ಸರಿಯಾಗಿದೆ ಎಂದು ಉತ್ತರಾಖಂಡ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ ಶಮ್ಸ್ ಹೇಳಿದ್ದಾರೆ. ಚಾರಧಾಮ ಯಾತ್ರೆಯಲ್ಲಿ ಅಹಿಂದೂಗಳ ಪ್ರವೇಶಕ್ಕೆ ನಿಷೇಧ ಹೇರುವ ಪ್ರಸ್ತಾವನೆಯ ಕುರಿತು ಅವರು ಮಾತನಾಡುತ್ತಿದ್ದರು. ಬದರಿನಾಥ-ಕೇದಾರನಾಥ ಮಂದಿರ ಸಮಿತಿಯ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಶಮ್ಸ್ ಅವರ ಈ ಹೇಳಿಕೆ ಮಹತ್ವದ್ದಾಗಿದೆ.
ಯಾತ್ರೆಯಲ್ಲಿ ಅಹಿತಕರ ಘಟನೆ ನಡೆದರೆ ದೇಶದ ವಾತಾವರಣ ಹದಗೆಡಬಹುದು!
ಶಮ್ಸ್ ಎಚ್ಚರಿಕೆ ನೀಡುತ್ತಾ, ಪ್ರಸ್ತುತ ಕಾಲದಲ್ಲಿ ದೇಶದ ವಿರುದ್ಧ ನಿರಂತರವಾಗಿ ಪಿತೂರಿಗಳನ್ನು ನಡೆಸಲಾಗುತ್ತಿದೆ. ಪಿತೂರಿ ನಡೆಸುವವರು ಚಾರಧಾಮ ಯಾತ್ರೆಯಂತಹ ದೊಡ್ಡ ಮತ್ತು ಶಾಂತಿಯುತ ಆಯೋಜನೆಗಳು ಯಶಸ್ವಿಯಾಗುವುದನ್ನು ಎಂದಿಗೂ ಬಯಸುವುದಿಲ್ಲ. ಯಾತ್ರೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ, ಅದಕ್ಕೆ ಅಹಿಂದೂಗಳನ್ನು ಹೊಣೆಯಾಗಿಸಬಹುದು, ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗಬಹುದು ಎಂದು ಅವರು ಹೇಳಿದರು. (ಒಂದು ವೇಳೆ ಅಹಿಂದೂಗಳೇ ಅಂತಹ ಕೃತ್ಯಗಳನ್ನು ಮಾಡಿದ್ದರೆ, ಅವರನ್ನು ಯಾಕೆ ದೋಷಿಗಳೆಂದು ಪರಿಗಣಿಸಬಾರದು? – ಸಂಪಾದಕರು)
ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವುದು ಅವಶ್ಯಕ!
ಶಮ್ಸ್ ತಮ್ಮ ಮಾತನ್ನು ಮುಂದುವರಿಸಿ, ಅಹಿಂದೂಗಳಿಗೆ ಪ್ರವೇಶ ನಿಷೇಧದ ನಿರ್ಧಾರವು ಯಾವುದೇ ಸಮುದಾಯದ ವಿರುದ್ಧವಾಗಿಲ್ಲ, ಬದಲಾಗಿ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ಅವಶ್ಯಕವಾಗಿದೆ. ಇಂತಹ ನಿರ್ಧಾರಗಳನ್ನು ಭಾವನೆಗಳಿಗೆ ಒಳಗಾಗಿ ತೆಗೆದುಕೊಳ್ಳಬಾರದು, ಸಾಮಾಜಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಪ್ರಸ್ತಾವನೆಯಲ್ಲಿ ಏನಿದೆ?
೧. ಚಾರಧಾಮ ಸೇರಿದಂತೆ ೫೦ ಮಂದಿರಗಳಲ್ಲಿ ಅಹಿಂದೂಗಳಿಗೆ ಪ್ರವೇಶ ನಿಷೇಧ:
ಉತ್ತರಾಖಂಡದ ಚಾರಧಾಮಗಳಾದ ಬದರಿನಾಥ, ಕೇದರಾನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಸೇರಿದಂತೆ ಮಂದಿರ ಸಮಿತಿಗಳ ವ್ಯಾಪ್ತಿಗೆ ಬರುವ ಒಟ್ಟು ೫೦ ಮಂದಿರಗಳಲ್ಲಿ ಅಹಿಂದೂಗಳಿಗೆ ಪ್ರವೇಶ ನಿಷೇಧವು ಶೀಘ್ರದಲ್ಲೇ ಜಾರಿಗೆ ಬರಬಹುದು. ಈ ಬಗ್ಗೆ ಸರಕಾರ ಮತ್ತು ಮಂದಿರ ಸಮಿತಿಗಳ ನಡುವೆ ಸಹಮತಿ ಮೂಡಿದೆ.
೨. ಸಿಖ್, ಜೈನ ಮತ್ತು ಬೌದ್ಧ ಧರ್ಮದವರಿಗೆ ವಿನಾಯಿತಿ:
ಈ ನಿಷೇಧವು ಸಿಖ್, ಜೈನ ಮತ್ತು ಬೌದ್ಧ ಧರ್ಮದ ಅನುಯಾಯಿಗಳಿಗೆ ಅನ್ವಯಿಸುವುದಿಲ್ಲ. ಈ ಧರ್ಮಗಳನ್ನು ಹಿಂದೂ ಪರಂಪರೆಯ ಶಾಖೆಗಳೆಂದೇ ಪರಿಗಣಿಸಲಾಗುತ್ತದೆ ಎಂಬುದು ಮಂದಿರ ಸಮಿತಿಗಳ ಅಭಿಪ್ರಾಯವಾಗಿದೆ.
೩. ಗಂಗೋತ್ರಿ ಧಾಮದಲ್ಲಿ ಒಮ್ಮತದ ನಿರ್ಧಾರ:
ಗಂಗೋತ್ರಿ ಮಂದಿರ ಸಮಿತಿಯು ಸಭೆಯಲ್ಲಿ ಒಮ್ಮತದಿಂದ ಮಂದಿರ ಮತ್ತು ಗಂಗಾ ಘಾಟಗಳಲ್ಲಿ ಅಹಿಂದೂಗಳ ಪ್ರವೇಶವನ್ನು ನಿಷೇಧಿಸಲು ನಿರ್ಧರಿಸಿದೆ. ಸಮಿತಿಯ ಕಾರ್ಯದರ್ಶಿ ಸುರೇಶ ಸೆಮವಾಲ್ ಅವರು ಮಾತನಾಡುತ್ತಾ, ಸಿಖ್ ಅನುಯಾಯಿಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ ಮತ್ತು ಶೀಘ್ರದಲ್ಲೇ ಇದರ ಅನುಷ್ಠಾನ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಕಾಯ್ದೆಗಳ ಅಧ್ಯಯನ ನಡೆಯುತ್ತಿದೆ! – ಮುಖ್ಯಮಂತ್ರಿ ಧಾಮಿ

ಈ ನಿಷೇಧದ ಕುರಿತು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರತಿಕ್ರಿಯಿಸಿ, ಧಾಮಗಳ ನಿರ್ವಹಣೆಗೆ ಸಂಬಂಧಿಸಿದ ಧಾರ್ಮಿಕ ಸಂಸ್ಥೆಗಳು, ತೀರ್ಥ ಪುರೋಹಿತರು ಮತ್ತು ಸಂತ ಸಮಾಜದ ಅಭಿಪ್ರಾಯಕ್ಕೆ ಅನುಗುಣವಾಗಿ ಸರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಈ ಸ್ಥಳಗಳಿಗಾಗಿ ಈಗಾಗಲೇ ರೂಪಿಸಲಾದ ಕಾಯ್ದೆಗಳನ್ನು ಅಧ್ಯಯನ ಮಾಡಲಾಗುತ್ತಿದೆ ಮತ್ತು ಅದರ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ