ಭಾರತದಿಂದ ಪೋಲೆಂಡ್ ಉಪಪ್ರಧಾನ ಮಂತ್ರಿಗಳಿಗೆ ಖಡಕ್ ಎಚ್ಚರಿಕೆ!

ನವದೆಹಲಿ – ಭಯೋತ್ಪಾದನೆಯ ವಿರುದ್ಧ ‘ಶೂನ್ಯ ಸಹನೆ’ (ಜೀರೋ ಟಾಲರೆನ್ಸ್) ಹೊಂದಿರಬೇಕು. ಭಾರತದ ನೆರೆಹೊರೆಯಲ್ಲಿ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಬಾರದು ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಅವರು ಪೋಲೆಂಡ್ನ ವಿದೇಶಾಂಗ ಸಚಿವ ಹಾಗೂ ಉಪಪ್ರಧಾನ ಮಂತ್ರಿ ರಾಡೋಸ್ಲಾವ್ ಸಿಕೋರ್ಸ್ಕಿ ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಖಂಡತುಂಡವಾಗಿ ತಿಳಿಸಿದ್ದಾರೆ.
ಸಿಕೋರ್ಸ್ಕಿ ಅವರು ಅಕ್ಟೋಬರ್ 2025 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ್ ಅವರೊಂದಿಗೆ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಬಗ್ಗೆ ಉಲ್ಲೇಖಿಸಲಾಗಿತ್ತು, ಇದನ್ನು ಭಾರತವು ತೀವ್ರವಾಗಿ ಆಕ್ಷೇಪಿಸಿತ್ತು.
ಉಕ್ರೇನ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಮೇಲೆ ಮಾಡಲಾಗುತ್ತಿರುವ ಏಕಪಕ್ಷೀಯ ಮತ್ತು ಅಯೋಗ್ಯ ಟೀಕೆಗಳ ಬಗ್ಗೆಯೂ ಡಾ. ಜೈಶಂಕರರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ರಷ್ಯಾದೊಂದಿಗೆ ಭಾರತ ಹೊಂದಿರುವ ಇಂಧನ ಸಂಬಂಧಗಳ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಭಾರತವನ್ನು ಟೀಕಿಸುತ್ತಿವೆ. ಈ ವಿಷಯದಲ್ಲಿ ಡಾ. ಜೈಶಂಕರ ಅವರ ನಿಲುವನ್ನು ಒಪ್ಪಿಕೊಂಡ ರಾಡೋಸ್ಲಾವ್ ಸಿಕೋರ್ಸ್ಕಿ ಅವರು, ಉಕ್ರೇನ್ ವಿಷಯದಲ್ಲಿ ಭಾರತದ ಮೇಲಿನ ಟೀಕೆಗಳು ಅಯೋಗ್ಯ ಮತ್ತು ಏಕಪಕ್ಷೀಯವಾಗಿವೆ ಎಂದು ಸಮ್ಮತಿಸಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ