ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ಕ್ರಮ ಕೈಗೊಳ್ಳಲಿ: ಸಂಜಯ ರಾವುತ

ಮುಂಬಯಿ – ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲಿ ಇತ್ತೀಚೆಗೆ ಇಬ್ಬರು ಹಿಂದೂಗಳನ್ನು ಜೀವಂತವಾಗಿ ಸುಡಲಾಗಿದೆ. ಕಳೆದ 4-5 ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗಳು ಸತತವಾಗಿ ನಡೆಯುತ್ತಲೇ ಇವೆ. ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಹಿಂದೂಗಳ ಮನೆಗಳ ಮೇಲೆ ಆಕ್ರಮಣಗಳು ನಡೆಯುತ್ತಿವೆ ಮತ್ತು ಹಿಂದೂಗಳನ್ನು ಸುಡಲಾಗುತ್ತಿದೆ. ಕೇವಲ ಶಾಂತಿಯ ಸಂದೇಶವನ್ನು ನೀಡುವ ಮೂಲಕ ಬಾಂಗ್ಲಾದೇಶದ ಹಿಂದೂಗಳ ಹತ್ಯೆಗಳು ನಿಲ್ಲುತ್ತವೆಯೇ ಅಥವಾ ಇಂದಿರಾ ಗಾಂಧಿಯವರಂತೆ ಸೈನಿಕ ಕಾರ್ಯಾಚರಣೆ ನಡೆಸುವ ಮೂಲಕ ಅಲ್ಲಿ ಶಾಂತಿ ನೆಲೆಸುತ್ತದೆ ಎಂಬುದನ್ನು ಕೇಂದ್ರ ಸರಕಾರವು ವಿಚಾರ ಮಾಡಬೇಕೆಂದು ಉದ್ಧವ ಬಾಳಾಸಾಹೇಬ ಠಾಕ್ರೆ ಪಕ್ಷದ ಸಂಸದರಾದ ಸಂಜಯ ರಾವುತ್ ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾವುತ ಅವರು, ನಮ್ಮ ದೇಶವು ಖಂಡಿತವಾಗಿಯೂ ಶಾಂತಿಪ್ರಿಯವಾಗಿದೆ. ನಾವು ಎಂದಿಗೂ ಯಾರ ಮೇಲೆಯೂ ಸ್ವತಃ ಆಕ್ರಮಣ ಮಾಡುವುದಿಲ್ಲ; ಆದರೆ ಬಾಂಗ್ಲಾದೇಶದಲ್ಲಿ ನೂರಾರು ಹಿಂದೂಗಳ ಹತ್ಯೆಗೀಡಾಗುತ್ತಿದ್ದರೆ, ಶಾಂತಿಯ ಸಂದೇಶಕ್ಕೆ ಯಾವುದೇ ಅರ್ಥವಿರುವುದಿಲ್ಲ. ಇದರರ್ಥ ‘ಯುದ್ಧ ಮಾಡಿ’ ಎಂದಲ್ಲ; ಆದರೆ ಬಾಂಗ್ಲಾದೇಶದ ಹಿಂದೂಗಳ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲೇಬೇಕಾಗಿದೆ. ಆದ್ದರಿಂದ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳು ಕೇವಲ ಶಾಂತಿಯ ಸಂದೇಶಗಳನ್ನು ನೀಡಿದರೆ ಪ್ರಯೋಜನವಿಲ್ಲ. ಭಾರತದಲ್ಲಿಯೂ ಎಲ್ಲಾ ಕ್ಷೇತ್ರಗಳಲ್ಲಿ ಅಶಾಂತಿ ಮತ್ತು ಅಸ್ಥಿರತೆ ಇದೆ. ಆದ್ದರಿಂದ ಯಾವಾಗ ಶಾಂತಿಯ ಸಂದೇಶವನ್ನು ನೀಡಲಾಗುತ್ತದೆಯೋ, ಆಗ ಭಾರತದಲ್ಲಿ ಅಶಾಂತಿಗೆ ಕಾರಣ ಯಾರು? ಅದಕ್ಕೆ ಜವಾಬ್ದಾರರು ಯಾರು? ಎಂಬುದನ್ನು ಜನರು ಖಂಡಿತವಾಗಿಯೂ ಯೋಚಿಸುತ್ತಾರೆ. ಜಗತ್ತಿಗೆ ಶಾಂತಿಯ ಸಂದೇಶ ನೀಡುವಾಗ ರಾಷ್ಟ್ರಪತಿಗಳು ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದರ ಕಡೆಗೂ ಗಮನ ಹರಿಸುವುದು ಅವಶ್ಯಕವಾಗಿದೆ ಎಂದು ಅವರು ಹೇಳಿದರು.